ಧರ್ಮಶಾಲಾ: ಪ್ರವಾಸಿ ಇಂಗ್ಲೆಂಡ್ ವಿರುದ್ಧದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಇನ್ನಿಂಗ್ಸ್ ಮತ್ತು 64 ರನ್ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಭಾರತವು ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು 4-1 ಅಂತರದ ಗೆಲುವು ಸಾಧಿಸಿದೆ.
ಮೊದಲ ಇನ್ನಿಂಗ್ಸ್ ನಲ್ಲಿ 259 ರನ್ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೆ ಬ್ಯಾಟಿಂಗ್ ಮಾಡಲು ಪರದಾಡಿತು. ರೂಟ್ ಹೊರತುಪಡಿಸಿ ಉಳಿದ್ಯಾವ ಬ್ಯಾಟರ್ ಕೂಡಾ ಕ್ರೀಸ್ ಕಚ್ಚಿ ನಿಲ್ಲುವ ಪ್ರಯತ್ನ ಮಾಡಲಿಲ್ಲ. ರೂಟ್ 84 ರನ್ ಗಳಿಸಿ ಕೊನೆಯವರಾಗಿ ಔಟಾದರು. ಇಂಗ್ಲೆಂಡ್ ತಂಡವು 195 ರನ್ ಗಳಿಗೆ ಆಲೌಟಾಯಿತು.
ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿದರೂ ಅದ್ಭುತ ಕಮ್ ಬ್ಯಾಕ್ ಮಾಡಿದ ಟೀಂ ಇಂಡಿಯಾ ಸರಣಿಯ ಉಳಿದ ಎಲ್ಲಾ ಪಂದ್ಯಗಳನ್ನು ಗೆದ್ದು ಇತಿಹಾಸ ಬರೆಯಿತು. ಸರಣಿಯಲ್ಲಿ ಕೊಹ್ಲಿ, ಕೆಎಲ್ ರಾಹುಲ್ ಇಲ್ಲದೆ, ಒಂದು ಪಂದ್ಯಕ್ಕೆ ಜಡೇಜಾ ಇಲ್ಲದೆ, ಬುಮ್ರಾ, ಸಿರಾಜ್ ವಿಶ್ರಾಂತಿ ಪಡೆದರೂ ಸರಣಿ ಗೆಲುವು ಕಂಡಿದೆ.
ಜೈಸ್ವಾಲ್ ಅವರ ಯಶಸ್ವಿ ಬ್ಯಾಟಿಂಗ್ ಸರಣಿ, ಗಿಲ್ ಕಮ್ ಬ್ಯಾಕ್ ರೀತಿ, ಅಗತ್ಯದ ಸಮಯದಲ್ಲಿ ನಾಯಕನವಾಟವಾಡಿದ ರೋಹಿತ್, ಕುಲದೀಪ್- ಅಶ್ವಿನ್ ಸ್ಪಿನ್ ಮ್ಯಾಜಿಕ್, ಭರವಸೆ ನೀಡಿದ ಜುರೆಲ್, ಐವರ ಪದಾರ್ಪಣೆ, ಇಂಗ್ಲೆಂಡ್ ನ ಬಾಜ್ ಬಾಲ್ ಹೈಪ್ ಮಣ್ಣಲ್ಲಿ ಮಣ್ಣಾಗಿ ಹೋಗಿದ್ದು… ಇವು ಈ ಸರಣಿಯ ಹೈಲೈಟ್ಸ್.
ಸಂಕ್ಷಿಪ್ತ ಸ್ಕೋರ್
ಭಾರತ: 477
ಇಂಗ್ಲೆಂಡ್: 218 ಮತ್ತು 195