ನವದೆಹಲಿ:ಭಾರತದ ಅರ್ಥ ವ್ಯವಸ್ಥೆ ಜಗತ್ತಿನಲ್ಲಿಯೇ ಅತ್ಯಂತ ಶರವೇಗದಲ್ಲಿ ಬೆಳೆಯುವುದರತ್ತ ದಾಪುಗಾಲು ಹಾಕುತ್ತಿದೆ. ಇದರ ಜತೆಗೆ ಪ್ರಸಕ್ತ ವಿತ್ತೀಯ ವರ್ಷದಲ್ಲಿ ಮುಂದಿನ ಭಾಗದಲ್ಲಿ ಒಟ್ಟು ದೇಶೀಯ ಉತ್ಪಾದಕತೆ (ಜಿಡಿಪಿ) ಶೇ.9.2 ಆಗಿರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಅಂಕಿ ಅಂಶ ಶುಕ್ರವಾರ ತಿಳಿಸಿದೆ.
ಹೀಗಾಗಿ, ಸೋಂಕು ಶುರುವಾಗುವ ಬೆಳವಣಿಗೆಗಳಿಗಿಂತ ಹಿಂದಿನ ವ್ಯವಸ್ಥೆಯತ್ತ ಅರ್ಥ ವ್ಯವಸ್ಥೆ ಮರಳಲಿದೆ ಎಂಬ ಆಶಾ ಭಾವನೆಯೂ ವ್ಯಕ್ತವಾಗಿದೆ.
ದೇಶದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಬಗ್ಗೆ ಹಲವು ಅಂಕಿ-ಅಂಶಗಳು ಪುಷ್ಟೀಕರಿಸುವಂತೆಯೇ ಸಮಾಧಾನಕರವಾಗಿರುವ ಅಂಶ ಪ್ರಕಟವಾಗಿದೆ.
2021ರ ಏಪ್ರಿಲ್‌ನಿಂದ 2022ರ ಮಾರ್ಚ್ ವರೆಗಿನ ಅವಧಿಯಲ್ಲಿ ಶೇ.9.2 ಆಗಿರಲಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆಯ ಮಾಹಿತಿಯಲ್ಲಿ ಉಲ್ಲೇಖಿಸಲಾಗಿದೆ.
Related Articles
ಇದನ್ನೂ ಓದಿ:ಪಿರಾನ್ಹಾ ಮೀನು ದಾಳಿಗೆ ನಾಲ್ವರು ಸಾವು, ಹಲವು ಮಂದಿಗೆ ಗಾಯ
ಪ್ರಸಕ್ತ ವಿತ್ತೀಯ ವರ್ಷದ ಮೊದಲ ಭಾಗದಲ್ಲಿ ರಾಷ್ಟ್ರೀಯ ಸಾಂಖ್ಯಿಕ ಸಂಸ್ಥೆ ನೀಡಿದ್ದ ಮಾಹಿತಿಯಲ್ಲಿ ದೇಶದ ಅರ್ಥ ವ್ಯವಸ್ಥೆ ಶೇ. 9.5ರ ದರದಲ್ಲಿ ಬೆಳವಣಿಗೆ ಸಾಧಿಸಲಿದೆ ಎಂದು ಹೇಳಿತ್ತು.
ಆರ್‌ಬಿಐ ಕಳೆದ ತಿಂಗಳು ನಡೆಸಿದ್ದ ತ್ತೈಮಾಸಿಕ ಸಭೆಯಲ್ಲಿ ಕೂಡ ಈ ಅಂಶವನ್ನೇ ಪುಷ್ಟೀಕರಿಸಿತ್ತು.
ದೇಶದಲ್ಲಿ ಕೊರೊನಾ ಸೋಂಕಿನ ಎರಡನೇ ಅಲೆ ಧಾಂಗುಡಿ ಇರಿಸಿದ್ದಂತೆಯೇ ದೇಶದ ಅರ್ಥ ವ್ಯವಸ್ಥೆ ಶೇ.7.3ರಷ್ಟು ಕುಸಿದಿತ್ತು.