ಹೊಸದಿಲ್ಲಿ: ಭಾರತದ ಸೇವಾ ವಲಯದ ಪ್ರಗತಿಯು ನವೆಂಬರ್‌ನಲ್ಲಿ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ. ಮಾಸಿಕ ಸರ್ವೇಯ ಪ್ರಕಾರ, ಎಸ್ ಆ್ಯಂಡ್ ಪಿ ಗ್ಲೋಬಲ್ ಇಂಡಿಯಾ ಸೇವೆಗಳ ಪಿಎಂಐ ವ್ಯಾಪಾರ ಚಟುವಟಿಕೆ ಸೂಚ್ಯಂಕವು ಅಕ್ಟೋಬರ್‌ನಲ್ಲಿ 55.1 ಇದ್ದದ್ದು, ನವೆಂಬರ್‌ನಲ್ಲಿ 56.4ಕ್ಕೆ ಏರಿಕೆಯಾಗಿದೆ. ಇದು ಹೆಚ್ಚಿನ ನಿರ್ವಹಣ ವೆಚ್ಚಗಳ ನಡುವೆಯೂ ಕಳೆದ ಮೂರು ತಿಂಗಳಲ್ಲಿ ಉತ್ಪಾದನೆಯಲ್ಲಿ ತೀಕ್ಷ್ಣವಾದ ಹೆಚ್ಚಳವನ್ನು ಸೂಚಿಸುತ್ತದೆ.
“ಭಾರತೀಯ ಸೇವಾ ಪೂರೈಕೆದಾರರು ಬಲವಾದ ದೇಶೀಯ ಬೇಡಿಕೆಯ ಪ್ರಯೋಜನಗಳನ್ನು ಪಡೆದುಕೊಳ್ಳುವುದನ್ನು ಮುಂದುವರಿಸಿದ್ದಾರೆ. 2022ರ ನವೆಂಬರ್‌ನ ದತ್ತಾಂಶವು ಹೊಸ ವ್ಯಾಪಾರ ಮತ್ತು ಉತ್ಪಾದನೆಯಲ್ಲಿ ತೀವ್ರ ಹೆಚ್ಚಳವನ್ನು ಸೂಚಿಸುತ್ತದೆ,’ ಎಂದೂ ಸರ್ವೇ ಹೇಳಿದೆ.