Advertisement

ವಿದೇಶ ವಿನಿಮಯ ಮೀಸಲು ಐತಿಹಾಸಿಕ ಎತ್ತರಕ್ಕೆ : 379.3 ಬಿಲಿಯ ಡಾಲರ್‌

04:18 PM May 27, 2017 | udayavani editorial |

ಹೊಸದಿಲ್ಲಿ : ಭಾರತದ ವಿದೇಶ ವಿನಿಮಯ ಮೀಸಲು ಇದೇ ಮೇ 19ರಂದು 379.3 ಬಿಲಿಯ ಡಾಲರ್‌ಗಳ ಐತಿಹಾಸಿಕ ಎತ್ತರವನ್ನು ತಲುಪಿರುವುದಾಗಿ ಆರ್‌ಬಿಐ ಮೂಲಗಳು ತಿಳಿಸಿವೆ.

Advertisement

ವಿದೇಶೀ ಹೂಡಿಕೆದಾರರ ಮೂಲಕ ನಿರಂತರವಾಗಿ ಡಾಲರ್‌ ಹರಿದು ಬರುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ಕಳೆದ ಒಂದು ವಾರದಲ್ಲಿ ದೇಶದ ಒಟ್ಟಾರೆ ಮೀಸಲು 4.03 ಬಿಲಿಯ ಡಾಲರ್‌ಗಳಷ್ಟು ಹೆಚ್ಚಾಗಿತ್ತು. ವಿದೇಶೀ ಬಂಡವಾಳ ಶೇರು ಮಾರುಕಟ್ಟೆಗೆ ನಿರಂತರವಾಗಿ ಹರಿದುಬರುತ್ತಿರುವ ಕಾರಣ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ನಿನ್ನೆ ಶುಕ್ರವಾರ ಇದೇ ಮೊದಲ ಬಾರಿಗೆ 31,000 ಅಂಕಗಳ ಗಡಿ ದಾಟಿರುವುದು ಹೊಸ ಸಾರ್ವಕಾಲಿಕ ದಾಖಲೆಯಾಗಿದೆ. ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಹೊಸ ಸಾರ್ವಕಾಲಿಕ ದಾಖಲೆಯ ಎತ್ತರವನ್ನು ತಲುಪಿರುವುದು ಗಮನಾರ್ಹವಾಗಿದೆ. 

ಇದೇ  ವೇಳೆ ಚಿನ್ನ ಮೀಸಲು 20.43 ಬಿಲಿಯ ಡಾಲರ್‌ ಪ್ರಮಾಣದಲ್ಲಿ ಯಥಾವತ್ತಾಗಿ ಉಳಿದುಕೊಂಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next