Advertisement

21 ವರ್ಷದ ಬಳಿಕ ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ

05:20 PM Dec 13, 2021 | Team Udayavani |
1. ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ತರುತ್ತೇವೆ: ಸುನೀಲ್ ಕುಮಾರ್ ಬೆಳಗಾವಿಯಲ್ಲಿ‌ ಇಂಧನ ಸಚಿವ ಸುನೀಲ್‌ ಕುಮಾರ್ ಮತಾಂತರ ನಿಷೇಧ ಕಾಯ್ದೆಯ ಬಗ್ಗೆ ಪ್ರತಿಕ್ರಿಯಿಸಿದರು. ಸದ್ಯ ಮತಾಂತರ ನಿಷೇಧ ಕಾಯಿದೆ ತರುತ್ತೇವೆ. ಮುಂದಿನ ದಿನಗಳಲ್ಲಿ ಲವ್ ಜಿಹಾದ್ ನಿಷೇಧ ಕಾಯಿದೆಯನ್ನೂ ತರುತ್ತೇವೆ ಎಂದು ತಿಳಿಸಿದರು. 2. ಕಾಶಿ ವಿಶ್ವನಾಥ್ ಕಾರಿಡಾರ್ ಯೋಜನೆಗೆ ಪ್ರಧಾನಿ ಚಾಲನೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಾರಾಣಸಿಯಲ್ಲಿ 339 ಕೋಟಿ ರೂಪಾಯಿ ವೆಚ್ಚದ ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿದರು. ಈ ವೇಳೆ ಕಾಶಿ ನಮ್ಮ ಭಾರತದ ಪ್ರಾಚೀನತೆ, ಸಂಪ್ರದಾಯ, ಸಂಸ್ಕೃತಿಯ ಪ್ರತೀಕವಾಗಿದೆ ಎಂದರು. 3. 21 ವರ್ಷದ ಬಳಿಕ ಮಿಸ್ ಯುನಿವರ್ಸ್ ಗೆದ್ದ ಭಾರತದ ಚೆಲುವೆ ಇಸ್ರೇಲ್‌ ನ ಐಲಾಟ್‌ನಲ್ಲಿ ನಡೆದ ಸೌಂದರ್ಯ ಸ್ಪರ್ಧೆ ಮಿಸ್ ಯುನಿವರ್ಸ್ ನಲ್ಲಿ ಭಾರತದ ಚೆಲುವೆ ಹರ್ನಾಜ್ ಸಂಧು ಗೆಲುವು ಸಾಧಿಸಿದ್ದಾರೆ. ಈ ಮೂಲಕ 21 ವರ್ಷಗಳ ಬಳಿಕ ಮಿಸ್ ಯುನಿವರ್ಸ್ ಕಿರೀಟ ಭಾರತದ ಬೆಡಗಿಯ ಪಾಲಾಗಿದೆ. 4. 2030ಕ್ಕೆ ಭಾರತದ್ದೇ ಬಾಹ್ಯಾಕಾಶ ಕೇಂದ್ರ ಇಸ್ರೋ ಇದುವರೆಗೆ ಸಾಧಿಸಿದ ಸಾಧನೆ ಅಪಾರ. ಈ ಸಂಸ್ಥೆ 2030ರ ಒಳಗಾಗಿ ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಮಾಡುವ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ಅದಕ್ಕಾಗಿ ದೇಶಿಯವಾಗಿಯೇ ಅಭಿವೃದ್ಧಿಗೊಳಿಸಲಾಗಿರುವ ತಂತ್ರಜ್ಞಾನ ಬಳಕೆ ಮಾಡುವುದಾಗಿ ತಿಳಿಸಿದೆ. 5. ಮತಾಂತರ ನಿಷೇಧ ಕಾಯಿದೆ ಹಿಂದೆ ದುರುದ್ದೇಶವಿದೆ: ಸಿದ್ದರಾಮಯ್ಯ ಬೆಳಗಾವಿ ಸುವರ್ಣ ಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಮತಾಂತರ ನಿಷೇಧ ಕಾಯ್ದೆ ಮಂಡನೆಯನ್ನ ನಾವು ವಿರೋಧಿಸುತ್ತೇವೆ ಎಂದರು. ಈ ಕಾಯಿದೆಯನ್ನು ಕೇವಲ ದುರುದ್ದೇಶದಿಂದ ತರಲು ಹೊರಟಿದ್ದಾರೆ ಎಂದು ಪ್ರತಿಕ್ರಿಯಿಸಿದರು. 6. ವಿಶೇಷ ವಿಮಾನದಲ್ಲಿ ವಾರಾಣಸಿಗೆ ತೆರಳಿದ ಸಿಎಂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಾವಿಯ ಸುವರ್ಣಸೌಧದಲ್ಲಿನ ವಿಧಾನ ಮಂಡಲ ಅಧಿವೇಶನದಲ್ಲಿ ಇಂದು ಭಾಗಿಯಾಗಿದ್ದರು. ಅಲ್ಲಿಂದ ವಿಶೇಷ ವಿಮಾನದ ಮೂಲಕ ವಾರಾಣಸಿಗೆ ತೆರಳಿದ್ದು, ಈ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ವಾರಾಣಸಿಯಲ್ಲಿ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಿದೆ ಎಂದರು. 7. ಅಪ್ಪು ಹೇಳಿದ್ರಿಂದ ಆ ಸಿನಿಮಾವನ್ನು ನೋಡಿದೆ : ಸಿದ್ದರಾಮಯ್ಯ ವಿಧಾನ ಮಂಡಲ ಅಧಿವೇಶನದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್ ಕುಮಾರ್‍ ಅವರನ್ನು ನೆನಪಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಾನು ಮೈಸೂರಿನಲ್ಲಿ ಥಿಯೇಟರ್ ಗೆ ಹೋದವನಲ್ಲ. ಆದ್ರೆ ಪುನೀತ್ ರಾಜ್ ಕುಮಾರ್ ಹೇಳಿದ್ರು ಅಂತ ಥಿಯೇಟರ್ ಗೆ ಹೋಗಿ ರಾಜಕುಮಾರ ಸಿನಿಮಾವನ್ನು ನೋಡಿದ್ದೇ ಎಂದರು. 8. ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ ಭಾರತ ಏಕದಿನ ಮತ್ತು ಟಿ20 ತಂಡದ ನೂತನ ನಾಯಕ ರೋಹಿತ್ ಶರ್ಮಾ ಮಾಜಿ ನಾಯಕ ವಿರಾಟ್ ಕೊಹ್ಲಿ ನಾಯಕತ್ವದ ಕುರಿತು ಮಾತನಾಡಿದ್ದಾರೆ. ಈ ವೇಳೆ ಕೊಹ್ಲಿ ಜೊತೆಗೆ ಮುಂದೆಯೂ ಆಡುವ ಬಯಕೆಯನ್ನು ರೋಹಿತ್ ವ್ಯಕ್ತಪಡಿಸಿದ್ದಾರೆ.
Advertisement

Udayavani is now on Telegram. Click here to join our channel and stay updated with the latest news.

Next