Advertisement

ಹೇಗಿತ್ತು ಭಾರತದ ಮೊದಲ ಗಣರಾಜ್ಯೋತ್ಸವ ಸಂಭ್ರಮ

10:35 AM Jan 26, 2021 | Team Udayavani |

ಜನವರಿ 26 1950ರಂದು ಭಾರತದ ಸಂವಿಧಾನ ಜಾರಿಗೆ ಬಂದ ದಿನ. ಭಾರತದ ಸ್ವಾತಂತ್ರÂ ಚಳವಳಿಯ ಸಂದರ್ಭದಲ್ಲಿ, ಅಂದರೆ ಜನವರಿ 26, 1929 ರಂದು ಭಾರತ ರಾಷ್ಟ್ರೀಯ ಕಾಂಗ್ರೆಸ್‌ ಲಾಹೋರ್‌ನಲ್ಲಿ ನಡೆದ ಅಧಿವೇಶನದಲ್ಲಿ “ಪೂರ್ಣ ಸ್ವರಾಜ್ಯ’ದ ಧ್ಯೇಯವನ್ನು ಹಾಕಿಕೊಂಡು, ಆ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಘೋಷಿಸಿತ್ತು. ಇದೇ ಕಾರಣಕ್ಕಾಗಿಯೇ ಸ್ವಾತಂತ್ರ್ಯಾನಂತರ ಭಾರತದ ಸಂವಿಧಾನವನ್ನು ಈ ದಿನದಂದೇ ಜಾರಿಗೆ ತರಲಾಯಿತು. ಅಂದಿನಿಂದಲೂ ಗಣರಾಜ್ಯೋತ್ಸವ ದಿನವನ್ನು ಸಂಭ್ರಮದಿಂದ ಆಚರಿಸುತ್ತಾ ಬರಲಾಗುತ್ತಿದೆ. ಆದರೆ ಅಂದಿನ ಆಚರಣೆಗಳಿಗೂ ಇಂದಿನ ಆಚರಣೆಗೂ ಅಜಗಜಾಂತರ ವ್ಯತ್ಯಾಸವಿದೆ. ಈ ವ್ಯತ್ಯಾಸದಲ್ಲಿ ಸಾಮರಿಕವಾಗಿ, ಆರ್ಥಿಕವಾಗಿ ಹಾಗೂ ವಿವಿಧ ಆಯಾಮಗಳಲ್ಲಿ ಬೆಳೆಯುತ್ತಿರುವ ಭಾರತವೂ ಗೋಚರಿಸುತ್ತದೆ..

Advertisement

 

ಡಾ. ರಾಜೇಂದ್ರ ಪ್ರಸಾದ್‌ ಅವರು ರಾಷ್ಟ್ರಪತಿ ಹುದ್ದೆಗೇರುತ್ತಿದ್ದಂತೆಯೇ, 31 ಗನ್‌ ಸೆಲ್ಯೂಟ್‌ ಮಾಡಿ ಗೌರವ ಸೂಚಿಸಲಾಯಿತು.

ಬುಲೆಟ್‌ಪ್ರೂಫ್ ಕಾರಿನಲ್ಲಲ್ಲ, ರಾಷ್ಟ್ರಪತಿಗಳನ್ನು ತೆರೆದ ಸಾರೋಟಿನಲ್ಲೇ ಇರ್ವಿನ್‌ ಸ್ಟೇಡಿಯಂಗೆ ಕರೆದೊಯ್ಯಲಾಯಿತು. ನಂತರ ರಾಜೇಂದ್ರ ಪ್ರಸಾದ್‌ ಸೇನಾ ಜೀಪನ್ನೇರಿ ಭದ್ರತಾ ಪಡೆಗಳಿಂದ ವಂದನೆ ಸ್ವೀಕರಿಸಿ, ಧ್ವಜಾರೋಹಣ ಮಾಡಿದರು.

Advertisement

ಮೊದಲ ಗಣರಾಜ್ಯೋತ್ಸವಕ್ಕೆ ಇಂಡೋನೇಷ್ಯಾ ಅಧ್ಯಕ್ಷ ಸುಕಾರ್ನೋರನ್ನು ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಈ ವಿದ್ಯಮಾನದ ನಂತರ ಇಂಡೊನೇಷ್ಯಾದೊಂದಿಗಿನ ಭಾರತದ ಮೈತ್ರಿ ಬಹಳ ಸುಧಾರಿಸುವಂತಾಯಿತು.

 

5ಗಣರಾಜ್ಯೋತ್ಸವ ಆಚರಣೆಯ ವಿರುದ್ಧ ದೇಶದ ಕೆಲ ಭಾಗಗಳಲ್ಲಿ ಪ್ರತಿರೋಧವೂ ಎದುರಾಗಿತ್ತು. ಕಲ್ಕತ್ತಾದಲ್ಲಿ ಕಮ್ಯುನಿಸ್ಟರು ಪೊಲೀಸರ ಮೇಲೆ ಬಾಂಬ್‌ ದಾಳಿ ನಡೆಸಿದ್ದರು. ಬಾಂಬೆಯಲ್ಲಿ ಇದೇ ಪಕ್ಷ ಸಂವಿಧಾನದಲ್ಲಿ ಕಾರ್ಮಿಕರ ಹಕ್ಕುಗಳನ್ನು ಕಡೆಗಣಿಸಲಾಗಿದೆ ಎಂದು ಪ್ರತಿಭಟಿಸಿತ್ತು. ಇನ್ನು ಅದೇ ದಿನ, ಅನ್ಯ ಕಾರಣಕ್ಕಾಗಿ, ಹೈದ್ರಾಬಾದ್‌ ನಿಜಾಮನ ಹತ್ಯೆ ಪ್ರಯತ್ನದ ಘಟನೆ ನಡೆದು ಸುದ್ದಿಯಾಗಿತ್ತು.

ನಿರ್ದಿಷ್ಟ ಜಾಗವಿರಲಿಲ್ಲ… :

1950ರಿಂದ 1954ರವರೆಗೆ, ಗಣರಾಜ್ಯೋತ್ಸವ ಆಚರಣೆಗೆ ನಿರ್ದಿಷ್ಟ ಜಾಗ ಎನ್ನುವುದಿರಲಿಲ್ಲ. ಮೊದಲು ಕೆಂಪುಕೋಟೆಯಲ್ಲಿ ಗಣರಾಜ್ಯೋತ್ಸವ ಆಚರಣೆಯಾಗಿತ್ತು, ನಂತರ ನ್ಯಾಷನಲ್‌ ಸ್ಟೇಡಿಯಂನಲ್ಲಿ, ಆಮೇಲೆ ಕಿಂಗ್ಸ್‌ವೇ ಕ್ಯಾಂಪ್‌ನಲ್ಲಿ, ನಂತರದ ವರ್ಷದಲ್ಲಿ ರಾಮಲೀಲಾ ಮೈದಾನದಲ್ಲಿ ನಡೆದಿತ್ತು. ಕೊನೆಗೆ 1955ರಿಂದ ರಾಜಪಥವೇ ಗಣರಾಜ್ಯೋತ್ಸವ ಪಥಸಂಚಲನದ ವೇದಿಕೆಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next