Advertisement
ಓದಿ : ಕೊರೊನಾಜನಕ ಕಥೆಗಳು: ಪುಟ್ಟ ಹೆಣ್ಣು ಮಕ್ಕಳ ತಂದೆ ಬಲಿ ಪಡೆದ ಕೋವಿಡ್ ..
Related Articles
Advertisement
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷ ಪೆರಿಕಲ್ ಎಮ್ ಸುಂದರ್, ಕಳೆದ ವರ್ಷದ ಕೋವಿಡ್ ಪರಿಸ್ಥಿತಿಯಿಂದಾಗಿ ದೊಡ್ಡ ಮಟ್ಟದಲ್ಲಿ ಉದ್ಯಮ ಕ್ಷೇತ್ರದ ಮೇಲೆ ಹೊಡೆತ ಬಿದ್ದಿತ್ತು. ಈ ವರ್ಷ ಸ್ವಲ್ಪ ಚೇತರಿಸಿಕೊಳ್ಳುತ್ತಿದ್ದಂತೆ ಮತ್ತೆ ನಷ್ಟ ಉಂಟಾಗಲಿದೆ ಕೋವಿಡ್ ಕರ್ಫ್ಯೂ ಹೇರಲಾಗಿದೆ. ಶೇಕಡಾ 25 ರಷ್ಟು ಈಗಾಗಲೇ ಸಣ್ಣ ಉದ್ಯಮಿಗಳ ಮೇಲೆ ಅಪಾರ ಪ್ರಮಾಣದಲ್ಲಿ ಪರಿಣಾಮ ಬೀರಿ ಬಾಗಿಲು ಹಾಕುವಂತಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಈ ಬಗ್ಗೆ ಅಭಿಪ್ರಾಯ ತಿಳಿಸಿದ ಕರ್ನಾಟಕ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಕೆ. ಬಿ ಅರಸಪ್ಪ, ಕಚ್ಚಾ ಸಾಮಾಗ್ರಿಗಳು ಪರ ರಾಜ್ಯಗಳಿಂದ ತರಲು ಅನಾನುಕೂಲವಾದರೇ ಉತ್ಪಾದನೆ ಕುಂಟಿತಗೊಳ್ಳುತ್ತದೆ. ಕೈಗಾರಕೆ ನಡೆಸಲು ಸಾಧ್ಯವಿಲ್ಲ. ಮತ್ತೆ ಆರ್ಥಿಕವಾಗಿ ಉದ್ಯಮ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ ಎಂದಿದ್ದಾರೆ.
ಓದಿ : ಮೊದಲು ಊರು ಸೇರೋಣ..! ಬೆಂಗಳೂರಿನಿಂದ ಹೊರಡುತ್ತಿದ್ದಾರೆ ಸಾವಿರಾರು ಜನ