ಹೊಸದಿಲ್ಲಿ: ದಿಲ್ಲಿ ಪಾಕಿಸ್ಥಾನದ ನೇರ ಕೈವಾಡವಿದೆ ಎಂದು ಈ ಹಿಂದೆ ಮಾಹಿತಿ ಬಹಿರಂಗಪಡಿಸಿದ್ದ ಭದ್ರತಾ ಸಂಸ್ಥೆ ಗಳು ಈಗ ಗಲಭೆಯಲ್ಲಿ ಇಂಡೋನೇಷ್ಯಾ ನಂಟಿರುವ ಬಗ್ಗೆಯೂ ಮಾಹಿತಿ ನೀಡಿವೆ. ಲಷ್ಕರ್-ಎ-ತೊಯ್ಬಾ ಉಗ್ರ ಸಂಘ ಟನೆಯ ದತ್ತಿ ವಿಭಾಗವಾಗಿರುವ ಫಲಾಹ್-ಇ- ಇನ್ಸಾನಿಯತ್ ಎಂಬ ಸಂಸ್ಥೆಯೊಂದಿಗೆ ನಂಟು ಹೊಂದಿರುವ ಇಂಡೋನೇಷ್ಯಾದ ಎನ್‌ಜಿಒ ಒಂದು ದಿಲ್ಲಿ ಗಲಭೆಯ ಹೆಸರಲ್ಲಿ ಆನ್‌ಲೈನ್‌ನಲ್ಲಿ ನಿಧಿ ಸಂಗ್ರಹಿಸುತ್ತಿದೆ ಎಂದು ಕೇಂದ್ರ ಗುಪ್ತಚರ ಸಂಸ್ಥೆಗಳು ತಿಳಿಸಿವೆ. ಹೀಗೆ ಸಂಗ್ರಹಿಸಿದ ಹಣವನ್ನು ಫೆ. 24, 25ರಂದು ನಡೆದ ದಿಲ್ಲಿ ಗಲಭೆಯಲ್ಲಿ ಮೃತ, ಗಾಯ ಗೊಂಡ ಮುಸ್ಲಿಮರ ಕುಟುಂಬಗಳಿಗೆ ಈ ಎನ್‌ಜಿಒ ವಿತರಿಸಿದೆ. ದಿಲ್ಲಿ ಗಲಭೆಗೆ ಸಂಬಂಧಿ ಸಿದ ಚಿತ್ರಗಳು, ಸಂದೇಶಗಳನ್ನೇ ಪ್ರಚಾರ ಸಾಮ ಗ್ರಿಗಳನ್ನಾಗಿ ಬಳಸಿಕೊಂಡ ಎನ್‌ಜಿಒ, ದುಬಾೖ ಮೂಲಕ ಹವಾಲಾ ಮಾರ್ಗವಾಗಿ ಹಣ ಸಂಗ್ರಹಿಸಿರುವುದಾಗಿ ಏಜೆನ್ಸಿಗಳು ತಿಳಿಸಿವೆ.