Advertisement

ಬಡವರು, ದಲಿತರು, ರೈತರ ಬಗ್ಗೆ ಇಂದಿರಾಗಾಂಧಿ ಕಳಕಳಿ ಅಪಾರ

08:20 PM Nov 19, 2021 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ದಿವಂಗತ ಇಂದಿರಾಗಾಂಧಿಯವರು ರೈತರು, ಬಡವರು ಹಾಗೂ ದಲಿತರ ಪರ ಅಪಾರ ಕಾಳಜಿ ಹೊಂದಿದ್ದರು. ಅವರ ಅವಧಿಯಲ್ಲಿ ಜಾರಿಗೊಂಡ 20 ಅಂಶಗಳ ಕಾರ್ಯಕ್ರಮ ದೇಶದ ದಿಕ್ಕು ಬದಲಿಸಿತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಕೆಪಿಸಿಸಿ ಮಹಿಳಾ ಘಟಕದಿಂದ ಆಯೋಜಿಸಿದ್ದ ಇಂದಿರಾಗಾಂಧಿ ಜನ್ಮದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾಗಾಂಧಿ ಅವರು ಚಿಕ್ಕ ವಯಸ್ಸಿನಲ್ಲೇ ಸ್ವಾತಂತ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದರು. ಸ್ವಾತಂತ್ರ್ಯ ಹೋರಾಟಗಾರ ಜೊತೆ ಒಡನಾಟ ಹೊಂದಿದ್ದರು ಎಂದು ತಿಳಿಸಿದರು.

ಉಳುವವನೆ ಭೂಮಿಯ ಒಡೆಯನಾಗಬೇಕು, ಬಡವರಿಗೆ ಜಮೀನು ಸಿಗಬೇಕು ಎಂಬ ನಿಟ್ಟಿನಲ್ಲಿ ಭೂ ಸುಧಾರಣೆ ಕಾಯ್ದೆ ತಂದವರು ಇಂದಿರಾಗಾಂಧಿ. 14 ಖಾಸಗಿ ಬ್ಯಾಂಕ್‌ ಗಳನ್ನು ರಾಷ್ಟ್ರೀಕರಣಗೊಳಿಸಿದರು.ಅದುವರೆಗೂ ಶ್ರೀಮಂತರು ಮಾತ್ರ ಬ್ಯಾಂಕ್‌ ಖಾತೆ ಹೊಂದಿರುತ್ತಿದ್ದರು. ಆ ನಂತರ ಬಡವರು ಖಾತೆ ಹೊಂದುವಂತಾಯಿತು ಎಂದು ಹೇಳಿದರು.

ಇಂದಿರಾಗಾಂಧಿಯವರು ಖಾಸಗಿ ಬ್ಯಾಂಕ್‌ ರಾಷ್ಟ್ರೀಕರಣ ಮಾಡಿ ಬಡವರಿಗೆ ಬಾಗಿಲು ತರೆದರೆ, ನರೇಂದ್ರ ಮೋದಿ ಮತ್ತೆ ಖಾಸಗೀಕರಣ ಮಾಡಿ ಬಾಗಿಲು ಬಂದ್‌ ಮಾಡಿಸುತ್ತಿದ್ದಾರೆ ಎಂದು ದೂರಿದರು.

ಇದನ್ನೂ ಓದಿ:ನಾಚಿಕೆಗೇಡು!; ಕೃಷಿ ಕಾಯ್ದೆ ಹಿಂಪಡೆದುದಕ್ಕೆ ನಟಿ ಕಂಗನಾ ಆಕ್ರೋಶ

Advertisement

ಕಾಂಗ್ರೆಸ್‌ ನವರು ಏನು ಮಾಡಿದರು ಎಂದು ಮೋದಿ ಹಾಗೂ ಬಿಜೆಪಿಯವರು ಕೇಳುತ್ತಾರೆ. ನಾನು ಕೇಳುತ್ತೇನೆ, ಸ್ವಾತಂತ್ರ್ಯ ಹೋರಾಟದಲ್ಲಿ ನಿಮ್ಮ ಕೊಡುಗೆ ಏನು. 1925 ರಲ್ಲಿ ಆರ್‌ಎಸ್‌ಎಸ್‌ ಸ್ಥಾಪನೆಯಾಗಿದ್ದು ಅದರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ಕೆಪಿಸಿಸಿ ಕಾರ್ಯಧ್ಯಕ್ಷರಾದ ರಾಮಲಿಂಗಾರೆಡ್ಡಿ, ಈಶ್ವರ್‌ ಖಂಡ್ರೆ, ಸಲೀಂ ಅಹಮದ್‌, ಮಾಜಿ ಸಚಿವ ದಿನೇಶ್‌ ಗುಂಡೂರಾವ್‌, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಪುಷ್ಪಾ ಅಮರ್‌ನಾಥ್‌ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರು ನೇತ್ರದಾನ ಮಾಡುವ ಘೋಷಣೆ ಮಾಡಿದರು. ಸಿದ್ದರಾಮಯ್ಯ ಅವರು ನೇತ್ರದಾನ ಕಾರ್ಯಕ್ಕೆ ಚಾಲನೆ ನೀಡಿ ಪ್ರಮಾಣ ಪತ್ರ ವಿತರಿಸಿದರು.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next