ಹೊಸದಿಲ್ಲಿ: ಕಳೆದ ವರ್ಷದ ಡಿಸೆಂಬರ್ ತಿಂಗಳಲ್ಲಿ ಸಗಟು ದರ ಸೂಚ್ಯಂಕ ಹಣದುಬ್ಬರ 22 ತಿಂಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿದಿತ್ತು. ಹಣದುಬ್ಬರ ಪ್ರಮಾಣವು ಶೇ.4.95ಕ್ಕೆ ತಲುಪಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ.
ಆಹಾರ ಪದಾರ್ಥಗಳ, ವಿಶೇಷವಾಗಿ ಎಣ್ಣೆಬೀಜ ಗಳು ಹಾಗೂ ತರಕಾರಿಗಳ ದರದಲ್ಲಿ ಗಣನೀಯ ವಾಗಿ ಇಳಿಕೆಯಾಗಿದ್ದೇ ಹಣದುಬ್ಬರ ಕುಸಿತಕ್ಕೆ ಕಾರಣ ಎನ್ನಲಾಗಿದೆ. ನವೆಂಬರ್‌ನಲ್ಲಿÉ ಹಣದುಬ್ಬರ ಶೇ.5.85ರಷ್ಟಿತ್ತು, 2021ರ ಡಿಸೆಂಬ ರ್‌ನಲ್ಲಿ ಇದು ಶೇ.14.27 ಆಗಿತ್ತು ಎಂದೂ ಸಚಿವಾಲಯ ತಿಳಿಸಿದೆ.
ದೇಶದ ರಫ್ತು 2022ರ ಡಿಸೆಂಬರ್‌ನಲ್ಲಿ ಶೇ.12.2ರಷ್ಟು ಇಳಿಕೆ ಯಾಗಿದೆ. ಆಯಾತ-ನಿರ್ಯಾತದ ನಡು ವಿನ ಕೊರತೆ 23.76 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ ಎಂದಿದೆ.