Advertisement

ಸಮುದ್ರದಾಳದಲ್ಲಿ ಇಂಡೋನೇಶ್ಯ ವಿಮಾನ ಪತ್ತೆ: ಮಿಲಿಟರಿ ಮುಖ್ಯಸ್ಥ

12:08 PM Oct 31, 2018 | Team Udayavani |

ಜಕಾರ್ತಾ : ಎರಡು ದಿನಗಳ ಹಿಂದೆ ಸುಮಾತ್ರಾ ದ್ವೀಪ ದೂರ ಸಮುದ್ರದಲ್ಲಿ ಪತನಗೊಂಡು 189 ಮಂದಿ ಪ್ರಯಾಣಿಕರು ಮೃತಪಟ್ಟಿದ್ದ  ಇಂಡೋನೇಶ್ಯದ ಲಯನ್‌ ಜೆಟ್‌ ವಿಮಾನ ಬಿದ್ದಿರುವ ನಿರ್ದಿಷ್ಟ ತಾಣ ಮತ್ತು ಧ್ವಂಸಗೊಂಡಿರುವ ಅದರ ಫ್ಯೂಸ್‌ ಲೇಜ್‌ ಪತ್ತೆಯಾಗಿರುವುದಾಗಿ ಇಂಡೋನೇಶ್ಯದ ಮಿಲಿಟರಿ ಮುಖ್ಯಸ್ಥ ಹದಿ ತಜಾಂತೋ ಹೇಳಿದ್ದಾರೆ. 

Advertisement

ಬೋಯಿಂಗ್‌ 737 ಮ್ಯಾಕ್ಸ್‌ ಪ್ಲೇನ್‌ ನ ಫ್ಯೂಸ್‌ ಲೇಜ್‌ ಅವಶೇಷಗಳು ಬಿದ್ದಿರುವ ತಾಣವನ್ನು ಸೋನಾರ್‌ ತಾಂತ್ರಿಕತೆಯಿಂದ ಪತ್ತೆ ಹಚ್ಚಲಾಗಿದೆ ಎಂದವರು ಹೇಳಿದ್ದಾರೆ. 

ಬೋಯಿಂಗ್‌ 737 ವಿಮಾನದ ಜೆಟಿ 610 ಫ್ಯೂಸ್‌ ಲೇಜ್‌ ಪತ್ತೆಯಾಗಿರುವ ಬಗ್ಗೆ ನಮಗೆ ವಿಶ್ವಾಸವಿದೆ ಎಂದು ಹದಿ ಅವರು ಜಕಾರ್ತದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next