Advertisement

ಬಾಂಬ್‌ ಬೆದರಿಕೆ ಕರೆ:ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ 

11:53 AM Dec 15, 2018 | Team Udayavani |

ಮುಂಬಯಿ: ಬಾಂಬ್‌ ಬೆದರಿಕೆ ಕರೆಯೊಂದು ಬಂದ ಹಿನ್ನಲೆಯಲ್ಲಿ ಮುಂಬಯಿಯಿಂದ ಲಕ್ನೋಗೆ ಪ್ರಯಾಣ ಬೆಳೆಸಿದ್ದ ಇಂಡಿಗೋ ವಿಮಾನವನ್ನು ಕೆಳಗಿಳಿಸಿ ತಪಾಸಣೆ ನಡೆಸಿದ ಘಟನೆ ಶನಿವಾರ ನಡೆದಿದೆ. 

Advertisement

ವಿಮಾನವನ್ನು ಕೆಳಗಿಳಿಸಿ ಪ್ರತ್ಯೇಕವಾಗಿ ಇರಿಸಿ ಬಾಂಬ್‌ ಬೆದರಿಕೆ ತಪಾಸಣಾ ಸಮಿತಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ವಿಮಾನದಲ್ಲಿ ಯಾವುದೇ ಬಾಂಬ್‌ ಪತ್ತೆಯಾಗದ ಹಿನ್ನಲೆಯಲ್ಲಿ ಸುರಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗ್ಗೆ  6.05 ಕ್ಕೆ ನಿರ್ಗಮಿಸಬೇಕಾಗಿದ್ದ ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಕರಿದ್ದರು ಎಂದು ತಿಳಿದು ಬಂದಿಲ್ಲ.

ಮಹಿಳಾ ಪ್ರಯಾಣಿಕರೊಬ್ಬರು ಬಾಂಬ್‌ ಇರುವ ಬಗ್ಗೆ ಮಾತನಾಡಿದ್ದು, ಫೋಟೋವೊಂದನ್ನು ತೋರಿಸಿ ಇವರು ದೇಶದ ಭದ್ರತೆಗೆ ಆತಂಕ ಎಂದಿರುವುದಾಗಿ ವರದಿಯಾಗಿದೆ. ಮಹಿಳೆಯನ್ನು ಸಿಐಎಸ್‌ಎಫ್ ಅಧಿಕಾರಿಗಳು ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next