ಇಂದೋರ್: ಮಾದಕ ವ್ಯಸನಿ ತಂದೆಯೊಬ್ಬ ತನ್ನ 8 ವರ್ಷದ ಮಗಳನ್ನೇ ಕೊಂದಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ನಲ್ಲಿ ನಡೆದಿರುವುದು ವರದಿಯಾಗಿದೆ.
ಬಡತನದಲ್ಲಿ ಬದುಕು ಸಾಗಿಸುತ್ತಿರುವ ತಂದೆ ಮಾದಕ ವ್ಯಸನಿಯಾಗಿದ್ದಾನೆ. ಈತನ 8 ವರ್ಷದ ಮಗಳು ತಂದೆಯ ಬಳಿ ಚಾಕ್ಲೇಟ್ ಹಾಗೂ ಆಟಿಕೆಗಳನ್ನು ಕೇಳುತ್ತಿದ್ದಳು. ಇದರಿಂದ ಬೇಸತ್ತು ಹೋದ ತಂದೆ, ಆಕೆಯನ್ನು ಶನಿವಾರ ರಾತ್ರಿ ನಿರ್ಮಾಣ ಹಂತದ ಕಟ್ಟಡದ ಬಳಿ ಕರೆದುಕೊಂಡು ಹೋಗಿ ಕಲ್ಲುಗಳಿಂದ ತಲೆ ಮೇಲೆ ಹಲ್ಲೆಗೈದು ಆಕೆಯನ್ನು ಕೊಲೆಗೈದಿದ್ದಾನೆ ಎಂದು ಘಟನೆ ಸಂಬಂಧ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.
ಆರೋಪಿ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಯ ಪತ್ನಿ ಮೂರು ವರ್ಷಗಳ ಹಿಂದೆ ಆತನನ್ನು ಬಿಟ್ಟು ಹೋಗಿದ್ದಾಳೆ. ಇನ್ನು ಆರೋಪಿಯ ತಾಯಿ ದೇವಸ್ಥಾನದ ಬಳಿ ಭಿಕ್ಷೆ ಬೇಡುತ್ತಾಳೆ. ಆರೋಪಿಯಿಂದ ಮತದಾರರ ಗುರುತಿನ ಚೀಟಿಯನ್ನು ವಶಪಡಿಸಿಕೊಂಡಿದ್ದು, ಆದರೆ ಪಡಿತರ ಚೀಟಿ ಪತ್ತೆಯಾಗಿಲ್ಲ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Related Articles