ಇಂಡಿ: ಒಂದು ದೇಶದ ಸಂಪನ್ಮೂಲಗಳಲ್ಲಿ ಮಾನವ ಸಂಪನ್ಮೂಲ ಕೂಡಾ ಪ್ರಮುಖವಾಗಿದ್ದು ಇದರ ಅಭಿವೃದ್ಧಿ ಪಡಿಸುವುದೇ ಮುಖ್ಯ ಉದ್ದೇಶ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಜಿ. ವಾಲಿ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರ ಅಭಿವೃದ್ಧಿ ಕೋಶ ಪುರಸಭೆ ಇಂಡಿ ಸಂಯುಕ್ತಾಶ್ರಯದಲ್ಲಿ ಹಾಗೂ ಇತರೆ ಕೇಂದ್ರ ಸರಕಾರ ಯೋಜನೆಗಳೊಂದಿಗೆ ಸಮನ್ವಯತೆ ಅಂಗೀಕಾರ ಅಂದೋಲನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಗೀಕಾರ ಅಂದೋಲನದ ಉದ್ದೇಶ ಸ್ವೀಕರಿಸುವದು ಎಂದು ಅರ್ಥ. ಅಂದರೆ ಸರಕಾರದ ಯೋಜನೆಗಳನ್ನು ಸಾಮಾನ್ಯ ಜನರಿಗೆ ತಿಳಿಸಿ ಅವುಗಳನ್ನು ಅವರಿಗೆ ಮುಟ್ಟಿಸಲಾಗಿದೆ ಎಂಬ ವಿನೂತನ ಯೋಜನೆ ಇದಾಗಿದೆ. ಸರಕಾರದ ಎಲ್ಲ ಯೋಜನೆಗಳನ್ನು ತಿಳಿಸುವದು ಮತ್ತು ಅವರಿಗೆ ಒದಗಿಸುವದು.
ಕೇಂದ್ರ ಸರಕಾರ ಸ್ವಚ್ಛ ಭಾರತ ಅಂದೋಲ ಕಾರ್ಯಕ್ರಮದಡಿ ಪರಿಸರದ ಬಗ್ಗೆ ಗಿಡ ಮರಗಳನ್ನು ಬೆಳೆಸುವದು ಹಾಗೂ ಮಿತ ನೀರಿನ ಬಳಕೆ, ಎಲ್‌ಇಡಿ ಬಲ್ಪಗಳಿಂದ ವಿದ್ಯುತ್ ಉಳಿತಾಯ ಎಂಬುದನ್ನು ಸಾಮಾನ್ಯರಿಗೆ ಮನವರಿಕೆ ಮಾಡಿಕೊಡುವದು. ಒಬ್ಬ ಫಲಾನುಭವಿಗೆ ಮನೆ ಒದಗಿಸದರೆ ಸಾಲದು ಅದರ ನಿರ್ವಹಣೆ ಬಗ್ಗೆ ತಿಳಿಸುವದು, ಆರೋಗ್ಯ ನೈರ್ಮಲ್ಯ, ನೀರಿನ ಸಂರಕ್ಷಣೆ, ಸಹಬಾಳ್ವೆ, ಹೊಗೆ ರಹಿತ ಅಡುಗೆ, ಪ್ಲಾಸ್ಟಿಕ್ ಮುಕ್ತ ಸಮಾಜ ಅಂಗೀಕಾರ ಅಂದೋಲನ ಉದ್ದೇಶವಾಗಿದೆ.
ಇಂತಹ ಅಂಗೀಕಾರ ಯೋಜನೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಸರಕಾರ ಬೀದಿ ನಾಟಗಳನ್ನು, ದೂರದರ್ಶನಗಳಲ್ಲಿ, ಮಾಧ್ಯಮಗಳಲ್ಲಿ ಪ್ರಚಾರ ಕಾರ್ಯ ಭರದಿಂದ ನಡೆದಿದೆ. ಬೀದಿ ನಾಟಕದಿಂದ ಬೀದಿಯಲ್ಲಿ ಸಂಚರಿಸುವ ಸಾಮಾನ್ಯ ಜನರಿಗೂ ಇದರ ಬಗ್ಗೆ ತಿಳಿವಳಿಕೆ ಬರಲಿ ಎಂಬ ಉದ್ದೇಶದಿಂದ ಬೀದಿ ನಾಟಕಗಳಂತ ಪ್ರಚಾರಗಳು ನಡೆದಿವೆ. ಆದ್ದರಿಂದ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರ, ಹೊಗೆ ರಹಿತ ಮನೆ, ಗಿಡಮರಗಳನ್ನು ಬೆಳೆಸಿ ಸರಕಾರದ ಯೋಜನೆಗಳನ್ನು ಪಡೆದುಕೊಂಡು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡುವಲ್ಲಿ ಸಹಕರಿಸಬೇಕು ಎಂದು ತಿಳಿಸಿದರು.
ಸುನಂದಾ ಬಾಲಪ್ಪನವರ, ರಮೇಶ ಇಮ್ಮನದ, ಕಸ್ತೂರಿಬಾಯಿ ಕಾಲೇಬಾಗ, ಮೀನಾಕ್ಷಿ ವಠಾರ ವೇದಿಕೆಯಲ್ಲಿದ್ದರು. ಪುರಸಭೆ ಕಾರ್ಮಿಕರಾದ ಹುಚ್ಚಪ್ಪ ಶಿವಶರಣ, ಮುತ್ತು ಮುರಾಳ, ಚಂದು ಕಾಲೇಬಾಗ ಸೇರಿದಂತೆ ನೂರಾರು ಜನರು ಅಂಗೀಕಾರ ಅಂದೋಲನದ ಪ್ರಚಾರದಲ್ಲಿದ್ದರು.
ಹೌಂಸ ಧ್ವನಿ ಎನ್‌ಜಿಒ ಕಲಾತಂಡದ ಕಾಡು ಜಿಲಿಪಿ, ಶಿವಾನಂದ ಕ್ವಾರನವರ್,
ಮಲ್ಲಯ್ಯ ನಂದಗಾಂವ, ಶ್ರೀಶೈಲ ಜವಳಗಿ, ಯಂಕಣ್ಣ ತಳವಾರ, ಗಣಪತಿ ಸಿದ್ದಾಪುರ, ಪ್ರೇಮಾ ಕೆರೂರ, ಸಂಕವ್ವ ಕೆರೂರ ಇದ್ದರು.