Advertisement

ಶಿರ್ವ ಗ್ರಾ.ಪಂ: ಹಿಂದೂ ರುದ್ರಭೂಮಿ ಮುಕ್ತಿಧಾಮ ಲೋಕಾರ್ಪಣೆ

11:31 AM Jun 05, 2022 | Team Udayavani |

ಶಿರ್ವ: ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶಿರ್ವ ಗ್ರಾ.ಪಂ. ಅನುದಾನದಿಂದ ಶಿರ್ವ ಮಟ್ಟಾರುವಿನಲ್ಲಿ ನಿರ್ಮಾಣಗೊಂಡ ಶಿರ್ವ ಗ್ರಾ.ಪಂ. ಸಾರ್ವಜನಿಕ ಹಿಂದೂ ರುದ್ರಭೂಮಿ ಮುಕ್ತಿಧಾಮವನ್ನು ಕಾಪು ಶಾಸಕ ಲಾಲಾಜಿ ಆರ್‌. ಮೆಂಡನ್‌ ಜೂ. 4 ರಂದು ಲೋಕಾರ್ಪಣೆಗೊಳಿಸಿದರು.

Advertisement

ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟು ಸಾವಿನ ಮಧ್ಯೆ ಮನುಷ್ಯನ ಜೀವನ ಸಾಗುತ್ತಿದ್ದು, ಜೀವನದ ಅಂತಿಮ ಯಾತ್ರೆಯ ತಾಣದ ನಿರ್ವಹಣೆ ಚೆನ್ನಾಗಿದ್ದು, ಸದ್ಬಳಕೆಯಾಗಬೇಕು. ಗ್ರಾಮ ಪಂಚಾಯತ್‌ ಉಸ್ತುವಾರಿಯೊಂದಿಗೆ ನಿರ್ವಹಣಾ ಸಮಿತಿ ರಚಿಸಿ ಸಮಾಜದ ನಿರ್ಗತಿಕರು, ಬಡವರಿಗೆ ಸುಸಜ್ಜಿತ ರುದ್ರಭೂಮಿ ಬಳಸುವಂತಾಗಬೇಕು ಎಂದು ಹೇಳಿದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಮನುಷ್ಯ ಅಗಲಿದ ಸಂದರ್ಭಗಳಲ್ಲಿ ಸಂಪ್ರದಾಯಬದ್ಧವಾಗಿ ಅಗ್ನಿಸ್ಪರ್ಶ ನೀಡಿ ಅಂತ್ಯ ಸಂಸ್ಕಾರ ನಡೆಸಲಾಗುತ್ತಿದೆ. ಮನುಷ್ಯನ ಬದುಕಿನೊಂದಿಗೆ ಅವಿನಾಭಾವ ಸಂಬಂಧವಿರುವ ರುದ್ರಭೂಮಿಯ ಅವಶ್ಯಕತೆ ಈಡೇರಿದ್ದು, ಅಗತ್ಯವಿರುವ ಸಂದರ್ಭಗಳಲ್ಲಿ ಉಪಯೋಗಿಸುವಂತಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರ್ವ ಗ್ರಾ.ಪಂ. ಅಧ್ಯಕ್ಷ ಕೆ.ಆರ್‌.ಪಾಟ್ಕರ್‌ ಮಾತನಾಡಿ ಗ್ರಾಮದ ಅಗತ್ಯ ವ್ಯವಸ್ಥೆ ಲೋಕಾರ್ಪಣೆಗೊಂಡಿದ್ದು, ಬಾಕಿಯುಳಿದ ಕಾಮಗಾರಿಗೆ ಶಾಸಕರು ಮತ್ತು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಅನುದಾನದ ಸಹಕಾರ ಕೋರಿದರು.

Advertisement

ಇದನ್ನೂ ಓದಿ:ಸಚಿವ ನಾಗೇಶ್ ಹೇಳಿದ ಹಿಂದೂಗಳು ಯಾರು?: ಸಿದ್ದರಾಮಯ್ಯ ಪ್ರಶ್ನೆ

ಗ್ರಾಮ ಕರಣಿಕ ವಿಜಯ್‌ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ನಿರ್ಮಿತಿ ಕೇಂದ್ರದ ಎಂಜಿನಿಯರ್‌ ಮುಕೇಶ್‌,ಗುತ್ತಿಗೆದಾರ ರಾಜೇಶ್‌, ಮಾಜಿ ಗ್ರಾ.ಪಂ. ಅಧ್ಯಕ್ಷೆ ವಾರಿಜಾ ಪೂಜಾರ್ತಿ, ಗ್ರಾ.ಪಂ.ಸದಸ್ಯರಾದ ದೇವದಾಸ್‌ ನಾಯಕ್‌,ಪ್ರವೀಣ್‌ ಸಾಲ್ಯಾನ್‌, ಸುರೇಶ್‌ ನಾಯಕ್‌,ರಾಜೇಶ್‌ ಕುಲಾಲ್‌, ರಾಜೇಶ್‌ ಶೆಟ್ಟಿ,ಮಮತಾ ಶೆಟ್ಟಿ,ವೈಲೆಟ್‌ ಕ್ಯಾಸ್ತಲಿನೋ,ಪಂ. ಕಾರ್ಯದರ್ಶಿ ಮಂಗಳಾ ಜೆ.ವಿ.,ಎಡ್ಮೇರು ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಮಟ್ಟಾರು ಗೋಪಾಲ ನಾಯ್ಕ,ಉಪಾಧ್ಯಕ್ಷ ರಮೇಶ್‌ ಪ್ರಭು,ಶಿರ್ವ ಪೊಲೀಸ್‌ ಠಾಣಾಧಿಕಾರಿ ರಾಘವೇಂದ್ರ .ಸಿ, ರಾಘವೆಂದ್ರ ನಾಯಕ್‌,ಗಿರಿಧರ ಪ್ರಭು,ಗ್ರಾ.ಪಂ. ಸಿಬಂದಿ,ಶಿರ್ವ-ಮಟ್ಟಾರು ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿ ಅನಂತಪದ್ಮನಾಭ ನಾಯಕ್‌ ಸ್ವಾಗತಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next