Advertisement

ಭಾರತದ ನಂ.1 ಸ್ಮಾರ್ಟ್ ವಾಚ್‍ ಬ್ರಾಂಡ್‍ ನಾಯ್ಸ್ ಗೆ ವಿರಾಟ್‍ ಕೊಯ್ಲಿ ಬ್ರಾಂಡ್‍ ಅಂಬಾಸಡರ್

09:26 PM Dec 05, 2022 | Team Udayavani |

ಬೆಂಗಳೂರು: ಭಾರತದ ಮುಂಚೂಣಿ ಸ್ಮಾರ್ಟ್ ವಾಚ್‍ ಬ್ರಾಂಡ್‍ ನಾಯ್ಸ್ ನ ನೂತನ ಬ್ರಾಂಡ್‍ ಅಂಬಾಸಡರ್ ಆಗಿ ಪ್ರಸಿದ್ಧ ಕ್ರಿಕೆಟಿಗ ವಿರಾಟ್‍ ಕೊಹ್ಲಿ ನೇಮಕಗೊಂಡಿದ್ದಾರೆ.

Advertisement

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ನಾಯ್ಸ್ ಕಂಪೆನಿಯ ಸಹ ಸ್ಥಾಪಕ ಗೌರವ್ ಖತ್ರಿ ಕ್ರಿಕೆಟ್‍ ದಂತಕತೆ ವಿರಾಟ್‍ ಕೊಹ್ಲಿ ಅವರನ್ನು ನಾಯ್ಸ್ ಸ್ಮಾರ್ಟ್ ವಾಚ್‍ಗಳ ಬ್ರಾಂಡ್‍ ಅಂಬಾಸಡರ್ ಆಗಿ ಘೋಷಿಸುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ.

ಸ್ಮಾರ್ಟ್ ವೇರ್ ಬಲ್ ಉತ್ಪನ್ನಗಳಲ್ಲಿ ನಾಯ್ಸ್ ಮತ್ತು ಕ್ರಿಕೆಟ್‍ ನಲ್ಲಿ ವಿರಾಟ್‍ ಈಗಾಗಲೇ ಪ್ರಸಿದ್ಧರಾಗಿರುವ ನಾಯಕರಾಗಿದ್ದಾರೆ. ಸ್ಮಾರ್ಟ್ ವಾಚ್‍ ವಿಭಾಗದಲ್ಲಿ ನಾಯ್ಸ್ ಬಲಿಷ್ಠ ಭಾರತೀಯ ಬ್ರಾಂಡ್‍ ಆಗಿದೆ. ಐಡಿಸಿ ಸಮೀಕ್ಷೆಯ ಪ್ರಕಾರ ಕಳೆದ 9 ತ್ರೈಮಾಸಿಕಗಳಿಂದಲೂ ನಂ. 1 ಸ್ಥಾನವನ್ನು ಕಾಯ್ದುಕೊಂಡು ಬಂದಿದೆ ಎಂದರು.

ಈ ಪಾಲುದಾರಿಕೆಯ ಬಗ್ಗೆ ಪ್ರತಿಕ್ರಿಯಿಸಿದ ವಿರಾಟ್ ಕೊಹ್ಲಿ, “ನಾನು ಯಾವಾಗಲೂ ಸಮರ್ಥ ಬ್ರ್ಯಾಂಡ್‌ಗಳೊಂದಿಗೆ ಕೆಲಸ ಮಾಡುತ್ತೇನೆ. ಜಾಗತಿಕ ಭೂಪಟದಲ್ಲಿ ಭಾರತವನ್ನು ಇರಿಸುವ ಮೂಲಕ ಸ್ಮಾರ್ಟ್ ವೇರ್ ಬಲ್‌ಗಳ ಯುಗವನ್ನು ಪ್ರಾರಂಭಿಸಿರುವ ‘ನಾಯ್ಸ್’ ನೊಂದಿಗೆ ಪಾಲುದಾರನಾಗಿರುವುದು ಸಂತಸ ತಂದಿದೆ ಎಂದರು.

ಇದನ್ನೂ ಓದಿ: ರಾವಲ್ಪಿಂಡಿ ಟೆಸ್ಟ್‌ : ಪಾಕ್ ವಿರುದ್ಧ ಇಂಗ್ಲೆಂಡ್‌ಗೆ 74 ರನ್‌ ಗೆಲುವು

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next