ನವದೆಹಲಿ: ಜಾಗತಿಕ ಬೇಡಿಕೆ ಕುಸಿತದ ಕಾರಣದಿಂದ ದೇಶದಲ್ಲಿ ಸತತ 3ನೇ ತಿಂಗಳು ರಫ್ತು ಪ್ರಮಾಣ ಇಳಿಕೆಯಾಗಿದ್ದು, ಶೇ.8.8ರಷ್ಟು ಇಳಿಕೆಯೊಂದಿಗೆ ರಫ್ತು ಪ್ರಮಾಣ 33.88 ಶತಕೋಟಿ ಡಾಲರ್‌ಗೆ ತಲುಪಿದೆ.
ಇದರೊಂದಿಗೆ ವ್ಯಾಪಾರ ಕೊರತೆ ಕೂಡ ವರ್ಷದಲ್ಲಿ ಅತ್ಯಂತ ಕಡಿಮೆ ಪ್ರಮಾಣ ಅಂದರೆ 17.43 ಶತಕೋಟಿ ಡಾಲರ್‌ಗೆ ತಲುಪಿದೆ ಎಂದು ಬುಧವಾರ ಬಿಡುಗಡೆಯಾದ ದತ್ತಾಂಶದಲ್ಲಿ ತಿಳಿಸಲಾಗಿದೆ.
ಇನ್ನು, ಆಮದು ಪ್ರಮಾಣವೂ ಇಳಿಮುಖವಾಗಿದ್ದು, ಶೇ. 8.21ರಷ್ಟು ಆಮದು ಇಳಿಕೆಯೊಂದಿಗೆ ಈ ಪ್ರಮಾಣ 51.31 ಶತಕೋಟಿ ಡಾಲರ್‌ಗೆ ತಲುಪಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಪ್ರಮಾಣ 55.9 ಶತಕೋಟಿ ಡಾಲರ್ ಆಗಿತ್ತು.
ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್‌ನಿಂದ ಫೆಬ್ರವರಿವರೆಗಿನ ಅವಧಿಯಲ್ಲಿ ದೇಶದ ಒಟ್ಟು ರಫ್ತು ಪ್ರಮಾಣ ಶೇ.7.5ರಷ್ಟು ಏರಿಕೆಯೊಂದಿಗೆ 405.94 ಶತಕೋಟಿ ಡಾಲರ್ ಮೌಲ್ಯಕ್ಕೆ ರಫ್ತು ತಲುಪಿದೆ.
Related Articles