Advertisement

ಇಂದೋರ್‌: ಪಂಜಾಬ್‌-ಪುಣೆ ಕದನ

08:12 AM Apr 08, 2017 | |

ಇಂದೋರ್‌: ನಾಯಕ ಸ್ಟೀವನ್‌ ಸ್ಮಿತ್‌ ಅವರ ಸಿಡಿಲಬ್ಬರದ ಬ್ಯಾಟಿಂಗ್‌ ಸಾಹಸದಿಂದ ಗುರುವಾರ ರಾತ್ರಿ ಮುಂಬೈ ಇಂಡಿಯನ್ಸ್‌ಗೆ 7 ವಿಕೆಟ್‌ ಅಂತರದ ಭರ್ಜರಿ ಸೋಲುಣಿಸಿದ ರೈಸಿಂಗ್‌ ಪುಣೆ ಸೂಪರ್‌ ಜೈಂಟ್‌ 10ನೇ ಐಪಿಎಲ್‌ನಲ್ಲಿ ಎರಡನೇ ಹೋರಾಟಕ್ಕೆ ಅಣಿಯಾಗಿದೆ. ಶನಿವಾರ ಸಂಜೆ ಇಂದೋರ್‌ನ ಹೋಳ್ಕರ್‌ ಸ್ಟೇಡಿಯಂನಲ್ಲಿ “ಆತಿಥೇಯ’ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ಧ ಸೆಣಸಲಿದೆ. ಪಂಜಾಬ್‌ಗ ಇದು ಮೊದಲ ಪಂದ್ಯ.

Advertisement

ಮುರಳಿ ವಿಜಯ್‌ ಗಾಯಾಳಾದ ಕಾರಣ ಪಂಜಾಬ್‌ ಈ ಬಾರಿ ಆಸ್ಟ್ರೇಲಿಯದ ಸ್ಫೋಟಕ ಬ್ಯಾಟ್ಸ್‌ಮನ್‌ ಗ್ಲೆನ್‌ ಮ್ಯಾಕ್ಸ್‌ವೆಲ್‌ ನಾಯಕತ್ವದಲ್ಲಿ ಕಣಕ್ಕಿಳಿಯಲಿದೆ. ಹೀಗಾಗಿ ಎರಡೇ ದಿನಗಳಲ್ಲಿ ಮತ್ತೂಮ್ಮೆ ಆಸೀಸ್‌ ನಾಯಕರಿಬ್ಬರ ನಡುವಿನ ಹೋರಾಟಕ್ಕೆ ಐಪಿಎಲ್‌ ಸಾಕ್ಷಿಯಾಗಲಿದೆ. ಮ್ಯಾಕ್ಸ್‌ ವೆಲ್‌ ಪಡೆ ಮ್ಯಾಜಿಕ್‌ ಮಾಡೀತೇ ಅಥವಾ ಪುಣೆ ತನ್ನ ಪಾರಮ್ಯ ಮುಂದುವರಿಸೀತೇ ಎಂಬುದು ಈ ಪಂದ್ಯದ ಕೌತುಕ.

ಪುಣೆ ಪರಿಪೂರ್ಣ ಪ್ರದರ್ಶನ

ಬೈ ವಿರುದ್ಧ ಪುಣೆ ಪರಿಪೂರ್ಣ ಪ್ರದ ರ್ಶನ ನೀಡುವ ಮೂಲಕ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಮುಖ್ಯವಾಗಿ ಧೋನಿಯಿಂದ ತಂಡದ ನಾಯಕತ್ವ ಪಡೆದ ಸ್ಟೀವನ್‌ ಸ್ಮಿತ್‌ ಹಾಗೂ ಓಪನರ್‌ ಅಜಿಂಕ್ಯ ರಹಾನೆ ಅವರ ಅಮೋಘ ಬ್ಯಾಟಿಂಗ್‌ ಪ್ರದರ್ಶನ ಪುಣೆ ಇನ್ನಿಂಗ್ಸಿನ ಹೈಲೈಟ್‌ ಆಗಿ ದಾಖಲಾಯಿತು. ಮುಂಬೈ ವಿರುದ್ಧ ಅತ್ಯಧಿಕ ರನ್‌ ಬೆನ್ನಟ್ಟಿ ಗೆದ್ದ ದಾಖಲೆ ಪುಣೆಯದ್ದಾಯಿತು. ಅಶೋಕ್‌ ದಿಂಡ ಅಂತಿಮ ಓವರಿನಲ್ಲಿ 30 ರನ್‌ ನೀಡಿ ದುಬಾರಿಯಾದರೂ ಅಂತಿಮ ಓವರಿನಲ್ಲೇ ತಿರುಗೇಟು ನೀಡುವ ಮೂಲಕ ಪುಣೆ ವಿಜಯೋತ್ಸವ ಆಚರಿಸಿದ್ದನ್ನು ಮರೆಯುವಂತಿಲ್ಲ. ಸ್ಮಿತ್‌ ಸಿಡಿಸಿದ ಆ 2 ಸತತ ಸಿಕ್ಸರ್‌ಗಳು ಮುಂಬೈಗೆ ಕಂಟಕವಾಗಿ ರಿಣಮಿಸಿದವು. ಅವಳಿ ಲೆಗ್‌ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿ ಯಶಸ್ವಿ ಯಾದದ್ದು ಸ್ಮಿತ್‌ ಅವರ ಮತ್ತೂಂದು ದಿಟ್ಟ ನಡೆಗೆ ಸಾಕ್ಷಿ. ತಾಹಿರ್‌ ಮತ್ತು ಝಂಪ ಅವರನ್ನು ಎದುರಿಸಿ ನಿಂತರಷ್ಟೇ ಪಂಜಾಬ್‌ಗ ಉಳಿಗಾಲ. ಮಧ್ಯಮ ವೇಗಿ ರಜತ್‌ ಭಾಟಿಯ ಕೂಡ ನಿಯಂತ್ರಿತ ದಾಳಿ ಸಂಘಟಿಸಿದ್ದು ತಂಡದ ಪಾಲಿಗೆ ಬೋನಸ್‌ ಆಗಿತ್ತು (3-0-14-2). 

ಪಂಜಾಬ್‌ನಲ್ಲೂ  ಹಿಟ್ಟರ್
ಪಂಜಾಬ್‌ ಸಾಕಷ್ಟು ಮಂದಿ ಬಿಗ್‌ ಹಿಟ್ಟರ್‌ಗಳನ್ನು ಒಳಗೊಂಡಿರುವ ತಂಡ. ನಾಯಕ ಮ್ಯಾಕ್ಸ್‌ವೆಲ್‌, ಗಪ್ಟಿಲ್‌, ಮಿಲ್ಲರ್‌, ಮಾರ್ಗನ್‌, ಸಮ್ಮಿ, ಮಾರ್ಷ್‌, ಸಾಹಾ ಅವರೆಲ್ಲ ಬ್ಯಾಟಿಂಗಿಗೆ ಶಕ್ತಿ ತುಂಬಬಲ್ಲರು. ಆದರೆ ಸಮ್ಮಿ ಇನ್ನೂ ತಂಡವನ್ನು ಕೂಡಿಕೊಂಡಿಲ್ಲ ಎಂದು ತಂಡದ ಆಡಳಿತ ಮಂಡಳಿ ತಿಳಿಸಿದೆ. ತಂಡದ ಬೌಲಿಂಗ್‌ ವಿಭಾಗ “ನ್ಯೂ ಲುಕ್‌’ ನಿಂದ ಕೂಡಿದೆ. ಒಟ್ಟು ಸಾಮರ್ಥ್ಯ ಅರಿವಾಗ ಬೇಕಾದರೆ ಒಂದೆರಡು ಪಂದ್ಯಗಳನ್ನು ಕಾದು ನೋಡಬೇಕಾಗುತ್ತದೆ. ಅಕ್ಷರ್‌ ಪಟೇಲ್‌, ಮೋಹಿತ್‌ ಶರ್ಮ, ಸಂದೀಪ್‌ ಶರ್ಮ, ಕೆ.ಸಿ. ಕಾರ್ಯಪ್ಪ, ಟಿ. ನಟರಾಜನ್‌, ಮ್ಯಾಟ್‌ ಹೆನ್ರಿ, ಇಶಾಂತ್‌ ಶರ್ಮ ಇಲ್ಲಿನ ಪ್ರಮುಖರು. ಕಳೆದೊಂದು ವಾರದಿಂದ “ಹೋಳ್ಕರ್‌ ಸ್ಟೇಡಿಯಂ’ನಲ್ಲಿ ಅಭ್ಯಾಸ ನಡೆಸುತ್ತ ಬಂದಿರುವ ಪಂಜಾಬ್‌ ಈ ಅಂಗಳದ ಗುಟ್ಟನ್ನೆಲ್ಲ ಅರಿತಂತಿದೆ. ಇದು ಲಾಭ ತಂದೀತೇ?

Advertisement

ತಂಡಗಳು
ಕಿಂಗ್ಸ್‌ ಇಲೆವೆನ್‌ ಪಂಜಾಬ್‌ 
ಗ್ಲೆನ್‌ ಮ್ಯಾಕ್ಸ್‌ವೆಲ್‌ (ನಾಯಕ), ಮಾರ್ಟಿನ್‌ ಗಪ್ಟಿಲ್‌, ಹಾಶಿಮ್‌ ಆಮ್ಲ, ಎವೋನ್‌ ಮಾರ್ಗನ್‌, ಡ್ಯಾರನ್‌ ಸಮ್ಮಿ, ಡೇವಿಡ್‌ ಮಿಲ್ಲರ್‌, ಮನನ್‌ ವೋಹ್ರಾ, ಗುರುಕೀರತ್‌ ಸಿಂಗ್‌, ಅನುರೀತ್‌ ಸಿಂಗ್‌, ಸಂದೀಪ್‌ ಶರ್ಮ, ಶಾದೂìಲ್‌ ಠಾಕೂರ್‌, ಶಾನ್‌ ಮಾರ್ಷ್‌, ವೃದ್ಧಿಮಾನ್‌ ಸಾಹಾ, ನಿಖೀಲ್‌ ನಾೖಕ್‌, ಮೋಹಿತ್‌ ಶರ್ಮ, ಮಾರ್ಕಸ್‌ ಸ್ಟೋಯಿನಿಸ್‌, ಕೆ.ಸಿ. ಕಾರ್ಯಪ್ಪ, ಅರ್ಮಾನ್‌ ಜಾಫ‌ರ್‌, ಪ್ರದೀಪ್‌ ಸಾಹು, ಸ್ವಪ್ನಿಲ್‌ ಸಿಂಗ್‌, ಇಶಾಂತ್‌ ಶರ್ಮ, ರಾಹುಲ್‌ ಟೆವಾಟಿಯ, ಟಿ. ನಟರಾಜನ್‌, ಮ್ಯಾಟ್‌ ಹೆನ್ರಿ, ರಿಂಕು ಸಿಂಗ್‌, ಅಕ್ಷರ್‌ ಪಟೇಲ್‌.

ರೈಸಿಂಗ್‌ ಪುಣೆ ಸೂಪರ್‌ಜೈಂಟ್‌

ಸ್ಟೀವನ್‌ ಸ್ಮಿತ್‌ (ನಾಯಕ), ಮಹೇಂದ್ರ ಸಿಂಗ್‌ ಧೋನಿ, ಅಜಿಂಕ್ಯ ರಹಾನೆ, ಬೆನ್‌ ಸ್ಟೋಕ್ಸ್‌, ಫಾ ಡು ಪ್ಲೆಸಿಸ್‌, ಉಸ್ಮಾನ್‌ ಖ್ವಾಜ, ಮನೋಜ್‌ ತಿವಾರಿ, ಮಾಯಾಂಕ್‌ ಅಗರ್ವಾಲ್‌, ಅಂಕಿತ್‌ ಶರ್ಮ, ಬಾಬ ಅಪರಾಜಿತ್‌, ಅಂಕುಶ್‌ ಬೈನ್ಸ್‌, ರಜತ್‌ ಭಾಟಿಯ, ದೀಪಕ್‌ ಚಹರ್‌, ರಾಹುಲ್‌ ಚಹರ್‌, ಡೇನಿಯಲ್‌ ಕ್ರಿಸ್ಟಿಯನ್‌, ಅಶೋಕ್‌ ದಿಂಡ, ಲ್ಯೂಕಿ ಫ‌ರ್ಗ್ಯುಸನ್‌, ಜಸ್ಕರಣ್‌ ಸಿಂಗ್‌, ಸೌರಭ್‌ ಕುಮಾರ್‌, ಮಿಲಿಂದ್‌ ಟಂಡನ್‌, ಜಯದೇವ್‌ ಉನಾದ್ಕತ್‌, ಆ್ಯಡಂ ಝಂಪ.

Advertisement

Udayavani is now on Telegram. Click here to join our channel and stay updated with the latest news.

Next