Advertisement

ಸೋಂಕಿತ ವ್ಯಕ್ತಿ ಮದ್ದೂರಿನಲ್ಲಿ ಓಡಾಟ!

05:14 AM Jun 18, 2020 | Lakshmi GovindaRaj |

ಮಂಡ್ಯ: ಕೋವಿಡ್‌ 19 ಸೋಂಕಿತ ಪಾಂಡವಪುರ ಮೂಲದ ವ್ಯಕ್ತಿಯೊಬ್ಬ ಮದ್ದೂರು ಪಟ್ಟಣದ ಬಾಡಿಗೆ ಮನೆಗೆ ಬಂದು ಹೋಗಿರುವ ಪ್ರಕರಣ ಜನರಲ್ಲಿ ಆತಂಕ ಸೃಷ್ಟಿಸಿದೆ. ಪಾಂಡವಪುರ ಮೂಲದ 38 ವರ್ಷದ ವ್ಯಕ್ತಿ ಬಿಡದಿ ಸಮೀಪವಿರುವ ಟಯೋಟಾ ಕಂಪನಿಯಲ್ಲಿ ಕೆಲಸ ಮಾಡಿ  ಕೊಂಡಿದ್ದು, ಈತ ಸ್ನೇಹಿತರೊಂದಿಗೆ ಮದ್ದೂರು ಪಟ್ಟಣದ ಲೀಲಾವತಿ ಬಡಾವಣೆಯ ಕೆ.ಎಚ್‌.ನಗರದ ಎರಡನೇ ಕ್ರಾಸ್‌ನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದನು.

Advertisement

ಈತ ಸುಮಾರು 3 ತಿಂಗಳಿನಿಂದ ಮದ್ದೂರಿಗೆ ಬಂದಿರಲಿಲ್ಲ. ಪಾಂಡವಪುರದಲ್ಲಿದ್ದ ಈತನ ರಕ್ತ ಮತ್ತು ಗಂಟಲುದ್ರವವನ್ನು ಸಂಗ್ರಹಿಸಿ ಜೂ.13ರಂದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ನಡುವೆ ಜೂ.15ರಂದು ಮದ್ದೂರಿನಲ್ಲಿರುವ ಬಾಡಿಗೆ ಮನೆಗೆ ಬಂದ ಈತ ಬೈಕ್‌ ನಿಲ್ಲಿಸಿ ಒಂದು ದಿನ ಅಲ್ಲೇ ತಂಗಿದ್ದು, ಮರು ದಿನ ಬೆಳಗ್ಗೆ ಕೆಲಸಕ್ಕೆ ತೆರಳಿದ್ದನು. ಮೇ 16ರಂದು ಸೋಂಕು ಇರುವುದು ದೃಢಪಟ್ಟಿತ್ತು.

ವಿಷಯ ತಿಳಿದು ಟೊಯೋಟೋ ಕಂಪನಿಯವರು ಕೂಡಲೇ ಆತನನ್ನು ಆಂಬ್ಯುಲೆನ್ಸ್‌  ಮೂಲಕ ಪಾಂಡವಪುರಕ್ಕೆ ಕಳುಹಿಸಿದರು. ಇದೀಗ ಆತ ನನ್ನು ಪಾಂಡವಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮದ್ದೂರು ತಹಶೀಲ್ದಾರ್‌ ವಿಜಯಕುಮಾರ್‌, ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾಲತಾ, ಪುರಸಭೆ  ಮುಖ್ಯಾಧಿ ಕಾರಿ ಮುರುಗೇಶ್‌ ಮತ್ತು ಆರೋಗ್ಯಾಧಿಕಾರಿಗಳ ತಂಡ ಕೆ.ಹೆಚ್‌. ನಗರದಲ್ಲಿರುವ ಬಾಡಿಗೆ ಮನೆ ಮಾಲೀಕ ಕೆ.ಎಂ.ಭೋಜ ಯ್ಯ, ಪತ್ನಿ ಹಾಗೂ ಇಬ್ಬರು ಮಕ್ಕಳ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದಾರೆ.

ಅಲ್ಲದೆ,  ಟೊಯೋಟೋ ಕಂಪನಿ ಯವರನ್ನು ಸಂಪರ್ಕಿಸಿ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ದಲ್ಲಿದ್ದ ನೌಕರರ ವಿವರ ನೀಡುವಂತೆ ಕೋರಿದ್ದಾರೆ. ಬಡಾವ ಣೆಯ ಸುತ್ತಲಿನ ಪ್ರದೇಶದಲ್ಲಿ ಔಷಧ ಸಿಂಪಡಣೆ ಮಾಡಿದ್ದಾರೆ. ಟಯೋಟಾ  ಕಂಪನಿಯ ವಾಹನವನ್ನು ಸ್ಯಾನಿಟೈಸರ್‌ ಮಾಡಿ ಸ್ವತ್ಛಗೊಳಿಸುವಂತೆಯೂ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next