Advertisement

ಹಣದುಬ್ಬರ ನಿಯಂತ್ರಣ: ಭಾರತವೇ ಮೇಲು

09:56 PM Dec 02, 2022 | Team Udayavani |

ನವದೆಹಲಿ: ಜಗತ್ತಿನ ಎಲ್ಲಾ ದೇಶಗಳಲ್ಲಿ ಹಣದುಬ್ಬರ ನಿಯಂತ್ರಣಕ್ಕೆ ಬಡ್ಡಿ ದರ ಏರಿಕೆ ಮುಂದುವರಿಸಲಾಗಿದೆ. ಆದರೆ ಈ ಸಮಯದಲ್ಲಿ ಭಾರತ ಮಾತ್ರ ಒಯಸಿಸ್‌ನಂತೆ ಇದೆ ಎಂದು ಎಸ್‌ಬಿಐ ಸಂಶೋಧನಾ ವಿಭಾಗ ಅಭಿಪ್ರಾಯಪಟ್ಟಿದೆ.

Advertisement

ಅಮೆರಿಕ, ಬ್ರಿಟನ್‌ ಮತ್ತು ಜರ್ಮನಿಗೆ ಹೋಲಿಕೆ ಮಾಡಿದರೆ ಭಾರತದಲ್ಲಿ ಆಹಾರ, ಜೀವನ ವೆಚ್ಚ ಮತ್ತು ಇಂಧನ ವೆಚ್ಚ ಕಡಿಮೆಯಿದೆ. ಜಗತ್ತಿನ ಹಲವು ದೇಶಗಳ ಸೆಂಟ್ರಲ್‌ ಬ್ಯಾಂಕ್‌ಗಳು ಹಣದುಬ್ಬರ ತಗ್ಗಿಸಲು ಬಡ್ಡಿ ದರ ಏರಿಕೆ ಮಾಡಿದೆ. ಆದರೆ ಭಾರತ ಮಾತ್ರ ಸ್ಥಿರವಾಗಿ ನಿಂತಿದೆ ಎಂದು ಎಸ್‌ಬಿಐ ಸಂಶೋಧನಾ ವಿಭಾಗ ಹೇಳಿದೆ.

2021ರ ಸೆಪ್ಟೆಂಬರ್‌ಗೆ ಹೋಲಿಸಿದರೆ ಪ್ರಸ್ತುತ ಜೀವನ ವೆಚ್ಚದಲ್ಲಿ ಭಾರತ ಮತ್ತು ಅಮೆರಿಕದಲ್ಲಿ 10 ರೂ. ಏರಿಕೆಯಾಗಿದೆ. ಅದೇ ರೀತಿ ಜರ್ಮನಿ ಮತ್ತು ಬ್ರಿಟನ್‌ನಲ್ಲಿ ಕ್ರಮವಾಗಿ 20 ರೂ. ಮತ್ತು 23 ರೂ. ಏರಿಕೆಯಾಗಿದೆ ಎಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next