Advertisement

ಸಾರ್ವಕಾಲಿಕ ದಾಖಲೆ ಏರಿಕೆ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಅಲ್ಪ ಕುಸಿತ

05:31 PM Oct 19, 2021 | |

ಮುಂಬಯಿ: ಸತತವಾಗಿ ಏರುಗತಿಯಲ್ಲಿ ವಹಿವಾಟು ನಡೆಸಿ ಸಾರ್ವಕಾಲಿಕ ದಾಖಲೆಗೆ ಸಾಕ್ಷಿಯಾಗಿದ್ದ ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ ಮಂಗಳವಾರ(ಅಕ್ಟೋಬರ್ 19) ಅಲ್ಪ ಇಳಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ.

Advertisement

ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 49.54 ಅಂಕ ಇಳಿಕೆಯೊಂದಿಗೆ 61,716.05 ಅಂಕಗಳ ದಾಖಲೆ ವಹಿವಾಟಿನೊಂದಿಗೆ ದಿನಾಂತ್ಯದ ವಹಿವಾಟು ಕೊನೆಗೊಂಡಿದೆ. ಅದೇ ರೀತಿ ಎನ್ ಎಸ್ ಇ ನಿಫ್ಟಿ 58.20 ಅಂಕ ಇಳಿಕೆಯಾಗಿದ್ದು, 18,418.80 ಅಂಕಗಳಲ್ಲಿ ವಹಿವಾಟು ಮುಕ್ತಾಯಗೊಂಡಿದೆ.

ನಿಫ್ಟಿ, ಸೆನ್ಸೆಕ್ಸ್ ಅಲ್ಪ ಇಳಿಕೆಯೊಂದಿಗೆ ಟೆಕ್ ಮಹೀಂದ್ರ, ಎಲ್ ಆ್ಯಂಡ್ ಟಿ, ಬಜಾಜ್ ಫಿನ್ ಸರ್ವ್ ಮತ್ತು ಕೋಟಕ್ ಮಹೀಂದ್ರ ಬ್ಯಾಂಕ್ ಷೇರುಗಳು ಲಾಭಗಳಿಸಿದೆ. ಮತ್ತೊಂದೆಡೆ ಐಟಿಸಿ, ಟಾಟಾ ಮೋಟಾರ್ಸ್, ಇಚರ್ ಮೋಟಾರ್ಸ್, ಎಚ್ ಯುಎಲ್ ಮತ್ತು ಟೈಟಾನ್ ಕಂಪನಿ ಷೇರುಗಳು ನಷ್ಟ ಕಂಡಿದೆ.

ಜಾಗತಿಕ ಷೇರು ಮಾರುಕಟ್ಟೆಯ ಧನಾತ್ಮಕ ವಹಿವಾಟಿನ ಪರಿಣಾಮ ಮಂಗಳವಾರ (ಅಕ್ಟೋಬರ್ 19) ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕ ಸುಮಾರು 400 ಅಂಕ ಏರಿಕೆ ಕಂಡಿದ್ದು, 62,000 ಅಂಕಗಳ ಸಾರ್ವಕಾಲಿಕ ಗರಿಷ್ಠ ದಾಖಲೆ ಬರೆದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

More
Next