Advertisement

ಎಲ್ಲ ರೀತಿಯ ಸಿರಪ್‌ಗಳಿಗೂ ಇಂಡೋನೇಷ್ಯಾ ನಿಷೇಧ

08:15 PM Oct 20, 2022 | Team Udayavani |

ಜಕಾರ್ತಾ: ದೇಶದಲ್ಲಿ 99 ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಸಿರಪ್‌ ಮತ್ತು ದ್ರವರೂಪದ ಔಷಧಗಳನ್ನು ಇಂಡೋನೇಷ್ಯಾ ನಿಷೇಧಿಸಿದೆ.

Advertisement

ಗ್ಯಾಂಬಿಯಾದಲ್ಲಿ 70 ಮಕ್ಕಳ ಸಾವಿನ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಕೆಮ್ಮು ಸಿರಪ್‌ಗ್ಳನ್ನು ನಿಷೇಧಿಸಿದ ಬೆನ್ನಲ್ಲೇ ಇಂಡೋನೇಷ್ಯಾ ಈ ಕ್ರಮ ಕೈಗೊಂಡಿದೆ. “ಕೆಲವು ಸಿರಪ್‌ ಔಷಧಗಳು ಮೂತ್ರಪಿಂಡಗಳಿಗೆ ತೀವ್ರ ಹಾನಿ(ಎಕೆಐ) ಉಂಟುಮಾಡುವ ಅಂಶಗಳನ್ನು ಒಳಗೊಂಡಿರುವುದು ಕಂಡುಬಂದಿದೆ. ಇದರಿಂದ ಈ ವರ್ಷ 99 ಮಕ್ಕಳು ಮೃತಪಟ್ಟಿದ್ದಾರೆ,’ ಎಂದು ಇಂಡೋನೇಷ್ಯಾ ತಿಳಿಸಿದೆ.

ಆದರೆ ಈ ಔಷಧಗಳನ್ನು ಆಮದು ಮಾಡಿಕೊಂಡಿದ್ದೇ ಅಥವಾ ಸ್ಥಳೀಯವಾಗಿ ತಯಾರಿಸಿದ್ದೇ ಎಂಬುದನ್ನು ಬಹಿರಂಗಪಡಿಸಿಲ್ಲ. “ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಸುಮಾರು 200 ಮಕ್ಕಳಲ್ಲಿ ಎಕೆಐ ಪತ್ತೆಯಾಗಿರುವುದು ವರದಿಯಾಗಿದೆ,’ ಎಂದು ಇಂಡೋನೇಷ್ಯಾ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.

ಈ ತಿಂಗಳ ಆರಂಭದಲ್ಲಿ, ಗ್ಯಾಂಬಿಯಾದಲ್ಲಿ ಸುಮಾರು 70 ಮಕ್ಕಳ ಸಾವಿಗೆ ಸಂಬಂಧಿಸಿ ನಾಲ್ಕು ಕಫ‌ದ ಸಿರಪ್‌ಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆಯು ಜಾಗತಿಕ ಎಚ್ಚರಿಕೆಯನ್ನು ನೀಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next