Advertisement

ಕೈಗಾರಿಕಾ ಇಲಾಖೆಯ 2,689.51 ಕೋಟಿ ರೂ. ಮೌಲ್ಯದ 81 ಹೊಸ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ 

11:16 AM Jun 17, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ  ಮತ್ತಷ್ಟು ಉತ್ತೇಜನ ನೀಡಿ ಉದ್ಯೋಗಗಳ ಸೃಷ್ಟಿಗೆ ಒತ್ತು ನೀಡಿರುವ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯು ಸುಮಾರು 6,825ಕ್ಕೂ ಹೆಚ್ಚು ಜನರಿಗೆ ಉದ್ಯೋಗವನ್ನು ಸೃಷ್ಟಿಸುವ 2,689.51 ಕೋಟಿ ರೂ. ಮೌಲ್ಯದ 81 ಕೈಗಾರಿಕಾ ಯೋಜನೆಗಳಿಗೆ ಗುರುವಾರ ಸಂಜೆ ಅನುಮೋದನೆ ನೀಡಿದೆ.

Advertisement

ಕರ್ನಾಟಕ ಉದ್ಯೋಗಮಿತ್ರ ಕಚೇರಿಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ.ಮುರುಗೇಶ್ ಆರ್. ನಿರಾಣಿ ನೇತೃತ್ವದಲ್ಲಿ ನಡೆದ 132ನೇ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ (ಎಸ್‍ಎಲ್‍ಎಸ್‍ಡಬ್ಲ್ಯುಸಿಸಿ) ಸಭೆಯು ಈ ಯೋಜನೆಗಳಿಗೆ ಅನುಮೋದನೆ ನೀಡಿದೆ.

ಸಮಿತಿಯು 50 ಕೋಟಿ ರೂ.ಗಿಂತ ಹೆಚ್ಚಿನ ಹೂಡಿಕೆಯ 7 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳನ್ನು ಪರಿಗಣಿಸಿ ಅನುಮೋದನೆ ನೀಡಿದೆ. 1,229.43 ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 1,734 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಅಲ್ಲದೆ 132ನೇ ಎಸ್‍ಎಲ್‍ಎಸ್‍ಡಬ್ಲ್ಯುಸಿಸಿ ಸಭೆಯಲ್ಲಿ 15 ಕೋಟಿ ರೂ.ಗಿಂತ ಹೆಚ್ಚು ಹಾಗೂ 50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 71 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ. ಹಾಗೂ 1,308.06 ಕೋಟಿ ರೂ. ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 5,091 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

151.42 ಕೋಟಿ ರೂ. ಹೂಡಿಕೆಯ ಮೂರು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. 2,689.51 ಕೋಟಿ ರೂ.ಗಳ ಹೂಡಿಕೆಯೊಂದಿಗೆ 6,825 ಜನರಿಗೆ ಉದ್ಯೋಗಾವಕಾಶವಿರುವ ಒಟ್ಟು 81 ಯೋಜನೆಗಳಿಗೆ ಅನುಮತಿ ನೀಡಲಾಗಿದೆ.

Advertisement

ಅನುಮೋದನೆ ನೀಡಿರುವ ಪ್ರಸ್ತಾವನೆಗಳು:

ಪರ್ಪಲ್‍ಸ್ಟಾರ್ ಹೈಜೀನ್ ಪ್ರೈವೇಟ್ ಲಿಮಿಟೆಡ್ – ಹೂಡಿಕೆ 270 ಕೋಟಿ ರೂ., ಉದ್ಯೋಗ – 400

ಬೆಳಗಾವಿ ಶುಗರ್ಸ್ ಪ್ರೈವೇಟ್ 240.84 ಕೋಟಿ ರೂ. ಹೂಡಿಕೆ, 170 ಉದ್ಯೋಗ

ಪರತ್ಪರ ಕಾಫಿ ಲಿಮಿಟೆಡ್ -236.8 ಕೋಟಿ ರೂ. ಹೂಡಿಕೆ, 200 ಉದ್ಯೋಗ

ಲಾಜಿಕಲಿ ಇನ್ಫೋಮೀಡಿಯಾ ಪ್ರೈವೇಟ್ ಲಿಮಿಟೆಡ್- 228.19 ಕೋಟಿ ರೂ. ಹೂಡಿಕೆ, 614 ಉದ್ಯೋಗ

ಎಎನ್‍ಎಸ್ ಪೇಪರ್ ಪ್ರೈವೇಟ್ ಲಿಮಿಟೆಡ್ -100 ಕೋಟಿ ರೂ. ಹೂಡಿಕೆ, 100 ಮಂದಿಗೆ ಉದ್ಯೋಗ

ಗೋದಾವತ್ ಪುಡ್ ಪ್ರೋ ಪ್ರೈವೇಟ್ ಲಿಮಿಟೆಡ್ -98.60 ಕೋಟಿ ರೂ. ಹೂಡಿಕೆ, ಉದ್ಯೋಗ – 30

ಜ್ಯೋತಿಸ್ನಾ ಲೈ-ಹೈಟೆಕ್ ಪ್ರೈವೇಟ್ ಲಿಮಿಟೆಡ್- 50 ಕೋಟಿ ರೂ. ಹೂಡಿಕೆ, ಜೊತೆಗೆ 220 ಉದ್ಯೋಗ

ಸಭೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇವಿ ರಮಣರೆಡ್ಡಿ, ಕೈಗಾರಿಕಾ ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಡಾ.ಎನ್ ಶಿವಶಂಕರ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ್ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next