Advertisement
ಶನಿವಾರ ಖಾಸಗಿ ಸುದ್ದಿವಾಹಿನಿಯೊಂದರ ಸಮಾವೇಶದಲ್ಲಿ ಮಾತನಾಡಿದ ಅವರು, ಅಕ್ಟೋಬರ್ ಮೊದಲ ಅಥವಾ ಎರಡನೇ ವಾರದಲ್ಲೇ ಬಾಹ್ಯಾಕಾಶನೌಕೆಯ ಪ್ರಯೋಗಿಕ ಉಡಾವಣೆ ನಡೆಯಲಿದೆ. ನಂತರದ ಪ್ರಯೋಗದಲ್ಲಿ ವ್ಯೋಮಮಿತ್ರ ರೊಬೋಟ್ ಅನ್ನು ಬಾಹ್ಯಾಕಾಶಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದ್ದಾರೆ.
Related Articles
ಚಂದ್ರಯಾನ-3ರ ಲ್ಯಾಂಡರ್ ಚಂದ್ರನಲ್ಲಿ ಇಳಿದ ಸ್ಥಳಕ್ಕೆ ಶಿವಶಕ್ತಿ ಎಂದು ಹೆಸರು ನೀಡಲು ಪ್ರಧಾನಿ ಮೋದಿಯವರಿಗೆ ಅಧಿಕಾರ ನೀಡಿದ್ದು ಯಾರು ಎಂದು ಕಾಂಗ್ರೆಸ್ ನಾಯಕ ರಶೀದ್ ಅಳ್ವಿ ಪ್ರಶ್ನಿಸಿದ್ದಾರೆ. ಸುದ್ದಿವಾಹಿನಿಯ ಚರ್ಚೆಯ ವೇಳೆ ಅವರು ಬಗ್ಗೆ ಪ್ರಶ್ನೆಯನ್ನೆತ್ತಿದ್ದರು. “ಚಂದ್ರನ ಮೇಲಿನ ಸ್ಥಳಕ್ಕೆ ಪ್ರಧಾನಿ ಹೆಸರು ಇರಿಸುವುದು ಎಂದರೆ ಅದು ಹಾಸ್ಯಾಸ್ಪದ. ಅವರಿಗೆ ಅಂಥ ಅಧಿಕಾರ ಕೊಟ್ಟವರು ಯಾರು? ಈ ವಿಚಾರ ಕೇಳಿದ ಜಗತ್ತಿನ ಜನರು ನಮ್ಮನ್ನು ನೋಡಿ ಲೇವಡಿ ಮಾಡಲಿದ್ದಾರೆ. ಚಂದ್ರನ ದಕ್ಷಿಣ ಭಾಗದಲ್ಲಿ ಇಳಿದದ್ದು ನಮ್ಮ ಸಾಧನೆಯನ್ನು ಒಪ್ಪಿಕೊಳ್ಳೋಣ’ ಎಂದು ಹೇಳಿದ್ದಾರೆ.
Advertisement
ಅದಕ್ಕೆ ತಿರುಗೇಟು ನೀಡಿದ ಬಿಜೆಪಿ ನಾಯಕ ಶೆಹಜಾದ್ ಪೂನಾವಾಲ “ಕಾಂಗ್ರೆಸ್ ಹಿಂದೂ ವಿರೋಧಿ ಎನ್ನುವುದನ್ನು ಮತ್ತೂಮ್ಮೆ ಸ್ಪಷ್ಟಪಡಿಸಿದೆ. ಹಿಂದೊಮ್ಮೆ ಆ ಪಕ್ಷ ರಾಮ ಇದ್ದದ್ದು ಹೌದೇ ಎಂದು ಪ್ರಶ್ನೆ ಮಾಡಿತ್ತು. ಶಿವಶಕ್ತಿ ಮತ್ತು ತಿರಂಗ ಎನ್ನುವ ಹೆಸರು ದೇಶಕ್ಕೆ ಸಂಬಂಧ ಇರುವ ಹೆಸರು. ಲ್ಯಾಂಡರ್ ವಿಕ್ರಮ ಹೆಸರನ್ನು ವಿಕ್ರಂ ಸಾರಾಭಾಯಿ ಹೆಸರಿನ ನೆನಪಿನಲ್ಲಿ ನೀಡಲಾಗಿದೆ. ಯುಪಿಎ ಅವಧಿಯಲ್ಲಿ ಆಗಿದ್ದರೆ ಚಂದ್ರಯಾನಕ್ಕೆ ಇಂದಿರಾ ಪಾಯಿಂಟ್, ರಾಜೀವ್ ಪಾಯಿಂಟ್’ ಎಂದು ಹೆಸರಿಸುತ್ತಿದ್ದರು ಎಂದು ಟೀಕಿಸಿದ್ದಾರೆ. 2008ರಲ್ಲಿ ಚಂದ್ರಯಾನ-2 ಇಳಿದಿದ್ದ ಸ್ಥಳಕ್ಕೆ “ಜವಾಹರ್‌ಪಾಯಿಂಟ್’ ಎಂಬ ಹೆಸರು ನೀಡಲಾಗಿತ್ತು.
ಶಿವಶಕ್ತಿ ಸುತ್ತ ರೋವರ್ ಪ್ರದಕ್ಷಿಣೆ ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3ರ ಕುರಿತಾದ ನೂತನ ವಿಡಿಯೋ ಒಂದನ್ನು ಶನಿವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಹಂಚಿಕೊಂಡಿದ್ದು, ಅದರದಲ್ಲಿ ಚಂದ್ರನ ಮೇಲ್ಮೆ„ನಲ್ಲಿ ಲ್ಯಾಂಡರ್ ಇಳಿದಿರುವ ಜಾಗ “ಶಿವಶಕ್ತಿ’ಯ ಸುತ್ತಾ ಪ್ರಜ್ಞಾನ್ ರೋವರ್ ತಿರುಗುವುದನ್ನು ಸೆರೆ ಹಿಡಿಯಲಾಗಿದೆ. ಇಸ್ರೋದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ವಿಡಿಯೋ ಹಂಚಿಕೊಳ್ಳಲಾಗಿದ್ದು, ರೋವರ್ ಯಶಸ್ವಿಯಾಗಿ ಚಂದ್ರನ ರಹಸ್ಯಗಳನ್ನು ಅನ್ವೇಷಿಸುತ್ತಿರುವುದು ಕಂಡು ಬಂದಿದೆ. ಮತ್ತೊಮ್ಮೆ ಪ್ರಶಂಸೆ:
ಭಾರತದ ಸಾಧನೆಯನ್ನು ನೆರೆ ರಾಷ್ಟ್ರ ಪಾಕಿಸ್ತಾನ ಪ್ರಶಂಸಿಸುವುದು ಮುಂದುವರಿಸಿದೆ. ಪಾಕಿಸ್ತಾನದ ವಿದೇಶಾಂಗ ಕಚೇರಿ ವ್ಯವಹಾರಗಳ ವಕ್ತಾರೆ ಮುಮ್ತಾಜ್ ಝಾರಾ ಬಲೂಚ್, ಶ್ರೀಮಂತ ರಾಷ್ಟ್ರಗಳು ಈ ವರೆಗೆ ಸಾಧಿಸಲು ಅಸಾಧ್ಯವಾದದ್ದನ್ನು ಭಾರತ ಕಡಿಮೆ ವೆಚ್ಚದಲ್ಲಿ ಸಾಧಿಸಿ ತೋರಿಸಿದೆ. ಚಂದ್ರಯಾನ-3 ಅತಿದೊಡ್ಡ ವೈಜ್ಞಾನಿಕ ಸಾಧನೆಯಾಗಿದ್ದು, ಅದರ ಸಂಪೂರ್ಣ ಶ್ರೇಯಸ್ಸು ಇಸ್ರೋ ವಿಜ್ಞಾನಿಗಳಿಗೆ ಸಲ್ಲಬೇಕು ಎಂದಿದ್ದಾರೆ.