ಚೆನ್ನೈ: ತಾಯಿ ಜೊತೆಗಿದ್ದ ಒಂದೂವರೆ ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣವನ್ನು ಪೊಲೀಸರು 5 ಗಂಟೆಯಲ್ಲಿ ಬೇಧಿಸಿದ್ದಾರೆ.
ಆಗಿದ್ದೇನು?: ಒಡಿಶಾ ಮೂಲದ ನಂದಿನಿ ಕನ್ಹರ್ ತನ್ನ ಒಂದುವೂರೆ ವರ್ಷದ ಮಗ ಆಯುಷ್ ನೊಂದಿಗೆ ರೈಲ್ವೇ ನಿಲ್ದಾಣದಲ್ಲಿ ನಿಂತಿದ್ದರು. ಇನ್ನೇನು ರೈಲು ಹತ್ತಿ ಊರಿಗೆ ಹೋಗಬೇಕು ಎನ್ನುವಷ್ಟರಲ್ಲೇ ಯಾರೋ ಬಂದು ಮಗುವನ್ನು ಎತ್ತಿಕೊಂಡು ಹೋಗಿದ್ದಾರೆ. ಮಗುವನ್ನು ಅತ್ತಿತ್ತ ಹುಡುಕಿದ ನಂದಿನಿ ಕೊನೆಗೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮೊದಲು ಪೊಲೀಸರು ರೈಲ್ವೇ ನಿಲ್ದಾಣದ ಹಾಗೂ ಆ ಪ್ರದೇಶದಲ್ಲಿನ ಎಲ್ಲಾ ಸಿಸಿಟಿವಿಯನ್ನು ಪರಿಶೀಲಿಸಿದ್ದಾರೆ. ನಂದಿನಿ ನಿಂತಿರುವ ಬಳಿ ಇಬ್ಬರು ಬಂದು ಮಗುವನ್ನಿಡಿದುಕೊಂಡು ಆಟೋ ಹತ್ತುವ ದೃಶ್ಯ ಸಿಸಿಟಿಟಿಯಲ್ಲಿ ಸೆರೆಯಾಗಿದೆ.
ಮಗುವನ್ನಿಡಿದುಕೊಂಡು ಆಟೋ ಹತ್ತಿದ್ದ ಇಬ್ಬರು ವಾಲ್ ಟ್ಯಾಕ್ಸ್ ರಸ್ತೆ ಕಡೆ ಹೋಗುವುದನ್ನು ಪೊಲೀಸರು ಸಿಸಿಟಿವಿಯಲ್ಲಿ ಪತ್ತೆ ಹಚ್ಚಿದ್ದಾರೆ. ಆ ಬಳಿಕ ಪೊಲೀಸರು ಆಟೋ ರಿಕ್ಷಾದ ಜಾಡು ಹಿಡಿದು ಹಿಂಬಾಲಿಸಿದ್ದಾರೆ. ಕುಂದ್ರತ್ತೂರಿನಲ್ಲಿ ಇಳಿಯುವುದನ್ನು ಪೊಲೀಸರು ನೋಡಿದ್ದಾರೆ.
ಸ್ಥಳಕ್ಕೆ ತಲುಪಿದ ಖಾಕಿ ಮಗುವನ್ನು ವಶಪಡೆದು, ಆ ಬಳಿಕ ಜಾರ್ಖಂಡ್ ಮೂಲದ ಪ್ರಭಾಸ್ ಮೊಂಡಲ್ ಮತ್ತು ನಮಿತಾ ಎನ್ನುವ ದಂಪಪತಿಯನ್ನು ಬಂಧಿಸಿದ್ದಾರೆ.
ಮಗು ಅಪಹರಣದಲ್ಲಿ ಬೇರೆ ಯಾರಾದರೂ ಇದ್ದಾರೆಯೇ ಮತ್ತು ಇವರು ತಂಡವಾಗಿ ಇದ್ದಾರೆಯೇ ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.