Advertisement

Economy: ನಿಯಂತ್ರಣದತ್ತ ಹಣದುಬ್ಬರ, ಪ್ರಗತಿಯತ್ತ ಆರ್ಥಿಕತೆ

12:23 AM May 29, 2023 | Team Udayavani |

ದೇಶದ ಹಣಕಾಸು ವಲಯಕ್ಕೆ ಪ್ರಸಕ್ತ ಆರ್ಥಿಕ ವರ್ಷದ ಪ್ರಥಮ ತಿಂಗಳು ಶುಭ ಸಮಾಚಾರವನ್ನು ನೀಡಿದೆ. ಚಿಲ್ಲರೆ ಹಣದುಬ್ಬರವು ಎಪ್ರಿಲ್‌ ತಿಂಗಳಿನಲ್ಲಿ ಕಳೆದ 18 ತಿಂಗಳ ಕನಿಷ್ಠ ಮಟ್ಟವಾದ ಶೇ. 4.7ಕ್ಕೆ ಇಳಿದಿದೆ. ದೀರ್ಘಾವಧಿಯ ಅನಂತರ ಚಿಲ್ಲರೆ ಹಣದುಬ್ಬರ ಶೇ. 5ಕ್ಕಿಂತ ಕಡಿಮೆ ಯಾಗಿ ರುವುದು ಹಣಕಾಸು ನೀತಿಯ ವಿಚಾರದಲ್ಲಿ ಆರ್‌ಬಿಐ ಕೈಗೊಂಡಿರುವ ಕ್ರಮಗಳು ಸರಿದಾರಿಯಲ್ಲಿರುವುದನ್ನು ಸೂಚಿಸುತ್ತದೆ. ಹಣದುಬ್ಬರ ಇಳಿಕೆಯಾಗು ತ್ತಿರುವುದು ಭಾರತದ ಆರ್ಥಿಕತೆಯ ಸಕಾರಾತ್ಮಕ ಬೆಳವಣಿಗೆ ಯಾಗಿದೆ. ಅದಲ್ಲದೆ ಹಣದುಬ್ಬರ ದಿಂದ ತೊಂದರೆಗೀಡಾಗಿದ್ದ ಜನಸಾಮಾನ್ಯರು ಕೊಂಚ ನಿರಾಳರಾಗಿ¨ªಾರೆ. ಪ್ರಮುಖ ವಾಗಿ ಆಹಾರ, ಆಹಾರೇತರ ಉತ್ಪನ್ನ ಗಳು, ಇಂಧನ, ಜವುಳಿ, ಲೋಹ ಇತ್ಯಾದಿ ಗಳ ಬೆಲೆ ಇಳಿಕೆಯ ಪರಿ ಣಾ ಮದಿಂದ ಎಪ್ರಿಲ್‌ನಲ್ಲಿ ಹಣದುಬ್ಬರ ಪ್ರಮಾಣ ಕಡಿಮೆಯಾಗಿದೆ. ಇದೀಗ ಸಗಟು ಹಣದುಬ್ಬರದ ಸತತ 11ನೇ ತಿಂಗಳು ಇಳಿಕೆಯ ಹಾದಿಯನ್ನು ಕಂಡು ಎಪ್ರಿಲ್‌ನಲ್ಲಿ ಶೇ (-) 0.92 ಕ್ಕೆ ಇಳಿಕೆಯಾಗಿದೆ. ಇದು ಮೂರು ವರ್ಷಗಳಲ್ಲಿ ಮೊದಲ ಬಾರಿಗೆ ಹಣದುಬ್ಬರ ಇಳಿತದ ವಲಯಕ್ಕೆ ಇಳಿದಿದೆ. ಸಗಟು ಹಣದುಬ್ಬರ ನಕಾರಾತ್ಮಕ ಮಟ್ಟ ತಲುಪಿದರೆ ಅದನ್ನು ತಾಂತ್ರಿಕವಾಗಿ ಹಣದುಬ್ಬರ ವಿಳಿತವೆಂದು ಕರೆಯಲಾಗುತ್ತದೆ. ಇದು ಚಿಲ್ಲರೆ ಬೆಲೆ ಗಳನ್ನು ಮತ್ತಷ್ಟು ಇಳಿಸುವ ಮತ್ತು ಬಡ್ಡಿದರಗಳಲ್ಲಿನ ಕಡಿತದ ನಿರೀಕ್ಷೆಯನ್ನು ಹೆಚ್ಚಿಸುವ ಭರವಸೆಯನ್ನು ಉತ್ತೇಜಿಸಿದೆ.

Advertisement

ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣ ದುಬ್ಬರವು ಶೇ. 5.3 ಇರಲಿದೆಯೆಂದು ಮೊದಲು ಅಂದಾಜಿಸಿದ್ದ ಆರ್‌ಬಿಐ ಪರಿಸ್ಥಿತಿ ಸುಧಾರಣೆಯಾದುದರಿಂದ ಇದೀಗ ಶೇ. 5.2ಕ್ಕೆ ತಗ್ಗಿಸಿದೆ. ಮುಂದಿನ ಮುಂಗಾರು ಮಳೆಯು ತೃಪ್ತಿ ದಾಯಕವಾಗಿದ್ದರೆ ಹಣ ದುಬ್ಬರ ನಿಯಂ ತ್ರಣಕ್ಕೆ ಬರಲಿದೆ. ಕಳೆದ 3 ತಿಂಗಳುಗಳಿಂದ ಹಣದುಬ್ಬರ ದರದಲ್ಲಿ ಇಳಿಕೆ ಕಂಡುಬರುತ್ತಿದೆ. 2033 ಮಾರ್ಚ್‌ನಲ್ಲಿ ಶೇ. 5.66ರಷ್ಟಿತ್ತು. ಎಪ್ರಿಲ್‌ನಲ್ಲಿ ಆಹಾರ ಹಣ ದುಬ್ಬರವು ಶೇ. 3.84ಕ್ಕೆ ಇಳಿಕೆ ಯಾಗಿ ರುವುದು ಹಣದುಬ್ಬರ ಇಳಿಕೆಗೆ ಪ್ರಮುಖ ಕಾರಣ ವಾಗಿದೆ. ಕಡಿಮೆ ಮತ್ತು ಸುಸ್ಥಿರ ಹಣ ದುಬ್ಬರವು ಸದೃಢ ಆರ್ಥಿಕ ಬೆಳ ವಣಿಗೆಯ ಕಾರ್ಯಕ್ಷಮತೆಗೆ ಪೂರಕ ವಾಗುತ್ತದೆ.

ಹಣದುಬ್ಬರ ನಿಯಂತ್ರಣಕ್ಕಾಗಿ ಆರ್‌ಬಿಐ ತನ್ನ ಎಂಪಿಸಿ ಸಭೆಗಳಲ್ಲಿ ಸತತ ಆರು ಬಾರಿ ರೆಪೋ ದರವನ್ನು ಒಟ್ಟಾರೆ ಶೇ. 2.5 ರಷ್ಟು ಏರಿಕೆ ಮಾಡಿದೆ. ಪ್ರಸಕ್ತ ರೆಪೋ ದರವು ಶೇ. 6.5 ಆಗಿದೆ. ಈ ಹೊರೆಯನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಿದ್ದು ಗೃಹ, ವಾಹನ, ವೈಯಕ್ತಿಕ ಸಾಲ ಸಹಿತ ಎಲ್ಲ ಸಾಲಗಳ ಬಡ್ಡಿದರಗಳೂ ಏರಿಕೆಯಾಗಿವೆ. ಇದರಿಂದಾಗಿ ಕಳೆದ ಒಂದು ವರ್ಷದಲ್ಲಿ ಗ್ರಾಹಕರ ಸಾಲಗಳ ಇಎಂಐ ಹೊರೆ ಗಣನೀಯವಾಗಿ ಹೆಚ್ಚಿದೆ. ಹಣದುಬ್ಬರ ಶೇ. 4ರಲ್ಲಿ ಇರಬೇಕೆಂಬುದು ಆರ್‌ಬಿಐ ಗುರಿಯಾಗಿದೆ. ಶೇ. 6 ಸಹಿಷ್ಣುತಾ ಮಟ್ಟ (ಗರಿಷ್ಟ ಮಿತಿಯಾಗಿದೆ). ಹಣದುಬ್ಬರ ಕಡಿಮೆ ಯಾಗಿರುವುದರಿಂದ ರೆಪೋ ದರ ಏರಿಕೆಯ ಭೀತಿ ಸದ್ಯಕ್ಕೆ ನಿವಾರಣೆ ಯಾದಂತಿದೆ.

ರೆಪೋ ದರ ಹೆಚ್ಚಾದಾಗ ಉದ್ಯಮಿಗಳಿಗೆ ಹಾಗೂ ಪ್ರಮುಖವಾಗಿ ಬ್ಯಾಂಕ್‌ ಸಾಲವನ್ನೇ ನಂಬಿ ವ್ಯವಹಾರ ಮಾಡುತ್ತಿರುವ ಎಂಎಸ್‌ಎಂಇ (ಅತೀ ಸಣ್ಣ, ಸಣ್ಣ ಮತ್ತು ಮಧ್ಯಮ ಪ್ರಮಾಣದ) ಉದ್ಯಮಿಗಳಿಗೆ ತೀರಾ ಕಷ್ಟವಾಗುತ್ತದೆ. ಆರ್‌ಬಿಐನ ಜೂನ್‌ ಹಣಕಾಸು ನೀತಿ ಸಭೆಯಲ್ಲಿ ಬಡ್ಡಿದರ  ಇಳಿಕೆ ಯಾದರೆ ಅಗ್ಗದ ಸಾಲಗಳನ್ನು ನಿರೀಕ್ಷಿಸ ಬಹುದು. ಆದರೆ ಕೈಗಾರಿಕ ಬೆಳವಣಿಗೆ ಕುಸಿತ ಕಂಡಿರುವುದರಿಂದ ಆರ್‌ಬಿಐ ರೆಪೋ ದರದ ಇಳಿಕೆಗೆ ಮುಂದಾಗದೆ ಯಥಾಸ್ಥಿತಿ ಯನ್ನು ಕಾಯ್ದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

ದೇಶದ ಹಣಕಾಸು ವಲಯವೀಗ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿದೆ. ಎಪ್ರಿಲ್‌ ತಿಂಗಳ ಜಿಎಸ್‌ಟಿ ವರಮಾನ ಸಾರ್ವಕಾಲಿಕ ಗರಿಷ್ಠ ಮೊತ್ತವಾದ 1.87 ಲಕ್ಷ ಕೋಟಿ ರೂ.ಗಳಿಗೆ ತಲುಪಿ, ಹೊಸ ದಾಖಲೆ ನಿರ್ಮಿಸಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆಗಳ ಹೊರತಾಗಿಯೂ ಭಾರತೀಯ ಆರ್ಥಿ ಕತೆಯು ಪ್ರಗತಿಯ ಹಾದಿಯಲ್ಲಿ ದಾಪು ಗಾಲಿಡು ತ್ತಿರು ವುದರ ಲಕ್ಷಣ ಇದಾಗಿದೆ ಯಲ್ಲದೆ ಸದ್ಯೋ ಭವಿಷ್ಯದಲ್ಲಿ ವಿಶ್ವದ ಬಲಾಡ್ಯ ಆರ್ಥಿಕ ರಾಷ್ಟ್ರಗಳ ಪಟ್ಟಿಯಲ್ಲಿ ಮುಂಚೂಣಿಯ ಸ್ಥಾನ ಪಡೆ ಯುವುದನ್ನು ಖಾತರಿ ಪಡಿಸಿದೆ. ಕೋವಿಡ್‌ ಸಾಂಕ್ರಾಮಿಕ ದಿಂದ ಉಂಟಾದ ಆಘಾತಗಳು ಮತ್ತು ರಷ್ಯಾ-ಉಕ್ರೇನ್‌ ನಡುವಣ ಯುದ್ಧದ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮಗಳನ್ನು ಭಾರತದ ಆರ್ಥಿಕತೆ ಸಮಂಜಸವಾಗಿ ಎದುರಿಸಿದೆ. ರಷ್ಯಾ-ಉಕ್ರೇನ್‌ ಯುದ್ಧ ಜಗತ್ತಿನ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಿದೆ. ಅಭಿವೃದ್ಧಿಶೀಲ ರಾಷ್ಟ್ರ ಗಳು ಕೂಡ ಇನ್ನೂ ಆರ್ಥಿಕತೆಯ ಪುನಶ್ಚೇತನಕ್ಕೆ ಹರಸಾಹಸ ಪಡುತ್ತಿವೆ. ಈ ನಿಟ್ಟಿನಲ್ಲಿ ಕೇಂದ್ರ ಸರಕಾರದ ಪಾರದರ್ಶಕ ಆಡಳಿತ, ಮಾನವ ಸಂಪನ್ಮೂಲದ ಸದ್ಬಳಕೆ, ಆತ್ಮನಿರ್ಭರ ಭಾರತ, ಮೇಕ್‌ ಇನ್‌ ಇಂಡಿಯಾ ಮತ್ತು ಹಣಕಾಸು ನಿರ್ವಹಣೆ ಯನ್ನು ಯಶಸ್ವಿಯಾಗಿ ಕೈಗೊಂಡಿರುವುದ ರಿಂದ ಆರ್ಥಿಕತೆ ವೇಗ ಪಡೆದುಕೊಳ್ಳಲು ಮತ್ತು ಅಭಿವೃದ್ಧಿ ಸಾಧ್ಯವಾಗಿದೆ. ಭಾರತವು ಅತ್ಯಂತ ವೇಗದ ಬೆಳವಣಿಗೆಯನ್ನು ಕಾಣುವ ಅರ್ಥ ವ್ಯವಸ್ಥೆ ಎಂಬ ಖ್ಯಾತಿಯನ್ನು 2023 ರಲ್ಲೂ ಉಳಿಸಿಕೊಳ್ಳಲಿದೆಯೆಂದು ಐಎಂಎಫ್ ಹೇಳಿದೆ ಮತ್ತು ವಿಶ್ವದ ಒಟ್ಟು ಅರ್ಥ ವ್ಯವಸ್ಥೆಯ ಬೆಳವಣಿಗೆಯಲ್ಲಿ ಈ ವರ್ಷ ಭಾರತದ ಪಾಲು ಶೇ. 15.4 ಇರಲಿದೆ ಎಂದು ಹೇಳಿದೆ. ವರ್ಲ್ಡ್ ಆಫ್ ಸ್ಟಾಟಿಸ್ಟಿಕ್ಸ್‌ನ ವರದಿಯ ಪ್ರಕಾರ ಇಡೀ ವಿಶ್ವದಲ್ಲಿ ಆರ್ಥಿಕ ಹಿಂಜರಿಕೆಯಿಂದ ಹೊರಗುಳಿದ ಏಕೈಕ ರಾಷ್ಟ್ರ ಭಾರತ.

Advertisement

ಜಾಗತಿಕ ಆರ್ಥಿಕ ಸ್ಥಿತಿಯು ಇನ್ನೂ ಕಳವಳ ಕಾರಿಯಾಗಿದೆ. ಅಮೆರಿಕ, ಇಂಗ್ಲೆಂಡ್‌ ಮತ್ತು ಯುರೋಪ್‌ ಸಹಿತ ಹಲವು ದೇಶಗಳ ಬ್ಯಾಂಕ್‌ಗಳು ದಿವಾಳಿಯಾಗಿವೆ. ಅಲ್ಲಿ  ಹಣ ದುಬ್ಬರ ಮತ್ತು ಬಡ್ಡಿದರ ಹೆಚ್ಚುತ್ತಲೇ ಇರು ವುದರಿಂದ ಬ್ಯಾಂಕಿಂಗ್‌ ವಲಯದ ಬಿಕ್ಕಟ್ಟು ಗಳು ಹಾಗೂ ಬಿಗಿಯಾದ ಆರ್ಥಿಕ ಪರಿ ಸ್ಥಿತಿ ಗಳು ಆರ್ಥಿಕತೆಯಲ್ಲಿ, ತೀವ್ರ ಜಾಗತಿಕ ಮಂದಗತಿಗೆ ಕಾರಣವಾಗಬಹುದು. ಈಗಾಗಲೇ ಬಹುತೇಕ ರಾಷ್ಟ್ರಗಳ ಜನಜೀವನ ವನ್ನು ತಲ್ಲಣಗೊಳಿಸಿದೆ. ಆದರೆ ಭಾರತದಲ್ಲಿ ಇಂತಹ ಭೀತಿ ಕಾಣಿಸುತ್ತಿಲ್ಲ. ಆದರೂ ಭೌಗೋಳಿಕ, ರಾಜಕೀಯ ಒತ್ತಡ, ಜಾಗತಿಕ ಹಣಕಾಸಿನ ಬಿಗುವಿನ ಸ್ಥಿತಿ ಮತ್ತು ಬಾಹ್ಯ ಬೇಡಿಕೆ ಮಂದಗೊಳ್ಳುವಿಕೆಯಿಂದ ದೇಶೀಯ ಬೇಡಿಕೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ನಿಲ್ಲದ ಯುದ್ಧ, ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಸಮರದ ಪರಿಣಾಮಗಳು ಆರ್ಥಿಕ ಚಟುವಟಿಕೆಗಳ ಮೇಲೆ ಪ್ರಭಾವ ಬೀರಲಿದೆ.

ಐಎಂಎಫ್ ಅಂದಾಜಿನ ಪ್ರಕಾರ ವಿಶ್ವದ ಆರ್ಥಿಕ ಬೆಳವಣಿಗೆಯ ದರ 2023 ರಲ್ಲಿ ಶೇ. 2.8ಕ್ಕೆ ಕುಸಿಯುವ ಸಾಧ್ಯತೆ ಇದೆ. 2022ರಲ್ಲಿ ಶೇ. 3.4ರಷ್ಟಿತ್ತು. ಭಾರತದ ಅರ್ಥ ವ್ಯವಸ್ಥೆಯು ಪರಿಷ್ಕೃತ ಬೆಳವಣಿಗೆ ಶೇ. 5.9 ಆಗಲಿದೆ ಎಂದು ಅಂದಾಜಿಸಿದೆ. ಅರ್ಥ ವ್ಯವಸ್ಥೆಯ ಪ್ರಮುಖ ಚಾಲನಾ ಶಕ್ತಿಗಳೆಂದರೆ ಹೂಡಿಕೆ ಮತ್ತು ವ್ಯಾಪಾರ. ದೇಶದ ಸೇವಾ ವಲಯದಲ್ಲಿ ರಫ್ತು ಪ್ರಮಾಣ ಚೆನ್ನಾಗಿದೆ. ಆದರೆ ಸರಕುಗಳ ರಫ್ತು ಅಷ್ಟೇನೂ ಚೆನ್ನಾಗಿಲ್ಲ. ಪ್ರಸ್ತುತ ಜಾಗತಿಕ ವಿದ್ಯಮಾನಗಳನ್ನು ಅವಲೋಕಿಸಿದರೆ ಆರ್ಥಿಕ ಬೆಳವಣಿಗೆ ದೊಡ್ಡ ಮಟ್ಟದಲ್ಲಿ ಇರಲಿದೆ ಎಂದು ನಿರೀಕ್ಷಿಸುವುದು ವಾಸ್ತವಿಕವಾಗಲಾರದು.

ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next