Advertisement

ರಾಜಾಜಿನಗರದಲ್ಲಿ ಇಂದಿರಾ ಐವಿಎಫ್‌ ಸೆಂಟರ್‌ ಚಾಲನೆ

11:53 AM May 30, 2018 | |

ಬೆಂಗಳೂರು: ರಾಜಾಜಿನಗರದ ಡಾ. ರಾಜಕುಮಾರ್‌ ರಸ್ತೆಯಲ್ಲಿ ಬಂಜೆತನ ಚಿಕಿತ್ಸೆ ನೀಡುವ ಖ್ಯಾತ ಇಂದಿರಾ ಐವಿಎಫ್‌ ಹಾಸ್ಪಿಟಲ್‌ ಪ್ರೈ. ಲಿ., ಸರಣಿಯ 41ನೇ ಶಾಖೆಗೆ ಇಂದಿರಾ ಐವಿಎಫ್‌ ಸಮೂಹದ ಅಧ್ಯಕ್ಷ ಡಾ. ಅಜಯ್‌ ಮುರ್ಡಿಯ ಚಾಲನೆ ನೀಡಿದರು.

Advertisement

ಇತೀ¤ಚೆಗೆ ನೂತನ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇದು ಬೆಂಗಳೂರು ನಗರದ ಎರಡನೇ ಸುಸಜ್ಜಿತ ಆಸ್ಪತ್ರೆಯಾಗಿದ್ದು, ಸಂಪೂರ್ಣವಾಗಿ ಬಂಜೆತನ ನಿವಾರಣೆಗೆ ಮೀಸಲಾಗಿರುವ ಕೇಂದ್ರವಾಗಿದೆ.

ಮಗುವಿಗಾಗಿ ಹಂಬಲಿಸುವ, ಬಂಜೆತನ ಸಮಸ್ಯೆಯಿರುವ ದಂಪತಿಗಳು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆದಲ್ಲಿ, ಅವರ ಕನಸು ನನಸಾಗಲಿದೆ ಹಾಗೂ ಪೋಷಕತ್ವದ ಭಾಗ್ಯ ದೊರೆಯಲಿದೆ. ಇಂದು ದೇಶದ ಪ್ರತಿ ಎಂಟು ದಂಪತಿಗಳಲ್ಲಿ ಒಂದು ದಂಪತಿ ಬಂಜೆತನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದರು.

ಗೈನೆಕಾಲಜಿಸ್ಟ್‌ ಮತ್ತು ಐವಿಎಫ್‌ ತಜ್ಞ ಡಾ. ವಿನೋದ್‌ ಕುಮಾರ್‌ ಮಾತನಾಡಿ, ಜಾಗತಿಕವಾಗಿ ಇದುವರೆಗೆ 50 ಲಕ್ಷಕ್ಕೂ ಅಧಿಕ ಮಕ್ಕಳು ಐವಿಎಫ್‌ ತಂತ್ರದ ಮೂಲಕ ಜನಿಸಿವೆ. ಈ ತಂತ್ರಜ್ಞಾನವೂ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿದ್ದು, ಯಶಸ್ವಿ ಪ್ರಮಾಣವೂ ಗಣನೀಯವಾಗಿ ಏರಿಕೆಯಾಗಿದೆ. ಬಂಜೆತನದಿಂದ ಬಳಲುತ್ತಿರುವ ದಂಪತಿಗಳು ಐವಿಎಫ್‌ (ಪ್ರನಾಳ ಶಿಶು) ತಜ್ಞರಿಂದ ಚಿಕಿತ್ಸೆ ಪಡೆದಲ್ಲಿ ಗರ್ಭಧಾರಣೆಗೆ ಹೆಚ್ಚಿನ ಅವಕಾಶಗಳಿರುತ್ತವೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next