Advertisement

ಇಂದು ಸಿಜೆಐ ಆಗಿ ನ್ಯಾ.ಮಿಶ್ರಾ ಅಧಿಕಾರ ಸ್ವೀಕಾರ

06:40 AM Aug 28, 2017 | Team Udayavani |

ಈವರೆಗೆ ಹಲವು ಪ್ರಮುಖ ಪ್ರಕರಣಗಳಲ್ಲಿ ನಿಷ್ಠುರವಾಗಿ ತೀರ್ಪು ನೀಡಿ “ಜನಪರ’ ಜಡ್ಜ್ ಎಂದು ಕರೆಸಿಕೊಂಡಿರುವ ನ್ಯಾ.ದೀಪಕ್‌ ಮಿಶ್ರಾ ಅವರು ಸೋಮವಾರ 45ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿ ಕೊಳ್ಳಲಿದ್ದಾರೆ. ಒಡಿಶಾ ಮೂಲದ‌ ನ್ಯಾ.ಮಿಶ್ರಾ ನೀಡಿದ ಮಹತ್ವದ ತೀರ್ಪುಗಳು ಹಾಗೂ ಮುಂದಿನ 13 ತಿಂಗಳ ಸೇವಾವಧಿಯಲ್ಲಿ ಎದುರಿಸಲಿ ರುವ ಸವಾಲುಗಳ ಕುರಿತು ಮಾಹಿತಿ ಇಲ್ಲಿದೆ.

Advertisement

ಕೊಟ್ಟ ಪ್ರಮುಖ ತೀರ್ಪುಗಳು
– ಸಿನಿಮಾ ಪ್ರದರ್ಶನಕ್ಕೆ ಮುನ್ನ ಎಲ್ಲ ಚಿತ್ರಮಂದಿರಗಳಲ್ಲೂ ರಾಷ್ಟ್ರಗೀತೆ ಹಾಡಬೇಕು. ಎಲ್ಲರೂ ಎದ್ದುನಿಂತು ಗೌರವ ಸೂಚಿಸಬೇಕು ಎಂದಿದ್ದು
– ರಾತ್ರೋರಾತ್ರಿ ವಿಚಾರಣೆ ನಡೆಸಿ ಮುಂಬೈ ಸ್ಫೋಟದ ಅಪರಾಧಿ, ಉಗ್ರ ಯಾಕೂಬ್‌ ಮೆಮನ್‌ನ ಗಲ್ಲುಶಿಕ್ಷೆ ಎತ್ತಿಹಿಡಿದಿದ್ದು
– ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದ್ದು
ಮಹಿಳೆಯರಿಗೂ ಕೇರಳದ ಶಬರಿಮಲೆ ದೇವಾಲಯದಲ್ಲಿ ಪೂಜೆ ಸಲ್ಲಿಲು ಅವಕಾಶ ನೀಡಬೇಕೆಂದು ಆದೇಶಿಸಿದ್ದು
– ದೇಶಾದ್ಯಂತ ಅಶ್ಲೀಲ ಚಿತ್ರಗಳಿರುವ ವೆಬ್‌ಸೈಟುಗಳನ್ನು ಹಂತ ಹಂತವಾಗಿ ಮುಚ್ಚುವಂತೆ ಸರ್ಕಾರಕ್ಕೆ ಸೂಚಿಸಿದ್ದು

ಮುಂದಿರುವ ಸವಾಲುಗಳು
– ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ಕಲ್ಪಿಸಿರುವ ಸಂವಿಧಾನದ 35ಎ ವಿಧಿಯ ಕುರಿತ ವಿಚಾರಣೆ
– ಸಲಿಂಗಕಾಮವನ್ನು ಅಪರಾಧವೆಂದು ಘೋಷಿಸಿರುವ ಸೆಕ್ಷನ್‌ನ ಮಾನ್ಯತೆ ಕುರಿತು ಸಂವಿಧಾನ ಪೀಠ ರಚನೆ
– ನ್ಯಾಯಾಂಗ ನೇಮಕಕ್ಕೆ ಸಂಬಂ ಧಿಸಿದ ಗೊಂದಲಗಳ ನಿವಾರಣೆ
– ಕೆಳಹಂತದ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ 2.8 ಕೋಟಿ ಕೇಸುಗಳ ಸಂಖ್ಯೆ ಇಳಿಸುವ ನಿಟ್ಟಿನಲ್ಲಿ ಹೆಜ್ಜೆ ಆಧಾರ್‌ ಮಾನ್ಯತೆ ಕುರಿತ ಅರ್ಜಿಗೆ ಸಂಬಂಧಿಸಿದ ನಿರ್ಧಾರ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ತೀರ್ಪು
– ಕರ್ನಾಟಕ-ತಮಿಳುನಾಡು ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿ ತೀರ್ಪು

Advertisement

Udayavani is now on Telegram. Click here to join our channel and stay updated with the latest news.

Next