Advertisement

ಉಸಿರಾಟದಿಂದ ಬಳಲುತ್ತಿದ್ದ ಶಿಶು ರಕ್ಷಣೆ

04:11 PM Apr 11, 2019 | Team Udayavani |
ಗದಗ: ಅತೀ ಕಡಿಮೆ 560 ಗ್ರಾಂ ತೂಕದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು
ರಕ್ಷಿಸುವ ಮೂಲಕ ಇಲ್ಲಿನ ಜಿಮ್ಸ್‌ ಆಸ್ಪತ್ರೆ ವೈದ್ಯರು ಅಪರೂಪದ ಸಾಧನೆ ಮಾಡಿದ್ದಾರೆ.
ಪೂಜಾ ಪರಶುರಾಮ ಭಂಡಾರಿ ಎಂಬ 6.5 ತಿಂಗಳ ಗರ್ಭಿಣಿಯಲ್ಲಿ ಅವಧಿ ಪೂರ್ವ ಅಧಿಕ ರಕ್ತಸ್ರಾವದಿಂದ ನಗರದ
ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಮಗು ಕನಿಷ್ಠ 560 ಗ್ರಾ.ಪಂ ತೂಕ
ಹೊಂದಿದ್ದರಿಂದ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿತ್ತು. ಆದರೆ, ಹಣಕಾಸಿನ ತೊಂದರೆಯಿಂದಾಗಿ ಇಲ್ಲಿನ ಸರಕಾರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದ ಮಗುವಿಗೆ ಆಸ್ಪತ್ರೆಯ ಡಾ.ಶಿವನಗೌಡ ಜೋಳದರಾಶಿ ಅವರ ನೇತೃತ್ವದ ಶಿಶು ತಜ್ಞರ ಸತತ ಮತ್ತು ಕಠಿಣ ಪ್ರಯತ್ನದಿಂದ ಉಸಿರಾಟದ ತೊಂದರೆಗೊಳಗಾಗಿದ್ದ ಮಗುವನ್ನು ಕೃತಕ ಉಸಿರಾಟ, ಔಷಧಿಗಳು ಹಾಗೂ ಕಾಂಗರೂ ಕೇರ್‌ನಂತಹ ವ್ಯವಸ್ಥಗಳಿಂದ ಹಂತ ಹಂತವಾಗಿ ಮಗುವನ್ನು ರಕ್ಷಿಸಿದ್ದಾರೆ.
ಸದ್ಯ ಮಗು ಸ್ವಯಂ ಉಸಿರಾಡುತ್ತಿದ್ದು, ಹೆತ್ತವರು ಹಾಗೂ ಆಸ್ಪತ್ರೆಯ ವೈದ್ಯರಲ್ಲಿ ಸಂತಸ ಮೂಡಿಸಿದೆ. 6.5 ತಿಂಗಳಲ್ಲಿ ಜನಿಸುವ ಮಕ್ಕಳು ಬದುಕುಳಿಯುವುದು ವಿರಳ. ಅದರಲ್ಲೂ ಅತೀ ಕಡಿಮೆ ತೂಕದ ಮಗುವನ್ನು ರಕ್ಷಿಸುವಲ್ಲಿ ಆಸ್ಪತ್ರೆಯ ವೈದ್ಯರ ತಂಡದ ಪರಿಶ್ರಮವನ್ನು ಜಿಮ್ಸ್‌ ನಿರ್ದೇಶಕ ಡಾ.ಪಿ.ಎಸ್‌.ಭೂಸರಡ್ಡಿ, ಮುಖ್ಯ ಆಡಳಿತಾಧಿಕಾರಿ ಪಿ.ಎಸ್‌. ಮಂಜುನಾಥ, ವೈದ್ಯಕೀಯ ಅಧೀಕ್ಷಕ ಡಾ.ಜಿ.ಎಸ್‌.ಪಲ್ಲೇದ ಶ್ಲಾಘಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next