Advertisement

“ರಿಷಬ್‌ ʼಕಾಂತಾರ-2”  ಕಥೆ ಬರೆಯುತ್ತಿದ್ದಾರೆ.. ಬಿಗ್‌ ಅಪ್ಡೇಟ್‌ ಕೊಟ್ಟ ವಿಜಯ್ ಕಿರಗಂದೂರು

01:17 PM Jan 21, 2023 | Team Udayavani |

ಬೆಂಗಳೂರು: ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿ, ಗ್ಲೋಬಲ್‌ ಲೆವೆಲ್‌ ನಲ್ಲಿ ಹವಾ ಎಬ್ಬಿಸಿದ ʼಕಾಂತಾರʼ ಸ್ಯಾಂಡಲ್‌ ವುಡ್ ನಲ್ಲಿ ದಂತ ಕಥೆಯಾಗಿ ಉಳಿದಿದೆ. ಸಿನಿಮಾ ಯಶಸ್ಸಿಗೆ ಹರಕೆ ಹೇಳಿಕೊಂಡಿದ್ದ ಸಿನಿಮಾ ತಂಡ ದೈವಕ್ಕೆ ಕೋಲ ಕೊಟ್ಟು ಹರಕೆ ತೀರಿಸಿದೆ.

Advertisement

ಬಾಕ್ಸ್‌ ಆಫೀಸ್‌ ನಲ್ಲಿ ಸಮಾರು 400 ಕೋಟಿ ಗಳಿಕೆ ಕಂಡ ʼಕಾಂತಾರʼ ರಿಷಬ್‌ ಶೆಟ್ಟಿ ನಟನೆ ಹಾಗೂ ನಿರ್ದೇಶನ ಎರಡಕ್ಕೂ ಫೇಮ್‌ ತಂದಕೊಟ್ಟಿತು. ʼಕಾಂತಾರ-2ʼ ತೆರೆಗೆ ಬರುತ್ತದೆ ಎನ್ನುವ ಸುದ್ದಿ ಸಿನಿಮಾ ರಿಲೀಸ್‌ ಆಗಿ ಭರ್ಜರಿ ಪ್ರದರ್ಶನ ಕಾಣುವಾಗ ವೈರಲ್‌ ಆಗಿತ್ತು. ಆದರೆ ಇದುವರೆಗೆ ಎಲ್ಲೂ ಆ ಬಗ್ಗೆ ಚಿತ್ರ ತಂಡ ಮಾಹಿತಿ ಕೊಟ್ಟಿರಲಿಲ್ಲ. ʼಕಾಂತಾʼರ ಬಂದ ಮೇಲೆ ದೈವದ ವೇಷವನ್ನು ಹಾಕಿ ಕೆಲಕಡೆ ತುಳುನಾಡಿನ ಸಂಪ್ರದಾಯವನ್ನು ಅಪಮಾನಿಸುತ್ತಿದ್ದಾರೆ ಎಂದು ಕರಾವಳಿಯ ಕಡೆ ʼಕಾಂತಾರ-2ʼ ಸಿನಿಮಾ ಮಾಡೋದು ಬೇಡ ಎನ್ನುವ ಮಾತು ಕೇಳಿಬಂದಿತ್ತು.

ʼಕಾಂತಾರʼಕ್ಕಾಗಿ ರಿಷಬ್‌ ಶೆಟ್ಟಿ ಸಾಕಷ್ಟು ತಯಾರಿ ನಡೆಸಿಕೊಂಡಿದ್ದರು. ದೈವದ ಇಚ್ಛೆಯಂತೆಯೇ ಸಿನಿಮಾ ಮೂಡಿಬಂದಿದೆ. ಮತ್ತೆ ದೈವದ ಕಥೆಯನ್ನು ʼಕಾಂತಾರ-2ʼ ಆಗಿ ತರುವುದು ಅಷ್ಟು ಸುಲಭವಲ್ಲ. ಆದರೆ ʼಕಾಂತಾರ-2ʼ ಸಿನಿಮಾ ಬರುವುದು ಖಚಿತವೆಂದು ಸ್ವತಃ ಹೊಂಬಾಳೆ ಫಿಲ್ಮ್ಸ್ ನ ವಿಜಯ್ ಕಿರಗಂದೂರು ಅವರೇ ಹೇಳಿದ್ದಾರೆ.

ʼಡೆಡ್‌ ಲೈನ್‌ʼ ಜೊತೆ ಮಾತನಾಡಿರುವ ಅವರು “ರಿಷಬ್ ಶೆಟ್ಟಿ ಅವರು ʼಕಾಂತಾರ-2” ಸಿನಿಮಾದ ಕಥೆ ಬರೆಯುತ್ತಿದ್ದಾರೆ. ಅದರ ತಯಾರಿಗಾಗಿ, ಚಿತ್ರಕ್ಕಾಗಿ ಸಂಶೋಧನೆ ನಡೆಸಲು ಎರಡು ತಿಂಗಳು ತಮ್ಮ ರೈಟಿಂಗ್‌ ಟೀಮ್‌ ನೊಂದಿಗೆ ರಿಷಬ್‌  ಕರಾವಳಿ ಕರ್ನಾಟಕದ ಕಾಡುಗಳನ್ನು ಸುತ್ತಲಿದ್ದಾರೆ” ಎಂದಿದ್ದಾರೆ.

ರಿಷಬ್‌ ಅವರು ಜೂನ್‌ ನಲ್ಲಿ ಚಿತ್ರೀಕರಣ ಆರಂಭಿಸಲು ಯೋಜನೆ ಹಾಕಿಕೊಂಡಿದ್ದಾರೆ. ಮಳೆಯ ದೃಶ್ಯಗಳು ಸಿನಿಮಾದಲ್ಲಿ ಬೇಕಾಗಿರುವುದರಿಂದ ಜೂನ್‌ ನಲ್ಲಿ ಯೋಜನೆ ಹಾಕಿಕೊಂಡಿದ್ದಾರೆ. ಪ್ಯಾನ್‌ ಇಂಡಿಯಾದಲ್ಲಿ ಸಿನಿಮಾವನ್ನು 2024 ರ ಏಪ್ರಿಲ್‌ ಅಥವಾ ಮೇ ವೇಳೆಗೆ ರಿಲೀಸ್‌ ಮಾಡುವ ಯೋಜನೆ ನಮ್ಮದು ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.

Advertisement

ಸದ್ಯ ವಿಜಯ್ ಕಿರಗಂದೂರು ಹೇಳಿಕೆ ವೈರಲ್‌ ಆಗಿದ್ದು, ಟ್ವಿಟರ್‌ ನಲ್ಲಿ ʼಕಾಂತಾರ-2ʼ ಟ್ರೆಂಡ್‌ ಆಗಿದೆ. ಇತ್ತೀಚೆಗೆ ಕಾಂತಾರ ಆಸ್ಕರ್‌ ಗೆ ನಾಮಿನೇಟ್‌ ಆಗಲು ಅರ್ಹತೆಯನ್ನು ಪಡೆದುಕೊಂಡಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next