ಇಂಡಿ: ತಾಲೂಕಿನ ಆಳೂರ ಗ್ರಾಮದ ರೈತ ಮಲ್ಲನಗೌಡ ಮಹಾದೇವ ಬಿರಾದಾರ ಇವರ ಹೋರಿಗೆ ಬಹು ಬೇಡಿಕೆ ಬಂದಿದ್ದು ಎರಡೂವರೆ ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ.
ಇದು ನಾಲ್ಕು ಹಲ್ಲಿನ ಹೋರಿಯಾಗಿದ್ದು ತುಂಬಾ ವಿಶೇಷತೆ ಹೊಂದಿದೆ. ಮರಿ ಹೋರಿ ಹುಟ್ಟಿ ನಾಲ್ಕು ಹಲ್ಲು ಬರುವುದರೊಳಗೆ ಮಹಾರಾಷ್ಟ್ರದ ರೈತರಿಂದ ಬಹು ಬೇಡಿಕೆ ಬಂದಿತ್ತು. ಇದನ್ನು ಮುಧೋಳ ತಾಲೂಕಿನ ಮಹಾಲಿಂಗಪುರ ಗ್ರಾಮದ ಸುರೇಶ ನಂದಗಾಂವ ಅವರು ಎರಡುವರೆ ಲಕ್ಷಕ್ಕೆ ಕೊಂಡೊಯ್ದರು. ಇದರಿಂದ ಗ್ರಾಮದ ಎಲ್ಲ ರೈತರು, ಯುವಕರು ಮಲ್ಲನಗೌಡ ಬಿರಾದಾರ ಅವರ ಹೋರಿಯನ್ನು ಮೆರವಣಿಗೆ ಮೂಲಕ ಬೀಳ್ಕೊಟ್ಟರು.
ತಾಲೂಕಿನ ಹೋರಿ ತಳಿಗಳನ್ನು ಕಾಪಾಡಬೇಕು. ತಲೆ ತಲಾಂತರದಿಂದ ಬಂದ ಈ ಶ್ರೇಷ್ಠ ತಳಿಗಳನ್ನು ರಕ್ಷಣೆ ಮಾಡಬೇಕು ಎಂಬುದು ಇಲ್ಲಿಯ ಅನೇಕ ರೈತರ ಇಚ್ಛೆ. ಈ ಭಾಗದ ತಳಿಗಳು ನಶಿಸಿ ಹೊಗುತ್ತಿರುವ ಮತ್ತು ಕಡಿಮೆ ಪ್ರಮಾಣದಲ್ಲಿ ಆಕಳು ಸೇರಿದಂತೆ ಅನೇಕ ಪ್ರಾಣಿ ಸಂಕುಲನ ಬೆಳೆಸಿ ಆ ತಳಿಗಳನ್ನು ಮುಂದಿನ ಪೀಳಿಗೆಗೆ ತೋರಿಸುವ ಯತ್ನದಲ್ಲಿದ್ದಾರೆ ಇಲ್ಲಿನ ರೈತರು. ಅಂಥವರಲ್ಲಿ ಇಂಡಿ ತಾಲೂಕಿನ ಆಳೂರ ಗ್ರಾಮದ ಮಲ್ಲನಗೌಡ ಬಿರಾದಾರ ಸಹ ಒಬ್ಬರು.
ಗ್ರಾಮದಲ್ಲಿ ಡೋಲು, ಬ್ಯಾಂಡ್ ಬಾಜಾ ಬಾರಿಸುತ್ತ ಮೆರವಣಿಗೆ ಮೂಲಕ ಹೋರಿಗಳ ಪ್ರದರ್ಶನ ಮಾಡಿದರು. ಶಿವರಾಯಗೌಡ ಬಿರಾದಾರ, ನಾಗೇಶ ಮೇತ್ರಿ, ನೀಲಪ್ಪ ವಾಲೀಕಾರ, ಅಣ್ಣಪ್ಪ ವಾಡಿ, ಶ್ರೀಶೈಲ ನಾಟೀಕಾರ, ಸಲೀಂ ಚಪ್ಪರಬಂದ, ಅಂಬಣ್ಣ ಆಳೂರ, ಮುದಕಪ್ಪ ಕನ್ನೂರ, ಗುರುಗೌಡ ಬಿರಾದಾರ, ದೀಪಕ ಉತ್ತಸ್ಕರ ಸೇರಿದಂತೆ ಗ್ರಾಮದ ಯುವಕರು, ರೈತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.