Advertisement

2,789 ಜನರಿಗೆ ಇಂದ್ರಧನುಷ್‌ ಲಸಿಕೆ ಗುರಿ

03:50 PM Dec 03, 2019 | Team Udayavani |

ಮಂಡ್ಯ: ಇಂದಿನಿಂದ ಡಿ.10ರವರೆಗೆ ನಡೆಯುವ ಇಂದ್ರಧನುಷ್‌ ಅಭಿಯಾನದಲ್ಲಿ 2600 ಮಕ್ಕಳು, 189 ಗರ್ಭಿಣಿ ಸೇರಿದಂತೆ ಜಿಲ್ಲಾದ್ಯಂತ 2789ಜನರಿಗೆ ಲಸಿಕೆ ಹಾಕುವ ಗುರಿಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದರು.ಇಲ್ಲಿನ ಗಾಂಧಿನಗರ ಅಂಗನವಾಡಿಕೇಂದ್ರ ದಲ್ಲಿ ಸೋಮವಾರ ಜಿಲ್ಲಾಡಳಿತ,

Advertisement

ಜಿಪಂ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯಿಂದ ಆಯೋಜಿಸಿದ್ದ ತೀವ್ರಗೊಂಡ ಇಂದ್ರ ಧನುಷ್‌ ಅಭಿಯಾನ 2ಕ್ಕೆಚಾಲನೆ ನೀಡಿ ಮಾತನಾಡಿದರು.

ಮಂಡ್ಯ ತಾಲೂಕಿನಲ್ಲಿ 652 ಮಕ್ಕಳು,48 ಗರ್ಭಿಣಿಯರು, ಮದ್ದೂರಿನಲ್ಲಿ 445ಮಕ್ಕಳು ಮತ್ತು 47 ಗರ್ಭಿಣಿಯರು, ಮಳವಳ್ಳಿಯಲ್ಲಿ 452 ಮಕ್ಕಳು ಮತ್ತು 29 ಗರ್ಭಿಣಿಯರು, ಪಾಂಡವಪುರದಲ್ಲಿ 293 ಮಕ್ಕಳು ಮತ್ತು 22 ಗರ್ಭಿಣಿಯರು, ಶ್ರೀರಂಗಪಟ್ಟಣದಲ್ಲಿ 370 ಮಕ್ಕಳು ಮತ್ತು 26 ಗರ್ಭಿಣಿಯರು, ಕೆ.ಆರ್‌.  ಪೇಟೆಯಲ್ಲಿ 332 ಮಕ್ಕಳು ಮತ್ತು 13 ಗರ್ಭಿಣಿಯರು ಹಾಗೂ ನಾಗಮಂಗಲ ತಾಲೂಕಿನಲ್ಲಿ 56 ಮಕ್ಕಳು ಮತ್ತು 4 ಗರ್ಭಿಣಿಯರಿಗೆ ಲಸಿಕೆ ಹಾಕಬೇಕಿದೆಎಂದು ಮಾಹಿತಿ ನೀಡಿದರು.

ಜಿಲ್ಲಾದ್ಯಂತ ನಡೆಯುತ್ತಿರುವ ತೀವ್ರಗೊಂಡ ಇಂದ್ರಧನುಷ್‌ ಅಭಿಯಾನದ ಯಶಸ್ವಿಗೆ ಪ್ರತಿಯೊಬ್ಬರೂ ಸಹಕರಿಸುವಂತೆ ಮನವಿ ಮಾಡಿದರಲ್ಲದೆ, ಈಹಿಂದೆ ನಡೆಸಿರುವ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸಿಕೊಳ್ಳ ದವರನ್ನು ಗುರಿಯಾಗಿಸಿಕೊಂಡು ಮತ್ತೂಮ್ಮೆ ಅಭಿಯಾನ ಆಯೋಜಿಸಲಾಗಿದೆ. ಆದ್ದರಿಂದ 2 ವರ್ಷದೊಳಗಿನ ಮಕ್ಕಳು ಮತ್ತು ಗರ್ಭಿಣಿ ಯರಿಗೆ ತಪ್ಪದೇ ಲಸಿಕೆ ಹಾಕಿಸಿಕೊಳ್ಳಬೇಕು. ಇನ್ನು ಲಸಿಕೆ ಹಾಕಿಸಿಕೊಳ್ಳುವುದರಿಂದ10 ಕಾಯಿಲೆಯಿಂದ ಸುರಕ್ಷಿತವಾಗಿರಬಹುದು. ಲಸಿಕೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಸಲಹೆ ನೀಡಿದರು.

ನಗರಸಭಾ ಸದಸ್ಯೆ ಇಶ್ರತ್‌ಫಾತಿಮಾ, ಜಿಪಂ ಸಿಇಒ ಕೆ.ಯಾಲಕ್ಕಿಗೌಡ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ.ಮಂಚೇಗೌಡ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್‌. ರಾಜಮೂರ್ತಿ, ಆರ್‌ಸಿಎಚ್‌ ಅಧಿಕಾರಿ ಡಾ.ಸೋಮಶೇಖರ್‌, ಸಿಡಿಪಿಒ ಚೇತನ್‌ ಕುಮಾರ್‌, ಡಾ.ಶಶಿಕಲಾ, ಡಾ.ಕೆ. ಜೆ.ಭವಾನಿ ಶಂಕರ್‌ ಇತರರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next