Advertisement

ರಾಜಧಾನಿ ಬದಲಾವಣೆ ಶುರುಮಾಡಿದ ಇಂಡೊನೇಷ್ಯಾ

08:51 PM Mar 09, 2023 | Team Udayavani |

ಜಕಾರ್ತ: ಹವಾಮಾನ ವೈಪರೀತ್ಯ, ವಾಹನ ದಟ್ಟಣೆ, ಜನಸಂಖ್ಯೆ ಹೆಚ್ಚಳದಂಥ ಕಾರಣಗಳಿಂದಾಗಿ ಇಂಡೋನೇಷ್ಯಾ ಸರ್ಕಾರ ತನ್ನ ರಾಷ್ಟ್ರ ರಾಜಧಾನಿಯನ್ನು ಜಕಾರ್ತದಿಂದ ಬೊರ್ನಿಯೋ ದ್ವೀಪಕ್ಕೆ ಬದಲಾಯಿಸಲು ನಿರ್ಧರಿಸಿದೆ.

Advertisement

ಜಕಾರ್ತದಲ್ಲಿರುವ ಜಾವಾ ಸಮುದ್ರಮಟ್ಟ ಏರುತ್ತಿದ್ದು, 2050ರ ವೇಳೆ ಪ್ರದೇಶದ 3ನೇ ಒಂದು ಭಾಗ ಮುಳುಗಡೆಯಾಗಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಪ್ರದೇಶದ ಸಾಮರ್ಥ್ಯಕ್ಕಿಂತ 3 ಪಟ್ಟು ಅಧಿಕ ಮಂದಿ ವಾಸವಿರುವ ಕಾರಣ, ದಟ್ಟಣೆ, ಮಾಲಿನ್ಯ, ಅಂತರ್ಜಲ ಕುಸಿತದಂಥ ಗಂಭೀರ ಸಮಸ್ಯೆಯನ್ನು ಜಕಾರ್ತ ಎದುರಿಸುತ್ತಿದೆ.

ಈ ಹಿನ್ನೆಲೆ ರಾಜಧಾನಿ ಬದಲಾವಣೆ ಅಗತ್ಯವೆಂದು ಸರ್ಕಾರ ತಿಳಿಸಿದೆ. ಮತ್ತೂಂದೆಡೆ ಬೋರ್ನಿಯ ದ್ವೀಪವನ್ನು ರಾಜಧಾನಿಯಾಗಿಸುವ ಪ್ರಯತ್ನವು, ಅಭಿವೃದ್ಧಿ ಹೆಸರಿನಲ್ಲಿ ಅಪಾರ ಅರಣ್ಯನಾಶಕ್ಕೆ ಕಾರಣವಾಗುವುದಲ್ಲದೇ, ಆ ಪ್ರದೇಶದಲ್ಲಿ ಅಳಿವಿನಂಚಿನಲ್ಲಿರುವ ಜೀವಪ್ರಭೇದಗಳ ವಾಸಸ್ಥಾನಕ್ಕೆ ಬದರಿಕೆ ಒಡ್ಡುತ್ತದೆ ಎಂದು ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next