Advertisement

ಇಂಡೋನೇಷ್ಯಾ ಸೂಪರ್‌ ಸೀರಿಸ್‌: “ಥಾಮಸ್‌ ಕಪ್‌’ಸ್ಫೂರ್ತಿಯಲ್ಲಿ ಭಾರತ

11:07 PM Jun 06, 2022 | Team Udayavani |

ಜಕಾರ್ತಾ: ಇಂಡೋನೇ ಷ್ಯಾವನ್ನೇ ಮಣಿಸಿ ಥಾಮಸ್‌ ಕಪ್‌ ಗೆದ್ದು ಇತಿಹಾಸ ನಿರ್ಮಿಸಿದ ಸ್ಫೂರ್ತಿಯಲ್ಲಿರುವ ಭಾರತ, “ಇಂಡೋ ನೇಷ್ಯಾ ಸೂಪರ್‌ ಸೀರಿಸ್‌’ನಲ್ಲೂ ಉತ್ತಮ ಮಟ್ಟದ ಪ್ರದರ್ಶನ ನೀಡುವ ಉತ್ಸಾಹದಲ್ಲಿದೆ.

Advertisement

ಮುಂಬರುವ ಕಾಮ ನ್ವೆಲ್ತ್‌ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಭಾರತೀಯರಿಗೆ ಇದು ಮಹತ್ವದ ಟೂರ್ನಿ ಆಗಿದೆ.

ಮಂಗಳವಾರ ಆರಂಭವಾಗಲಿರುವ ಈ ಕೂಟದ ಡ್ರಾ ಪ್ರಕಟಗೊಂಡಿದ್ದು, ಥಾಮಸ್‌ ಕಪ್‌ ಗೆಲುವಿನ ಹೀರೋ ಗಳಾದ ಲಕ್ಷ್ಯ ಸೇನ್‌ ಮತ್ತು ಎಚ್‌.ಎಸ್‌. ಪ್ರಣಯ್‌ ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆ ಇದೆ.

ವಿಶ್ವದ 9ನೇ ರ್‍ಯಾಂಕಿಂಗ್‌ ಆಟಗಾರ ಲಕ್ಷ್ಯ ಸೇನ್‌ ಇಲ್ಲಿ 7ನೇ ಶ್ರೇಯಾಂಕ ಹೊಂದಿದ್ದು, ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಹಾನ್ಸ್‌ ಕ್ರಿಸ್ಟಿಯನ್‌ ಸೋಲ್ಬರ್ಗ್‌ ಅವರನ್ನು ಎದುರಿಸಲಿದ್ದಾರೆ.

ಆದರೆ ಇವರೆದುರು ಆಡಿದ ಎರಡೂ ಪಂದ್ಯಗಳಲ್ಲಿ ಸೇನ್‌ ಸೋಲನುಭವಿಸಿದ್ದು, ಗೆಲುವಿನ ಖಾತೆ ತೆರೆಯಲು ಇದೊಂದು ಉತ್ತಮ ಅವಕಾಶವಾಗಿದೆ.

Advertisement

ಪ್ರಣಯ್‌ ಡೆನ್ಮಾರ್ಕ್‌ನ ರಾಸ್ಮಸ್‌  ಅವರನ್ನು ಮೊದಲ ಸುತ್ತಿನಲ್ಲಿ ಎದುರಿಸಲಿದ್ದಾರೆ. ಥಾಮಸ್‌ ಕಪ್‌ ಗೆಲುವಿನ ಹಾದಿಯಲ್ಲಿ ಇವರಿಬ್ಬರು ಮಾಡು-ಮಡಿ ಪಂದ್ಯದಲ್ಲಿ ಮುಖಾಮುಖಿಯಾಗಿದ್ದರು. ಇದರಲ್ಲಿ ಪ್ರಣಯ್‌ ಗೆದ್ದು ಬಂದಿದ್ದರು.

ಥಾಮಸ್‌ ಕಪ್‌ ಗೆಲುವಿನ ಮತ್ತೋರ್ವ ಹೀರೋ ಕೆ. ಶ್ರೀಕಾಂತ್‌ ಈ ಕೂಟದಲ್ಲಿ ಭಾಗವಹಿಸುತ್ತಿಲ್ಲ. ಹೀಗಾಗಿ ಪಿ. ಕಶ್ಯಪ್‌ ಮತ್ತು ಸಮೀರ್‌ ವರ್ಮ ಮೇಲೆ ನಿರೀಕ್ಷೆ ಹೆಚ್ಚಿದೆ.

ವನಿತಾ ವಿಭಾಗ
ವನಿತಾ ವಿಭಾಗದಲ್ಲಿ ಪಿ.ವಿ. ಸಿಂಧು, ಸೈನಾ ನೆಹ್ವಾಲ್‌ ಮೇಲೆ ಭಾರತ ನಿರೀಕ್ಷೆ ಇರಿಸಿದೆ. ಸಿಂಧು ಮೊದಲ ಸುತ್ತಿನಲ್ಲಿ ಡೆನ್ಮಾರ್ಕ್‌ನ ಲಿನೆ ಕ್ರಿಸ್ಟೋ ಫ‌ರ್ಸನ್‌ ಅವರನ್ನು ಎದುರಿಸಲಿದ್ದಾರೆ. ಉಬೆರ್‌ ಕಪ್‌ನಿಂದ ದೂರ ಉಳಿದಿದ್ದ ಸೈನಾ ನೆಹ್ವಾಲ್‌ ಅವರ ಎದುರಾಳಿಡೆನ್ಮಾರ್ಕ್‌ನ ಲಿನೆ ಹೋಜ್‌ಮಾರ್ಕ್‌ ಜಾರ್ಸ್‌ಫೆಲ್ಟ್.

Advertisement

Udayavani is now on Telegram. Click here to join our channel and stay updated with the latest news.

Next