Advertisement
ಎಂಜಿನಿಯರಿಂಗ್ ವಿದ್ಯಾರ್ಥಿಗಳ ಉದ್ಯೋಗ ಅವಕಾಶ, ಮಾರ್ಗದರ್ಶನ, ಕೈಗಾರಿಕೆಗಳಿಗೆ ಪ್ರಸ್ತುತ ಸನ್ನಿವೇಶದಲ್ಲಿ ಅಗತ್ಯವಿರುವ ಕೌಶಲವನ್ನೇ ಮುಖ್ಯವಾಗಿ ಇರಿಸಿಕೊಂಡು ಇಂಡಸ್ಟ್ರಿ ಹಬ್ ರಚನೆಗಾಗಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಖಾಸಗಿ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಕಾಲೇಜುಗಳು ಗುರುತಿಸುವ ನಿರ್ದಿಷ್ಟ ಸ್ಥಳಗಳಲ್ಲಿ ಈ ಖಾಸಗಿ ಸಂಸ್ಥೆಯು ಇಂಡಸ್ಟ್ರಿ ಹಬ್ ರಚನೆಗೆ ಬೇಕಾದ ವ್ಯವಸ್ಥೆ ಮಾಡಲಿದೆ. ಇದಕ್ಕಾಗಿ ಪ್ರತೀ ಕಾಲೇಜಿನಲ್ಲೂ ಪ್ರತ್ಯೇಕ ಸ್ಥಳ ಮೀಸಲಿಡಲು ಸೂಚನೆ ನೀಡಿದ್ದೇವೆ ಎಂದು ವಿಟಿಯು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಬ್‌ನಿಂದ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲವಾಗಲಿದೆ. ಉದ್ಯೋಗಾವಕಾಶ, ಅಗತ್ಯ ಕೌಶಲ ಇತ್ಯಾದಿ ಮಾಹಿತಿ ಸಿಗುತ್ತದೆ. ಆಕರ್ಷಕ ಮತ್ತು ಅತ್ಯಂತ ಪರಿಣಾಮಕಾರಿ ಪ್ರಾಜೆಕ್ಟ್ ವರ್ಕ್, ಇಂಟರ್ನ್ಶಿಪ್ ಕಾರ್ಯಕ್ರಮದ ಸಂಪೂರ್ಣ ವಿವರ ಮತ್ತು ಸದ್ಬಳಕೆ, ಉದ್ಯೋಗ ಪೂರ್ವ ತರಬೇತಿ ಇತ್ಯಾದಿ ನೀಡಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Related Articles
ಇಂಡಸ್ಟ್ರಿ ಹಬ್‌ನಡಿ ಖಾಸಗಿ ಸಂಸ್ಥೆ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದ ತಜ್ಞರನ್ನು ಕರೆಸಿ ಓರಿಯಂಟೇಶನ್, ಇಂಟರ್ನ್ಶಿಪ್ ಅವಕಾಶಗಳು, ಪ್ರಾಜೆಕ್ಟ್ ವರ್ಕ್, ಮೂಲ ಕೌಶಲ ತರಬೇತಿ, ಉದ್ಯೋಗಾವಕಾಶದ ಮಾಹಿತಿ ನೀಡಲಿದೆ. ಇಂಡಸ್ಟ್ರಿ ಹಬ್‌ನಡಿ ಖಾಸಗಿ ಸಂಸ್ಥೆ ಆಯಾ ಕಾಲೇಜಿನ ವಿದ್ಯಾರ್ಥಿಗಳಿಗೆ ಕೈಗಾರಿಕಾ ವಲಯದ ತಜ್ಞರನ್ನು ಕರೆಸಿ ಓರಿಯಂಟೇಶನ್, ಇಂಟರ್ನ್ಶಿಪ್ ಅವಕಾಶಗಳು, ಪ್ರಾಜೆಕ್ಟ್ ವರ್ಕ್, ಮೂಲ ಕೌಶಲ ತರಬೇತಿ, ಉದ್ಯೋಗಾವಕಾಶದ ಮಾಹಿತಿ ನೀಡಲಿದೆ.
Advertisement
ರಾಜು ಖಾರ್ವಿ ಕೊಡೇರಿ