Advertisement

ಸಾಂಕ್ರಾಮಿಕ ರೋಗಗಳ ಹಾವಳಿ: ವಾರದೊಳಗೆ ವರದಿಗೆ ಸೂಚನೆ

03:02 PM Jun 28, 2017 | Team Udayavani |

ಹುಬ್ಬಳ್ಳಿ: ಮಳೆಗಾಲ ಆರಂಭವಾಗಿದ್ದು, ನಗರದ ಎಲ್ಲೆಡೆ ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚುತ್ತಿದೆ. ರೋಗ ಉಲ್ಬಣಗೊಳ್ಳುವ ಮೊದಲೇ ಸ್ವತ್ಛತೆ ಬಗ್ಗೆ ಅಗತ್ಯ ಕ್ರಮ ಕೈಗೊಂಡು ವಾರದೊಳಗೆ ವರದಿ ನೀಡಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಅಧಿಕಾರಿಗಳಿಗೆ ಸೂಚಿಸಿದರು. 

Advertisement

ಇಲ್ಲಿನ ಪಾಲಿಕೆ ಆವರಣದಲ್ಲಿರುವ ತಮ್ಮ ಕಚೇರಿಯಲ್ಲಿ ಸ್ವತ್ಛತೆ ಹಾಗೂ ಆರೋಗ್ಯ ಕುರಿತು ಮಂಗಳವಾರ ನಡೆಸಿದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಸಮರ್ಪಕ ಕಸ ವಿಲೇವಾರಿಯಿಂದ ಕ್ಷೇತ್ರದೆಲ್ಲೆಡೆ ಅಸ್ವತ್ಛತೆ ಕಂಡು ಬರುತ್ತಿದೆ. ಕಸ ವಿಲೇವಾರಿಯ ಗುತ್ತಿಗೆದಾರರು, ಅಧಿಕಾರಿಗಳು ಏನು ಮಾಡುತ್ತಿದ್ದಾರೆಂಬುದೇ ತಿಳಿಯದಾಗಿದೆ ಎಂದು ಕಿಡಿಕಾರಿದರು. 

ಹು-ಧಾ ಪೂರ್ವ ಕ್ಷೇತ್ರ ವ್ಯಾಪ್ತಿಯಲ್ಲಿ 20 ವಾರ್ಡ್‌ಗಳಿದ್ದು, ಆದರೆ ಕಸ ವಿಲೇವಾರಿಗೆ ಪ್ರತಿ ವಾರ್ಡಗೆ 1 ಟ್ರಾಕ್ಟರ್‌ ಮಾತ್ರ ಬಳಸುತ್ತಿರುವುದರಿಂದ ಕಸ ವಿಲೇವಾರಿಗೆ ಸಾಕಷ್ಟು ವಿಳಂಬವಾಗುತ್ತಿದೆ. ಅಲ್ಲದೆ ವಾರ್ಡಿನ ಸ್ವತ್ಛತೆ ಬಗ್ಗೆ ನಿಗಾ ವಹಿಸಲು ಕೇವಲ ಐದು ಆರೋಗ್ಯ ನಿರೀಕ್ಷಕರಿದ್ದು, ಕಾರ್ಯ ಒತ್ತಡದಿಂದ ನಿರೀಕ್ಷಿತ ಕಾರ್ಯವಾಗುತ್ತಿಲ್ಲ.

ಇದರಿಂದಾಗಿ ಎಲ್ಲೆಡೆ ಅಸ್ವತ್ಛತೆ ಕಂಡು ಬರುತ್ತಿದೆ. ಕೂಡಲೇ ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿ ಟ್ರಾಕ್ಟರ್‌ ಸಂಖ್ಯೆ ಹೆಚ್ಚಿಸಿ, ಕಸ ವಿಲೇವಾರಿಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಹಾಗೂ ಹೆಚ್ಚುವರಿಯಾಗಿ ಐವರು ಆರೋಗ್ಯ ನಿರೀಕ್ಷಕರ ನೇಮಕಕ್ಕೆ ಕ್ರಮ ವಹಿಸುವಂತೆ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಅಲ್ಲದೆ ಸೊಳ್ಳೆಗಳ ಹಾವಳಿ ತಡೆಗೆ ದಿನಾಲು ಫಾಗಿಂಗ್‌ ಮಾಡಬೇಕು. ಮುಂದಿನ ವಾರದಿಂದ ಅಧಿಕಾರಿಗಳ ಜೊತೆ ಬೆಳಗಿನ ವೇಳೆ ವಾರ್ಡ್‌ ಸಂಚಾರ ಆರಂಭಿಸಲಾಗುವುದು. ಜೊತೆಗೆ ಪ್ರತಿ ತಿಂಗಳು ಅಧಿಕಾರಿಗಳ ಸಭೆ ನಡೆಸಿ ಸ್ವತ್ಛತೆಯ ಪ್ರಗತಿ ಪರಿಶೀಲಿಸಲಾಗುವುದು ಎಂದರು.

Advertisement

ಪಾಲಿಕೆ ಆರೋಗ್ಯಾಧಿಕಾರಿ ಡಾ| ಪ್ರಭು ಬಿರಾದಾರ, ಕಾರ್ಯನಿರ್ವಾಹಕ ಅಭಿಯಂತರ  ಮಹೇಶ ಅರಳಿಹೊಂಡ, ವಲಯ ಅಧಿಕಾರಿಗಳಾದ ಎಸ್‌.ಎನ್‌. ಗಣಾಚಾರಿ, ಎಂ.ಎಂ. ನದಾಫ್‌, ವಿಠuಲ, ಪರಿಸರ ಅಧಿಕಾರಿಗಳಾದ ಗಿರೀಶ, ನಯನಾ, ಆರೋಗ್ಯ  ನಿರೀಕ್ಷಕರು, ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next