Advertisement

16 ತಿಂಗಳ ನಂತರ ಇದೇ ಮೊದಲ ಬಾರಿಗೆ ಇಂದೋರ್‌ ನಲ್ಲಿ 1 ಕೋವಿಡ್ ಸೋಂಕು ದಾಖಲು

06:19 PM Jul 16, 2021 | Team Udayavani |

ಮಧ್ಯಪ್ರದೇಶ : 16 ತಿಂಗಳ ನಂತರ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದ ಇಂದೋರ್‌ ನಲ್ಲಿ ಒಂದು ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದೆ ಎಂದು ಅಧಿಕಾರಿಯೊಬ್ಬರು ಇಂದು(ಶುಕ್ರವಾರ, ಜುಲೈ 16) ತಿಳಿಸಿದ್ದಾರೆ.

Advertisement

ಕೋವಿಡ್ ಸಾಂಕ್ರಾಮಿಕ ರೋಗದ ಮೂರನೇ ಅಲೆ ಮತ್ತು ಲಸಿಕಾ ಅಭಿಯಾನದ ಸಿದ್ಧತೆಗಳ ಮಧ್ಯೆ, ಮಧ್ಯಪ್ರದೇಶದಲ್ಲಿ ಸೋಂಕಿನ ದೈನಂದಿನ ಸಂಖ್ಯೆ ಕ್ರಮೇಣ ಕಡಿಮೆಯಾಗಿದೆ.

ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ ಕೇಸ್: ಅನಿಲ್ ದೇಶ್ ಮುಖ್ 4 ಕೋಟಿ ರೂ. ಆಸ್ತಿ ಮುಟ್ಟುಗೋಲು

ಈ ಬಗ್ಗೆ ಪ್ರತಿಕ್ರಯಿಸಿದ ಕೋವಿಡ್ 19 ನೋಡಲ್ ಅಧಿಕಾರಿ ಡಾ.ಅಮಿತ್ ಮಲಕರ್, “ಕಳೆದ 24 ಗಂಟೆಗಳಲ್ಲಿ, ನಾವು 8,923 ಮಾದರಿಗಳನ್ನು ಪರೀಕ್ಷಿಸಿದ್ದೇವೆ ಮತ್ತು ಅವುಗಳಲ್ಲಿ ಒಬ್ಬರಿಗೆ ಮಾತ್ರ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಕೋವಿಡ್ ಸೋಂಕಿನಿಂದ ತತ್ತರಿಸಿ ಹೋಗಿದ್ದ ಜಿಲ್ಲೆಗಳಲ್ಲಿ ಒಂದಾಗಿರುವ ಮಧ್ಯಪ್ರದೇಶದ ಇಂದೋರ್ ನಲ್ಲಿ 16 ತಿಂಗಳಲ್ಲಿ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ ಒಂದು ಸೋಂಕು ದಾಖಲಾಗಿದೆ ಎಂದು ಅವರು ತಿಳಿಸಿದ್ದಾರೆ.

Advertisement

ಕೋವಿಡ್ ಸೋಂಕು ಇನ್ನೂ ಮುಗಿದಿಲ್ಲ. ಇವತ್ತು ಒಂದು ಸೋಂಕು ಪತ್ತೆಯಾಗಿದೆ ಎಂದ ಮಾತ್ರಕ್ಕೆ ಸೋಂಕು ಇಲ್ಲ ಎಂದರ್ಥವಲ್ಲ. ಜನರು ಎಚ್ಚರವನ್ನು ತಪ್ಪಬಾರದು. ಕೋವಿಡ್ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಸಂಭಾವ್ಯ ಮೂರನೇ ಅಲೆಯ ಬಗ್ಗೆ ಯಾವ ನಿರ್ಲಕ್ಷ್ಯ ಬೇಡ ಎಂದಿದ್ದಾರೆ.

ಇನ್ನು,  ಅಧಿಕೃತ ಮಾಹಿತಿಯ ಪ್ರಕಾರ, ಕಳೆದ 16 ತಿಂಗಳಲ್ಲಿ ಇಂದೋರ್ ಜಿಲ್ಲೆಯಲ್ಲಿ ಸುಮಾರು 1.53 ಲಕ್ಷ ಜನರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರು ಮತ್ತು ಅವರಲ್ಲಿ 1,391 ಮಂದಿ ಚಿಕಿತ್ಸೆಯ ಪಡೆಯುತ್ತಿರುವಾಗಲೇ ಸಾವನ್ನಪ್ಪಿರುವುದಾಗಿ ಎನ್ ಡಿ ಟಿವಿ ವರದಿ ಮಾಡಿದೆ.

ಮಧ್ಯಪ್ರದೇಶದಲ್ಲಿ ನಿನ್ನೆ(ಗುರುವಾರ, ಜುಲೈ 15) 20 ಹೊಸ ಕೋವಿಡ್  ಪ್ರಕರಣಗಳು ವರದಿಯಾಗಿದ್ದು, ಇದು ರಾಜ್ಯದ ಒಟ್ಟು ಸೋಂಕಿನ ಪ್ರಮಾಣವನ್ನು 7,91,614 ಕ್ಕೆ ತಲುಪಿಸಿದೆ.

ಇದನ್ನೂ ಓದಿ :   ಮುಂಬಯಿ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಇಳಿಕೆಯೊಂದಿಗೆ ವಹಿವಾಟು ಅಂತ್ಯ

Advertisement

Udayavani is now on Telegram. Click here to join our channel and stay updated with the latest news.

Next