ಹೊಸದಿಲ್ಲಿ: ಆಹಾರ ವಸ್ತುಗಳ ಬೆಲೆಯಲ್ಲಿ ಇಳಿಕೆಯಾದ ಕಾರಣ ಜುಲೈ ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ 5 ವರ್ಷಗಳ ಕನಿಷ್ಠಕ್ಕೆ ಅಂದರೆ ಶೇ.3.54ಕ್ಕೆ ಇಳಿದಿದೆ. ಜೂನ್‌ನಲ್ಲಿ ಇದು ಶೇ.5.08 ಮತ್ತು ಕಳೆದ ವರ್ಷದ ಜುಲೈಯಲ್ಲಿ ಶೇ.7.44 ಆಗಿತ್ತು ಎಂದು ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಬಿಡುಗಡೆ ಮಾಡಿದ ದತ್ತಾಂಶ ಹೇಳಿದೆ. ಇನ್ನು, ಜೂನ್‌ನಲ್ಲಿ ದೇಶದ ಕೈಗಾರಿಕಾ ಉತ್ಪಾದನೆ ಕಡಿಮೆವಾಗಿದ್ದು, ಶೇ.4.2ಕ್ಕಿಳಿದು 5 ತಿಂಗಳಲ್ಲೇ ಕನಿಷ್ಠಕ್ಕೆ ತಲುಪಿದೆ ಎಂದೂ ದತ್ತಾಂಶ ಹೇಳಿವೆ.
ನೇರ ತೆರಿಗೆ ಸಂಗ್ರಹ ಶೇ.22 ಹೆಚ್ಚಳ:
ಇದೇ ವೇಳೆ, ಪ್ರಸಕ್ತ ವಿತ್ತ ವರ್ಷದ ಆ.11ರವರೆಗೆ ನಿವ್ವಳ ನೇರ ತೆರಿಗೆ ಸಂಗ್ರಹವು ಶೇ.22.48ರಷ್ಟು ಹೆಚ್ಚ ಳ ವಾ ಗಿದ್ದು, 6.93 ಲಕ್ಷ ಕೋಟಿ ರೂ. ಸಂಗ್ರಹವಾಗಿದೆ ಎಂದು ಸರಕಾರ ತಿಳಿ ಸಿದೆ. ಈ ಪೈಕಿ ವೈಯ ಕ್ತಿಕ ಆದಾಯ ತೆರಿಗೆ ಸಂಗ್ರ ಹವು 4.47 ಲಕ್ಷ ಕೋಟಿ ರೂ. ಆಗಿದೆ ಎಂದಿದೆ.