Advertisement

ಕೈಗಾರಿಕಾ ಮಾಲಿನ್ಯದ ಬಗ್ಗೆ “ನೀರಿ’ಅಧ್ಯಯನ

12:35 AM Mar 21, 2023 | Team Udayavani |

ಮಂಗಳೂರು: ನಗರದ ಕೈಗಾರಿಕಾ ಘಟಕಗಳ 10 ಕಿ.ಮೀ. ವ್ಯಾಪ್ತಿಯಲ್ಲಿ ಯಾವ ರೀತಿಯ ಮಾಲಿನ್ಯ ಉಂಟಾಗುತ್ತಿದೆ ಎನ್ನುವುದರ ಮೌಲ್ಯಮಾಪನ ಮಾಡುವ ಹೊಣೆಯನ್ನು ಕೇಂದ್ರದ ರಾಷ್ಟ್ರೀಯ ಪರಿಸರ ಎಂಜಿನಿ ಯರಿಂಗ್‌ ಸಂಶೋಧನ ಸಂಸ್ಥೆ (ನೀರಿ)ಗೆ ವಹಿಸಲಾಗಿದೆ ಎಂದು ಕರ್ನಾಟಕ ವಿಧಾನಪರಿಷತ್‌ ಸರಕಾರಿ ಭರವಸೆಗಳ ಸಮಿತಿ ಅಧ್ಯಕ್ಷ ಬಿ.ಎಂ. ಫಾರೂಕ್‌ ತಿಳಿಸಿದ್ದಾರೆ.

Advertisement

ದ.ಕ. ಜಿ.ಪಂ. ನೇತ್ರಾವತಿ ಸಭಾಂಗಣದಲ್ಲಿ ಸೋಮವಾರ ಅವರು ವಾಣಿಜ್ಯ, ಕೈಗಾರಿಕೆ ಮತ್ತು ನಗರಾಭಿವೃದ್ಧಿ ಇಲಾಖೆಗಳಿಗೆ ಸಂಬಂಧಿಸಿದ ಬಾಕಿ ಭರವಸೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದರು. ನೀರಿ ಸಂಸ್ಥೆಯು ಮೇ ತಿಂಗಳಿನ ಅಂತ್ಯದೊಳಗೆ ಮಧ್ಯಾಂತರ ಹಾಗೂ ಆಗಸ್ಟ್‌ನಲ್ಲಿ ಅಂತಿಮ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.

ಮಂಗಳೂರು, ಬೈಕಂಪಾಡಿ ಆಸು ಪಾಸಿನ ಕೆಲವು ಬೃಹತ್‌ ಕೈಗಾರಿಕೆಗಳ ಪರಿಸರದಲ್ಲಿ ಮಾಲಿನ್ಯದ ಆರೋಪ ಗಳಿವೆ. ನಮ್ಮ ಪರಿಶೀಲನೆಯ ವೇಳೆ ಬಾವಿಗಳಲ್ಲಿ ತೈಲದ ಅಂಶ ಕಂಡು ಬಂದಿದೆ. ಕುಡುಂಬೂರು ಹೊಳೆ ಯಲ್ಲಿ ಮಾಲಿನ್ಯ ವಿಪರೀತವಾಗಿದೆ. ಇದು ಕೈಗಾರಿಕೆಗಳ ಪರಿಸರ ಮಾಲಿನ್ಯದ ಪ್ರಭಾವ ಎಂಬ ದೂರು ಗಳು ಬರುತ್ತಿವೆ. ಆದರೆ ಸಂಬಂಧ ಪಟ್ಟ ಕೈಗಾರಿಕೆಗಳ ಆಡಳಿತ ದವರು ಸ್ಥಳೀಯರ ಆರೋಪವನ್ನು ನಿರಾಕರಿ ಸುತ್ತಿದ್ದಾರೆ. ಹೀಗಾಗಿ ತೃತೀಯ ಪಾರ್ಟಿ “ನೀರಿ’ಯಿಂದ ಮೌಲ್ಯ ಮಾಪನ ನಡೆಸಲಾಗುತ್ತಿದೆ ಎಂದರು.

ಇದೇ ಪರಿಸರದಲ್ಲಿ ಜನರು ಅಸಹಜ ರೀತಿಯಲ್ಲಿ ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುವ ಬಗ್ಗೆ ದೂರುಗಳು ಬಂದಿವೆ. ಅದಕ್ಕಾಗಿ ಸೂಕ್ತ ಅಧ್ಯಯನ ನಡೆಸುವ ಹೊಣೆ ಯನ್ನು ಕೆಎಂಸಿ ಆಸ್ಪತ್ರೆಯ ಉಣ್ಣಿ ಕೃಷ್ಣನ್‌ ಅವರ ನೇತೃತ್ವದಲ್ಲಿ ಸರಕಾರಿ ಆರೋಗ್ಯಾಧಿಕಾರಿಗಳ ತಂಡಕ್ಕೆ ವಹಿಸ ಲಾಗಿದೆ. ಮೂರು ತಿಂಗಳಲ್ಲಿ ವರದಿ ಸಲ್ಲಿಸುವ ನಿರೀಕ್ಷೆ ಇದೆ ಎಂದರು.

ಸುರತ್ಕಲ್ ಹಾಗೂ ಉಳ್ಳಾಲದ ಮ್ಯಾನ್‌ಹೋಲ್ ಸೀವರ್‌ ಲೈನ್‌ ಮತ್ತು ಮಲಿನ ನೀರು ಶುದ್ಧೀಕರಣ ಘಟಕದ ಕುರಿತು ಚರ್ಚೆ ನಡೆಸ ಲಾಗಿದೆ. ಕುದುರೆಮುಖ ಜಂಕ್ಷನ್‌ನಿಂದ ಎಸ್‌ಇಝಡ್‌ ಕಡೆಗೆ ಹೋಗುವ ಒಡಿಸಿ ರಸ್ತೆಯಲ್ಲಿ ಅನೇಕ ತೈಲ ಪೈಪ್‌ಲೈನ್‌ ಇದ್ದು, ಅವುಗಳ ಸುರಕ್ಷೆಯ ಬಗ್ಗೆ ಚರ್ಚಿಸಲಾಗಿದೆ. ಮಂಗಳೂರಿನಲ್ಲಿ ಬಹುಮಹಡಿ ಕಟ್ಟಡಗಳು ಹೆಚ್ಚುತ್ತಿರುವುದರಿಂದ 100 ಅಡಿ ಎತ್ತರದ ಅಗ್ನಿಶಮನ ಏಣಿಯಂತಹ ಉಪಕರಣಗಳ ಖರೀದಿ ಬಗ್ಗೆ ಅಗ್ನಿಶಾಮಕ ಇಲಾಖೆಗೆ ಸೂಚಿಸಲಾಗಿದೆ ಎಂದು ಫಾರೂಕ್‌ ತಿಳಿಸಿದರು.

Advertisement

ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ದೊರೆಯುತ್ತಿಲ್ಲ, ಕೈಗಾರಿಕೆ ಗಳಿಗೆ ಭೂಮಿ ನೀಡಿದವರಿಗೆ ಸಮ ರ್ಪಕವಾಗಿ ಪರಿಹಾರ ಒದಗಿಸಿಲ್ಲ, ನಿವೇಶನ ದೊರೆಯುತ್ತಿಲ್ಲ ಮುಂತಾದ ಅನೇಕ ದೂರುಗಳು ಸಮಿತಿಯ ಮುಂದೆ ಬಂದಿವೆ. ಇವುಗಳಲ್ಲಿ ಸಾಕಷ್ಟು ದೂರುಗಳು ಇತ್ಯರ್ಥವಾಗಿವೆ, ಎಂಆರ್‌ಪಿಎಲ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಪ್ರಯತ್ನ ನಡೆದಿದೆ. ಉನ್ನತ ಹುದ್ದೆಗಳಿಗೆ ಅರ್ಹತಾ ಪರೀಕ್ಷೆ ಮೂಲಕವೇ ಆಯ್ಕೆ ಮಾಡಲಾಗುತ್ತದೆ ಎಂದು ಕಂಪೆನಿ ಹೇಳುತ್ತಿದೆ ಎಂದರು.

ಕೈಗಾರಿಕಾ ಪ್ರದೇಶದಲ್ಲಿ ಎಸ್‌ಟಿಪಿ
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ಸಂಸ್ಕರಣ ಸ್ಥಾವರ (ಎಸ್‌ಟಿಪಿ) ನಿರ್ಮಾಣದ ಬಗ್ಗೆ 4 ತಿಂಗಳಲ್ಲಿ ಡಿಪಿಆರ್‌ ಸಿದ್ಧಪಡಿಸಿ, ಮಂಡಳಿ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದು ಕಾರ್ಯ ಗತಗೊಳಿಸಲಾಗುವುದು ಎಂದು ಕೆಐಎಡಿಬಿ ಸಿಇಒ ಗಿರೀಶ್‌ ತಿಳಿಸಿದರು.

ಈಡೇರದ ಭರವಸೆಗಳ ಬಗ್ಗೆ ಸಮಿತಿ ಪರಿಶೀಲನೆ ನಡೆಸಿ, ಪ್ರಗತಿ ವೀಕ್ಷಿಸು ತ್ತದೆ. ಸಮಸ್ಯೆ ಇತ್ಯರ್ಥವಾಗದೆ ಕಡತ ಮುಚ್ಚುವುದಿಲ್ಲ ಎಂದು ತಿಳಿಸಿದರು.

ಸಮಿತಿಯ ಸದಸ್ಯರಾದ ಆಯನೂರು ಮಂಜುನಾಥ್‌, ಸುಶೀಲ್‌ ನಮೋಶಿ, ಎಸ್‌.ವಿ. ಸಂಕನೂರ, ಎಸ್‌. ರುದ್ರೇಗೌಡ, ಕೆ.ಎ. ತಿಪ್ಪೇಸ್ವಾಮಿ , ಅಗ್ನಿಶಾಮಕ ಇಲಾಖೆಯ ಎಡಿಜಿಪಿ ಹರಿಶೇಖರನ್‌, ಕೆಐಎಡಿಬಿ ಸಿಇಒ ಗಿರೀಶ್‌, ಪರಿಸರ ಇಲಾಖೆಯ ಆಯುಕ್ತ ಗೋಕುಲ್‌, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಗಿರಿಧರ್‌, ಜಿಲ್ಲಾಧಿಕಾರಿ ರವಿಕುಮಾರ್‌, ಜಿ.ಪಂ. ಸಿಇಒ ಡಾ| ಕುಮಾರ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next