Advertisement

ಇಂದ್ರಾಳಿ ಹೊಸ ರೈಲ್ವೇ ಬ್ರಿಡ್ಜ್:  ಕಾಮಗಾರಿ ತಿಂಗಳಿಂದ ಸ್ಥಗಿತ

08:38 PM Sep 06, 2021 | Team Udayavani |

ಉಡುಪಿ: ಕಡಿಯಾಳಿ- ಮಣಿಪಾಲ ಮಾರ್ಗದ ಇಂದ್ರಾಳಿ ಹೊಸ ರೈಲ್ವೇ ಬ್ರಿಡ್ಜ್ ಕಾಮಗಾರಿ ಸ್ಥಗಿತಗೊಂಡು ತಿಂಗಳು ಸಮೀಪಿಸುತ್ತಿದ್ದು, ಶೀಘ್ರ  ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸ್ಥಳೀಯರು ಆಗ್ರ ಹಿಸಿದ್ದಾರೆ.

Advertisement

ಇಂದ್ರಾಳಿ ರೈಲ್ವೇ ಸೇತುವೆ ನಿರ್ಮಾಣಕ್ಕೆ ರೈಲ್ವೇ ಸುರಕ್ಷತಾ ಆಯುಕ್ತರು (ಸಿಆರ್‌ಎಸ್‌) ಹೆದ್ದಾರಿ ಇಲಾಖೆಯವರಿಗೆ ಅನು ಮತಿ ನೀಡಿದ್ದು, ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ 2020ರ ಫೆಬ್ರವರಿಯಲ್ಲಿ  ಪ್ರಾರಂಭಿಸಲಾಗಿತ್ತು.

ಇಂದ್ರಾಳಿ ಶಾಲೆ,  ಇಂದ್ರಾಳಿ ಪೆಟ್ರೋಲ್‌ ಬಂಕ್‌ ಸಮೀಪ ಎರಡು ಕಾಂಕ್ರೀಟ್‌ ಸ್ತಂಭಗಳ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಸೇತುವೆ ಗರ್ಡರ್‌ (ಸೇತುವೆ ಮೇಲ್ಭಾಗ) ಲಾಂಚಿಂಗ್‌ ಕೆಲಸ ಬಾಕಿ ಇದೆ. ಆರ್‌ಡಿಎಸ್‌ಒ ಅನುಮೋದಿತ ಲಕ್ನೋ ಸಂಸ್ಥೆಯೊಂದು ಗರ್ಡರ್‌ ನಿರ್ಮಾಣ ಗುತ್ತಿಗೆಯನ್ನು ಪಡೆದುಕೊಂಡಿದ್ದು, ಅವರೇ ಬಂದು ಗರ್ಡರ್‌ ಅಳವಡಿಸಬೇಕಾಗಿದೆ. -ಮಂಜುನಾಥ ನಾಯಕ್‌,  ಹೆದ್ದಾರಿ ಇಲಾಖೆ ಎಂಜಿನಿಯರ್‌

ರೈಲ್ವೇ ಇಲಾಖೆಯಿಂದ ಸೇತುವೆ ನಿರ್ಮಾಣ ಕಾಮಗಾರಿ ಅನುಮೋದನೆ ನೀಡಲಾಗಿದೆ. ಇತರೆ ಯಾವುದೇ ಕೆಲಸಗಳು ಬಾಕಿ ಉಳಿದಿಲ್ಲ. ಹೆದ್ದಾರಿ ಇಲಾಖೆ ಸೇತುವೆಗೆ ಗರ್ಡರ್‌ ಅಳವಡಿಸುವ ವೇಳೆ ರೈಲು ಸಂಚಾರ ನಿಷೇಧಿಸಲಾಗುತ್ತದೆ. ಅಳವಡಿಕೆ ಅನಂತರ ತತ್‌ಕ್ಷಣ ಪರಿಶೀಲನೆ ನಡೆಸಿ ರೈಲು ಸಂಚಾರಕ್ಕೆ ಅನುಮತಿ ನೀಡಲಾಗುತ್ತದೆ.- ರಾಜೇಶ್‌ ನಾಯಕ್‌ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ, ಕೊಂಕಣ್‌ ರೈಲ್ವೇ  ಕಾರವಾರ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next