Advertisement

ದೇಶದ ನಿರುದ್ಯೋಗ ಪ್ರಮಾಣವು ಜುಲೈನಲ್ಲಿ ಇಳಿಕೆ

12:54 PM Aug 03, 2022 | Team Udayavani |

ನವದೆಹಲಿ: ದೇಶದ ನಿರುದ್ಯೋಗ ಪ್ರಮಾಣವು ಜುಲೈ ತಿಂಗಳಲ್ಲಿ ಶೇ.6.80ಕ್ಕಿಳಿದಿದ್ದು, ಕಳೆದ 6 ತಿಂಗಳಲ್ಲೇ ಇದೇ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕಿಳಿದಂತಾಗಿದೆ ಎಂದು ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ(ಸಿಎಂಐಇ) ದತ್ತಾಂಶ ಹೇಳಿದೆ.

Advertisement

ಜೂನ್‌ನಲ್ಲಿ ಶೇ.7.80ರಷ್ಟಿದ್ದ ನಿರುದ್ಯೋಗ ದರ ಜುಲೈನಲ್ಲಿ ಶೇ.6.80ಕ್ಕೆ ಇಳಿದಿದೆ. ಗ್ರಾಮೀಣ ಪ್ರದೇಶದ ನಿರುದ್ಯೋಗವು ಜೂನ್‌ನಲ್ಲಿ 265.2 ದಶಲಕ್ಷದಷ್ಟಿದ್ದರೆ, ಜುಲೈನಲ್ಲಿ 272.1 ದಶಲಕ್ಷಕ್ಕೆ ತಲುಪಿದೆ.

ನಗರ ಪ್ರದೇಶದಲ್ಲಿ ಮಾತ್ರ ಜೂನ್‌ನಲ್ಲಿ ಶೇ.7.8 ರಷ್ಟಿದ್ದ ನಿರುದ್ಯೋಗ ಪ್ರಮಾಣ ಜುಲೈನಲ್ಲಿ ಶೇ.8.21ಕ್ಕೇರಿದೆ ಎಂದೂ ದತ್ತಾಂಶ ತಿಳಿಸಿದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next