ಉಡುಪಿ: ಕೈಗಾರಿಕೆ ಮತ್ತು ಶಿಕ್ಷಣ ಸಂಸ್ಥೆಗಳ ಸಂವಹನ ಅಗತ್ಯ ಎಂದು ಮಣಿಪಾಲ ವಿಶ್ವವಿದ್ಯಾ ನಿಲಯದ ಕುಲಸಚಿವ (ಮೌಲ್ಯ ಮಾಪನ) ಡಾ| ವಿನೋದ ವಿ. ಥಾಮಸ್ ಹೇಳಿದರು. ಅವರು ಮಣಿಪಾಲ ಎಂಐಟಿ ಪ್ರಿಂಟಿಂಗ್ ಆ್ಯಂಡ್ ಮೀಡಿಯ ಎಂಜಿನಿಯರಿಂಗ್ ವಿಭಾಗ ಶನಿ ವಾರ ಸಂಘಟಿಸಿದ ಏಳನೇ ಮಣಿಪಾಲ್ ಮೀಡಿಯ ಕಾಂಗ್ರೆಸ್ ಎರಡು ದಿನಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ದ.ಕ., ಉಡುಪಿ, ಬೆಂಗಳೂರಿನ ಸುಮಾರು 120 ಮುದ್ರಣ ಉದ್ಯಮಿಗಳು, ದೇಶದ ವಿವಿಧೆಡೆಗಳ ಮುದ್ರಣ ಕಾಲೇಜುಗಳ ಶಿಕ್ಷಕರು ಪಾಲ್ಗೊಂಡರು. 32 ಸಂಶೋಧನ ಪ್ರಬಂಧಗಳು ಮಂಡನೆಯಾದವು.
ಮುದ್ರಣ ಸಂಸ್ಥೆಗಳ ಕಾರ್ಮಿಕರಿಗೆ ಕೌಶಲ ಅಭಿವೃದ್ಧಿಯ ಅಗತ್ಯವಿದೆ ಎಂದು ಮಂಗಳೂರು ಸ್ಕೂಲ್ ಬುಕ್ ಕಂಪೆನಿಯ ಆಡಳಿತ ನಿರ್ದೇಶಕ ಮೋಹನದಾಸ ಭಂಡಾರಿ ತಿಳಿಸಿ ದರು. ಮುದ್ರಕರಿಗೆ ಸರಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಕುರಿತು ಉಡುಪಿ ಜಿಲ್ಲಾ ಮುದ್ರಕರ ಸಂಘದ ಅಧ್ಯಕ್ಷ ಅಶೋಕ್ ಶೆಟ್ಟಿ ತಿಳಿಸಿದರು. ಅಧ್ಯಕ್ಷತೆ ವಹಿಸಿದ ಎಂಐಟಿ ಸಹನಿರ್ದೇಶಕ (ಆರ್ ಆ್ಯಂಡ್ ಸಿ) ಡಾ| ಮನೋಹರ ಪೈ ಅವರು ಮುದ್ರಣ ಕ್ಷೇತ್ರದಲ್ಲಿ ಆಗಬೇಕಾದ ಸಂಶೋಧನೆಗಳ ಕುರಿತು ಮಾತನಾಡಿದರು.
ಮಣಿಪಾಲದ ಎಂಟಿಎಲ್ ಅಧಿಕಾರಿ ವಿನೋದಕುಮಾರ್ ಮಂಡಲ್ ಅವರು ದಿಕ್ಸೂಚಿ ಭಾಷಣದಲ್ಲಿ ಮುದ್ರಣ ಉದ್ಯಮದಲ್ಲಿ ಜಿಎಸ್‌ಟಿ ಕುರಿತು ವಿವರಿಸಿದರು. ಎಂಟಿಎಲ್ ಯುನಿಟ್ 5ರ ಜಿಎಂ (ಉತ್ಪಾದನೆ) ಶಂತನು ರಾಯ್, ಮಟ್ಟಾರ್ ರಮೇಶ ಕಿಣಿ, ಡಾ| ನಂದಿನಿ ಲಕ್ಷ್ಮೀಕಾಂತ್, ಶ್ರೀನಿವಾಸ ಮೂರ್ತಿ ಅವರು ವಿವಿಧ ವಿಷಯಗಳ ಕುರಿತು ಮಾತನಾಡಿದರು.
ಮಂಗಳೂರಿನ ಪ್ರವೀಣ್ ಪತ್ರಾವೊ, ದಿಲ್ಲಿಯ ಅಮಿತ್ ಶರ್ಮಾ, ಬೆಂಗಳೂರಿನ ಥಾಮಸ್ ಮಣಿಲ್ ರೇಗೋ, ಮಣಿಪಾಲ ಎಂಟಿಎಲ್‌ನ ಪ್ರಸಾದ್ ಅವರು ಚರ್ಚಾಗೋಷ್ಠಿಯಲ್ಲಿ ಪಾಲ್ಗೊಂಡರು.
ಸಮಾರೋಪ ಸಮಾರಂಭದಲ್ಲಿ ಅತಿಥಿಗಳಾಗಿ ಎಂಐಟಿ ನಿರ್ದೇಶಕ ಡಾ| ಡಿ. ಶ್ರೀಕಾಂತ ರಾವ್, ಗೌರವ ಅತಿಥಿಗಳಾಗಿ ಜಿಲ್ಲಾ ಮುದ್ರಕರ ಸಂಘದ ಕಾರ್ಯದರ್ಶಿ ಮಹೇಶ ಕುಮಾರ್ ಪಾಲ್ಗೊಂಡಿದ್ದರು. ಎಂಐಟಿ ವಜ್ರ ಮಹೋತ್ಸವ ಸಮಿತಿ ಅಧ್ಯಕ್ಷ ಡಾ| ರಮೇಶ್ ಸಿ. ಅವರು ಮುದ್ರಣ ವಿಭಾಗ ಮತ್ತು ಮಾಧ್ಯಮ ಉದ್ಯಮದ ಸಂಬಂಧವನ್ನು ವಿವರಿಸಿ
ದರು. ವಿಭಾಗ ಮುಖ್ಯಸ್ಥ ಡಾ| ಅಮೃತರಾಜ್ ಎಚ್. ಕೃಷ್ಣನ್ ಅವರು ವಂದಿಸಿದರು.