Advertisement

ಪರಿಸರ ಜಾಗೃತಿ ಕಾರ್ಯಕ್ರಮ

06:00 PM Jun 27, 2020 | Naveen |

ಇಂಡಿ: ಪರಿಸರ ಸಂರಕ್ಷಣೆ ಎಲ್ಲರ ಹೊಣೆ. ಗಿಡ-ಮರ ಬೆಳೆಸುವುದರಿಂದ ಸಕಾಲಕ್ಕೆ ಮಳೆ, ಶುದ್ಧ ಗಾಳಿ ಸಿಗುವ ಜತೆಗೆ ಭೂಮಿಯ ಉಷ್ಣತೆ ಸಮತೋಲನವಾಗುತ್ತದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕು ಅಧಿಕಾರಿ ಜಗದೀಶ ಬಂಡಾರಿ ಹೇಳಿದರು.

Advertisement

ತಾಲೂಕಿನ ಬಳ್ಳೊಳ್ಳಿ ಗ್ರಾಮದಲ್ಲಿ ಸರ್ವೋದಯ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶಾಲಾ ಆಡಳಿತ ಮಂಡಳಿತ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹೆಚ್ಚಿನ ಉಷ್ಣತೆಯಿಂದ ಪರಿಸರದಲ್ಲಿ ಅಸಮತೋಲನ ಉಂಟಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತವೆ. ಕಲುಷಿತ ವಾತಾವರಣ ಉದ್ಭವವಾಗುತ್ತಿದೆ. ಈ ಎಲ್ಲ ಸಮಸ್ಯೆ ನಿವಾರಣೆಗೆ ಸಸ್ಯ ಪಾಲನೆಯೇ ಮದ್ದು. ಆದ್ದರಿಂದ ಪರಿಸರ ರಕ್ಷಣೆ ಎಲ್ಲರ ಕರ್ತವ್ಯವಾಗಲಿ ಎಂದರು. ಈ ವೇಳೆ ಕೃಷಿ ಮೇಲ್ವಿಚಾರಕ ಗುಂಡೆರಾಯ ಭೂಸನೂರ, ಸಂಸ್ಥೆ ಅಧ್ಯಕ್ಷೆ ಕೌಸರಬೇಗಂ ಮುಲ್ಲಾ, ಈರಣ್ಣ ವಾಲಿ, ಶಿವರಾಯ ತುಪ್ಪದ, ಗ್ರಾಪಂ ಉಪಾಧ್ಯಕ್ಷ ಮಹಾದೇವ ಕದರಿ, ತಮ್ಮಣ್ಣ ವಾಲಿಕಾರ, ಮಾಳಪ್ಪ ಶಿರಶ್ಯಾಡ, ಉಸ್ಮಾನ್‌ ಪಠಾಣ, ರೇವಪ್ಪ ಶಿರಶ್ಯಾಡ, ರಜಾಕ್‌ ಮನಿಯಾರ, ಅರ್ಜುನ ನಾಯ್ಕೋಡಿ, ವಲಯ ಮೇಲ್ವಿಚಾರಕ ಜಗದೀಶ ಕಂವಾರ, ಸೇವಾ ಪ್ರತಿನಿಧಿ ರೇಣುಕಾ ಕೋಳಿ, ಕನ್ಯಾಕುಮಾರಿ ಶಿರಶ್ಯಾಡ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next