ಹೈದರಾಬಾದ್: ವಿಶ್ವ ವನಿತಾ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆದ್ದ ನಿಖತ್ ಜರೀನ್ ಅವರ ಸಾಧನೆಗೆ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅಭಿನಂದನೆ ಸಲ್ಲಿಸಿದ್ದಾರೆ.
ಇಸ್ತಾಂಬುಲ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ಮೂಲಕ ಜರೀನ್ ಅಂತಾರಾಷ್ಟ್ರೀಯ ಕ್ರೀಡಾ ವೇದಿಕೆ ಯಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ನಿಜಾಮಾಬಾದ್ ಜಿಲ್ಲೆಯ ನಿಖತ್ ಅವರ ಈ ಸಾಧನೆಗೆ ಸರಕಾರ ಅಭಿನಂದನೆ ಸಲ್ಲಿಸು ತ್ತಿದೆ ಎಂದು ಸಿಎಂ ಕಚೇರಿಯ ಪ್ರಕಟನೆ ತಿಳಿಸಿದೆ.
ರಾಜ್ಯ ಸರಕಾರದ ಪ್ರೋತ್ಸಾಹ ದಿಂದ ನಿಖತ್ ಇದೀಗ ಬಾಕ್ಸಿಂಗ್‌ನಲ್ಲಿ ವಿಶ್ವ ಚಾಂಪಿಯನ್ ಆಗಿರುವುದು ಹೆಮ್ಮೆಯ ಕ್ಷಣವಾಗಿದೆ ಎಂದು ಚಂದ್ರಶೇಖರ್ ರಾವ್ ತಿಳಿಸಿದ್ದಾರೆ.
ಐದನೇ ವನಿತಾ ಬಾಕ್ಸರ್
52 ಕೆ.ಜಿ. ವಿಭಾಗದ ಫ್ಲೈವೇಟ್ ವಿಭಾಗದಲ್ಲಿ ಸ್ಪರ್ಧಿಸಿದ 25ರ ಹರೆಯದ ನಿಖತ್ ಜರೀನ್ ಅವರು ಥಾಯ್ಲೆಂಡಿನ ಜಿಟ್‌ಪಾಂಗ್ ಜುಟಮಾಸ್ ಅವರನ್ನು 5-0 ಅಂತರದಿಂದ ಉರುಳಿಸಿ ಚಿನ್ನ ಜಯಿಸಿದ್ದರು. ಇದರೊಂದಿಗೆ ಸ್ವರ್ಣ ಸಾಧನೆಗೈದ ಭಾರತದ ಐದನೇ ವನಿತಾ ಬಾಕ್ಸರ್ ಎಂಬ ಗೌರವಕ್ಕೆ ಪಾತ್ರರಾದರು. ಈ ಹಿಂದೆ ದಾಖಲೆ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ (2002, 2005, 2006, 2008, 2010 ಮತ್ತು 2018), ಸರಿತಾ ದೇವಿ (2006), ಜೆನ್ನಿ ಆರ್.ಎಲ್. (2006) ಮತ್ತು ಲೇಖಾ ಕೆ.ಸಿ. (2006) ವಿಶ್ವ ಚಾಂಪಿಯನ್ ಸಾಧನೆ ಮಾಡಿದ್ದರು.
Related Articles
ಮೇರಿ ಕೋಮ್ ಅವರ 2018ರ ವಿಶ್ವ ಚಾಂಪಿಯನ್ ಸಾಧನೆಯ ಬಳಿಕ ಇದು ಭಾರತಕ್ಕೆ ಒಲಿದ ಮೊದಲ ಚಿನ್ನದ ಪದಕ ಮತ್ತು ವಿಶ್ವ ಚಾಂಪಿಯನ್ ಸಾಧನೆಯಾಗಿದೆ. ಈ ಸಾಧನೆಗೈದ ನಿಖತ್ ಈ ಹಿಂದೆ ಜೂನಿಯರ್ “ಯೂತ್ ವರ್ಲ್ಡ್’ ಚಾಂಪಿಯ್ ಕೂಡ ಆಗಿದ್ದರು.