Advertisement
ಕೇಶ್ವಾಪುರದ ಯುವಕ ಹಾಗೂ ಉಣಕಲ್ಲನ ಯುವತಿ ಪರಸ್ಪರ ಪ್ರೀತಿಸಿ ಗದುಗಿನಲ್ಲಿ ರಿಜಿಸ್ಟರ್ ಮದುವೆ ಆಗಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಯುವತಿಯ ಕುಟುಂಬದವರು ಮತ್ತು ಅವರ ಸಮಾಜದವರು ಠಾಣೆ ಎದುರು ಜಮಾಯಿಸಿ, ಪ್ರೀತಿ ಹೆಸರಲ್ಲಿ ಲವ್ ಜಿಹಾದ್ ನಡೆಸಲಾಗಿದೆ. ಮತಾಂತರ ಮಾಡುವ ಹುನ್ನಾರ ನಡೆದಿದೆ ಎಂದು ಆರೋಪಿಸಿ ಮಧ್ಯಾಹ್ನದಿಂದ ರಾತ್ರಿವರೆಗೂ ಠಾಣೆ ಎದುರು ಪ್ರತಿಭಟಿಸಿದರು. ಯುವತಿಯನ್ನು ಕರೆದುಕೊಂಡು ಬಂದು ತಮಗೆ ಒಪ್ಪಿಸಬೇಕು. ಇಲ್ಲವೇ ಸಾಂತ್ವನ ಕೇಂದ್ರಕ್ಕೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.
Related Articles
Advertisement
ರಾಜ್ಯದಲ್ಲಿ ಲವ್ ಜಿಹಾದ್ ಮೂಲಕ ಹಿಂದೂ ಹುಡುಗಿಯರನ್ನು ಪ್ರೀತಿ-ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡುವ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ನಗರದಲ್ಲಿ ಅಪ್ರಾಪೆ¤ಯನ್ನು ಅನ್ಯಧರ್ಮದ ಯುವಕ ಯುಗಾದಿಯಂದು ಕರೆದುಕೊಂಡು ಹೋಗಿ ಗದುಗಿನಲ್ಲಿ ರಿಜಿಸ್ಟರ್ ಮದುವೆಯಾಗಿದ್ದಾನೆ. ಬೋಗಸ್ ದಾಖಲೆಗಳಿದ್ದರೂ ಅಲ್ಲಿನ ಅಧಿಕಾರಿ ಮದುವೆಗೆ ಅವಕಾಶ ನೀಡಿದ್ದಾರೆ. ಮೊದಲು ಅಧಿಕಾರಿಯನ್ನು ತಕ್ಷಣ ಅಮಾನತು ಮಾಡಬೇಕು. ಇಲ್ಲಿನ ಪೊಲೀಸರು ಸಹಿತ ಯುವಕನಿಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ. ಸ್ಥಳೀಯ ಶಾಸಕರು ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಗಮನಕ್ಕೆ ಬಂದಿದೆ. ಪೊಲೀಸರು ಯಾರ ಒತ್ತಡಕ್ಕೂ ಮಣಿಯದೆ ತಾವೇ ಹೇಳಿದಂತೆ ಗುರುವಾರ ಮಧ್ಯಾಹ್ನ 12 ಗಂಟೆಯೊಳಗೆ ಯುವತಿಯನ್ನು ಕರೆದುಕೊಂಡು ನಮಗೆ ಒಪ್ಪಿಸಬೇಕು. ಇಲ್ಲವೇ ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಕು. ಇಲ್ಲವಾದರೆ ನಮ್ಮ ಹೋರಾಟದ ದಿಕ್ಕು ಬದಲಾಗುತ್ತದೆ. ಆಗ ಸಂಭವಿಸಬಹುದಾದ ಅನಾಹುತಗಳಿಗೆ ಪೊಲೀಸರೇ ಜವಾಬ್ದಾರರಾಗುತ್ತಾರೆ. ರಾಜ್ಯ ಸರ್ಕಾರ ಲವ್ ಜಿಹಾದ್ ತಡೆ ಕಾನೂನು ಜಾರಿಗೊಳಿಸಬೇಕು. ಇಲ್ಲವಾದರೆ ಬಿಜೆಪಿ ಶಾಸಕರ ಮನೆಯ ಮುಂದೆ ಧರಣಿ ನಡೆಸಲಾಗುವುದು. –ಪ್ರಮೋದ ಮುತಾಲಿಕ, ಶ್ರೀರಾಮ ಸೇನಾ ರಾಷ್ಟ್ರಾಧ್ಯಕ್ಷ
ಏ.2ರಂದು ಬೆಂಡಿಗೇರಿ ಠಾಣೆಯಲ್ಲಿ ಅಪ್ರಾಪ್ತೆ ಕಾಣೆ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಕೂಡಲೇ ವಿಚಾರಣೆ ಮಾಡಿ ಕಾನೂನು ಪ್ರಕಾರ ಕ್ರಮಕೈಗೊಳ್ಳಲಾಗುವುದು. ಏ.4ರಂದು ಯುವಕ ಮತ್ತು ಯುವತಿ ಪತ್ತೆಯಾಗಿದ್ದಾರೆ. ಈಗ ಪಾಲಕರು ಅಪಹರಣ ಕುರಿತು ದೂರು ಕೊಟ್ಟಿದ್ದಾರೆ. ಇಲ್ಲಿಯವರೆಗೆ ದೊರೆತ ದಾಖಲೆಗಳ ಪ್ರಕಾರ ಇಬ್ಬರು ವಯಸ್ಕರಾಗಿದ್ದಾರೆ. ಪ್ರತಿಭಟನಾಕಾರರು ಮಾಡಿದ ಆರೋಪಗಳನ್ನು ಪರಿಶೀಲಿಸಲಾಗುವುದು. ವಿಚಾರಣೆ ಮುಗಿಯುವವರೆಗೆ ಎಲ್ಲರೂ ಸಹಕಾರ ನೀಡಬೇಕು. –ಸಾಹಿಲ ಬಾಗ್ಲಾ, ಡಿಸಿಪಿ, ಕಾನೂನು ಮತ್ತು ಸುವ್ಯವಸ್ಥೆ