Advertisement

ಇಂಡೋನೇಷ್ಯಾದ ಈ ಹುಡುಗನ ಹೆಸರು “ಎಬಿಸಿಡಿ…’

07:24 PM Oct 28, 2021 | Team Udayavani |

ಜಕಾರ್ತಾ: ತಮ್ಮ ಮಕ್ಕಳ ಹೆಸರು ಇತರ ಮಕ್ಕಳಿಗಿಂತ ವಿಭಿನ್ನವಾಗಿರಬೇಕು ಎಂಬ ಉದ್ದೇಶದಿಂದ ಅನೇಕರು, ಹಲವಾರು ಕಡೆ ಹುಡುಕಿ, ಕೇಳಿ ವಿಶೇಷ ಹೆಸರುಗಳನ್ನು ಇಡುವುದು ಸಾಮಾನ್ಯದ ಸಂಗತಿ. ಇನ್ನೂ ಕೆಲವರು, ಕೇಳಲು ವಿಚಿತ್ರ ಎಂಬಂಥ ಹೆಸರುಗಳನ್ನೂ ಇಡುತ್ತಾರೆ. ಇಂಥದ್ದೇ ಗೀಳು ಹೊಂದಿದ್ದ ಇಂಡೋನೇಷ್ಯಾದ ವ್ಯಕ್ತಿಯೊಬ್ಬ ತನ್ನ ಮೊದಲ ಮಗನಿಗೆ ವರ್ಷಗಳ ಹಿಂದೆಯೇ, ವಿಚಿತ್ರ ಹೆಸರಿಟ್ಟಿದ್ದು ಅದು ಈಗ ಅಂತರ್ಜಾಲದಲ್ಲಿ ವೈರಲ್‌ ಆಗಿದೆ.

Advertisement

ಇಂಗ್ಲೀಷ್‌ ವರ್ಣಮಾಲೆಯ ಮೊದಲ 11 ಅಕ್ಷರಗಳನ್ನು ಒಟ್ಟುಗೂಡಿಸಿ,  “ಎಬಿಸಿಡಿಇಎಫ್ ಜಿಎಚ್‌ಐಜೆಕೆ ಝುಝು’ ಎಂದು ತನ್ನ ಮಗನಿಗೆ ಆತ ಹೆಸರಿಟ್ಟಿದ್ದ. ಈಗ, ಆ ಹುಡುಗನಿಗೆ 12 ವರ್ಷ. ಇತ್ತೀಚೆಗೆ,  ಲಸಿಕೆ ಹಾಕಿಸಿಕೊಳ್ಳಲು ಹೋಗಿದ್ದಾಗ ಆತನ ಹೆಸರನ್ನು ನೋಡಿ ಚಕಿತಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ, ಆತನಿಗೆ ಲಸಿಕೆ ಹಾಕಲು ಹಿಂದೇಟು ಹಾಕಿದ್ದರಂತೆ! ಕಡೆಗೆ, ಹೆಸರಿನ ಮತ್ತಷ್ಟು ದಾಖಲೆಗಳನ್ನು ತರಿಸಿಕೊಂಡು ನೋಡಿ, ಅದೇ ಆತನ ನಿಜವಾದ ಹೆಸರು ಎಂದು ಖಾತ್ರಿ ಮಾಡಿಕೊಂಡು ಆತನಿಗೆ ಆನಂತರ ಲಸಿಕೆ ನೀಡಿದ್ದಾರೆ.

ಅಂದಹಾಗೆ, ಹುಡುಗನ ಹೆಸರಿನ ಕಡೆಯಲ್ಲಿರುವ ಝುಝು ಎಂಬ ಪದ ಆತನ ತಂದೆ-ತಾಯಿ ಹೆಸರಿನ (ಝುಹ್ರೋ ಹಾಗೂ ಝುಲ್ಫಾಹ್ಮಿ) ಶಾರ್ಟ್‌ಫಾರ್ಮ್ ಅಂತೆ!

 

 

Advertisement
Advertisement

Udayavani is now on Telegram. Click here to join our channel and stay updated with the latest news.

Next