Advertisement

ಕಾಮನ್ವೆಲ್ತ್‌ ಗೇಮ್ಸ್‌: ವನಿತಾ ಕ್ರಿಕೆಟ್‌ ಪಾಕಿಸ್ಥಾನವನ್ನು ಕೆಡವಿದ ಭಾರತ

07:42 PM Jul 31, 2022 | Team Udayavani |

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇದೇ ಮೊದಲ ಸಲ ಅಳವಡಿಸಲಾದ ವನಿತೆಯರ ಟಿ20 ಕ್ರಿಕೆಟ್‌ನಲ್ಲಿ ಭಾರತ ತನ್ನ ಬದ್ಧ ಎದುರಾಳಿ ಪಾಕಿಸ್ಥಾನವನ್ನು 8 ವಿಕೆಟ್‌ಗಳಿಂದ ಉರುಳಿಸಿ ಗೆಲುವಿನ ಖಾತೆ ತೆರೆದಿದೆ.

Advertisement

ರವಿವಾರದ ಈ ಪಂದ್ಯ ಮಳೆಯಿಂದ 18 ಓವರ್‌ಗಳಿಗೆ ಇಳಿಸಲ್ಪಟ್ಟಿತು. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಪಾಕಿಸ್ಥಾನ ಭಾರತೀಯರ ಬೌಲಿಂಗ್‌ ದಾಳಿಗೆ ತತ್ತರಿಸಿ ಸರಿಯಾಗಿ 18 ಓವರ್‌ಗಳಲ್ಲಿ 99 ರನ್ನಿಗೆ ಆಲೌಟ್‌ ಆಯಿತು. ಕೌರ್‌ ಬಳಗ 11.4 ಓವರ್‌ಗಳಲ್ಲಿ 2 ವಿಕೆಟಿಗೆ 102 ರನ್‌ ಬಾರಿಸಿತು. ಇದು ಪಾಕಿಸ್ಥಾನಕ್ಕೆ ಎದುರಾದ ಸತತ 2ನೇ ಸೋಲು. ಮೊದಲ ಪಂದ್ಯದಲ್ಲಿ ಅದು ಬಾರ್ಬಡಾಸ್‌ಗೆ ಶರಣಾಗಿತ್ತು. ಭಾರತ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯದ ವಿರುದ್ಧ ಕೈಲಿದ್ದ ಪಂದ್ಯವನ್ನು ಕಳೆದುಕೊಂಡಿತ್ತು.

 ಮಿಂಚಿನ ಬೌಲಿಂಗ್‌, ಫೀಲ್ಡಿಂಗ್‌

ಮಿಂಚಿನ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ಮೂಲಕ ಭಾರತ ಪಾಕ್‌ ಮೇಲೆರಗಿತು. ಖಾತೆ ತೆರೆವ ಮೊದಲೇ ಪಾಕ್‌ ವಿಕೆಟ್‌ ಉರುಳಿತು. ಆದರೆ ಮುನೀಬಾ ಅಲಿ (32) ಮತ್ತು ನಾಯಕಿ ಬಿಸ್ಮಾ ಮರೂಫ್ (17) ಸೇರಿಕೊಂಡು 50 ರನ್‌ ಜತೆಯಾಟ ನಿಭಾಯಿಸಿದರು. ಇಲ್ಲಿಂದ ಮುಂದೆ ಭಾರತೀಯರ ದಾಳಿ ತೀವ್ರಗೊಂಡಿತು. 49 ರನ್‌ ಅಂತರದಲ್ಲಿ 8 ವಿಕೆಟ್‌ ಉರುಳಿತು. ಮೂವರು ರನೌಟಾದರು. ಸ್ನೇಹ್‌ ರಾಣಾ ಮತ್ತು ರಾಧಾ ಯಾದವ್‌ ತಲಾ 2 ವಿಕೆಟ್‌ ಉಡಾಯಿಸಿದರು.

ಚೇಸಿಂಗ್‌ ವೇಳೆ ಸ್ಮತಿ ಮಂಧನಾ ಅಜೇಯ 63 ರನ್‌ ಬಾರಿಸಿ ಮಿಂಚಿದರು (42 ಎಸೆತ, 8 ಬೌಂಡರಿ, 3 ಸಿಕ್ಸರ್‌). ಔಟಾದವರೆಂದರೆ ಶಫಾಲಿ ವರ್ಮ (16) ಮತ್ತು ಎಸ್‌. ಮೇಘನಾ (14).

Advertisement

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ಥಾನ-18 ಓವರ್‌ಗಳಲ್ಲಿ 99 (ಮುನೀಬಾ 32, ಅಲಿಯಾ ರಿಯಾಜ್‌ 18, ಮರೂಫ್ 17, ಸ್ನೇಹ್‌ ರಾಣಾ 15ಕ್ಕೆ 2, ರಾಧಾ ಯಾದವ್‌ 18ಕ್ಕೆ 2, ಶಫಾಲಿ 8ಕ್ಕೆ 1).

ಭಾರತ-11.4 ಓವರ್‌ಗಳಲ್ಲಿ 2 ವಿಕೆಟಿಗೆ 102 (ಮಂಧನಾ ಔಟಾಗದೆ 63, ಶಫಾಲಿ 16, ಮೇಘನಾ 14).

Advertisement

Udayavani is now on Telegram. Click here to join our channel and stay updated with the latest news.

Next