Advertisement

“ಮ್ಯಾಂಗೋ ಮ್ಯಾನ್‌’ಬುಟ್ಟಿಯಲ್ಲಿ ಮೋದಿ, ಐಶ್ವರ್ಯ, ಸಚಿನ್‌!

09:47 AM Jul 21, 2022 | Team Udayavani |

ನವದೆಹಲಿ: ಉತ್ತರ ಪ್ರದೇಶದ ಮಲಿಹಾಬಾದ್‌ ಎಂಬಲ್ಲಿ ನೂರಾರು ಹೊಸ ತಳಿಯ ಮಾವಿನ ಹಣ್ಣುಗಳನ್ನು ಬೆಳೆದು, ಭಾರತದ “ಮ್ಯಾಂಗೋ ಮ್ಯಾನ್‌’ ಎಂಬ ಅನ್ವರ್ಥನಾಮ ಗಳಿಸಿರುವ ಕಲೀಮುಲ್ಲಾ ಖಾನ್‌ (82) ತಾವೇ ಸಂಶೋಧಿಸಿದ ವಿಶೇಷ ತಳಿಯ ಮಾವಿನ ಹಣ್ಣುಗಳಿಗೆ ಪ್ರಧಾನಿ ನರೇಂದ್ರ ಮೋದಿ, ಖ್ಯಾತ ನಟಿ ಐಶ್ವರ್ಯ ರೈ, ಖ್ಯಾತ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹಾಗೂ ಮುಂತಾದ ದಿಗ್ಗಜರ ಹೆಸರಿಟ್ಟಿದ್ದಾರೆ.

Advertisement

ಬಾಲ್ಯದಲ್ಲಿ ಶಿಕ್ಷಣದಿಂದ ವಂಚಿತರಾದರೂ ಸ್ವಇಚ್ಛೆಯಿಂದ ಸಸ್ಯಜ್ಞಾನವನ್ನು ಪಡೆದವರು. ತಮ್ಮ ಪೂರ್ವಿಕರು ನಿರ್ವಹಿಸಿದ್ದ ತೋಟದಲ್ಲಿರುವ 120 ವರ್ಷದ ಮಾವಿನ ಮರದಿಂದಲೇ ಇವರು ಹೊಸ ತಳಿಗಳನ್ನು ಸೃಷ್ಟಿಸಿದ್ದಾಗಿ ಹೇಳಿದ್ದಾರೆ.

1987ರಿಂದ ತಮ್ಮ ಪ್ರಯೋಗಗಳನ್ನು ಆರಂಭಿಸಿದ್ದ ಇವರು ಮೂಲ ಮರದಿಂದ ಹಲವಾರು ಕಸಿ ಸಸ್ಯಗಳಿಗೆ ಕಸಿ ಮಾಡುವ ಮೂಲಕ 300ಕ್ಕೂ ಹೆಚ್ಚು ಹೊಸ ತಳಿಗಳನ್ನು ಸೃಷ್ಟಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next