Advertisement

ಭಾರತದಲ್ಲಿ 15 ಲಕ್ಷ ದಾಟಿದ ಕೋವಿಡ್ 19 ಪ್ರಕರಣಗಳ ಸಂಖ್ಯೆ

09:42 PM Jul 28, 2020 | Hari Prasad |

ಹೊಸದಿಲ್ಲಿ: ಸೋಮವಾರದಿಂದೀಚೆಗೆ ಭಾರತದಲ್ಲಿ ಒಟ್ಟು 28,652 ಕೋವಿಡ್ 19 ಸೊಂಕು ಪ್ರಕರಣಗಳು ದಾಖಲಾಗಿವೆ.

Advertisement

ಈ ಮೂಲಕ ದೇಶದಲ್ಲಿ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ 15 ಲಕ್ಷದ ಗಡಿಯನ್ನು ದಾಟಿದೆ.

ಸದ್ಯದ ವರದಿಯಂತೆ ಭಾರತದಲ್ಲಿ ಒಟ್ಟು 15,06,380 ಕೋವಿಡ್ 19 ಸೋಂಕಿನ ಪ್ರಕರಣಗಳು ವರದಿಯಾಗಿವೆ.
ಈ ಸಂಖ್ಯೆಯನ್ನು ಕೇಂದ್ರ ಆರೋಗ್ಯ ಸಚಿವಾಲಯವು ಬುಧವಾರದಂದು ಬಹಿರಂಗಗೊಳಿಸುವ ಸಾಧ್ಯತೆಗಳಿವೆ ಎಂದು ‘ಇಂಡಿಯಾ ಟುಡೇ’ ವೆಬ್ ಸೈಟ್ ವರದಿ ಮಾಡಿದೆ.

ತನ್ನ ಈ ಹಿಂದಿನ ವರದಿಯಲ್ಲಿ ಕೇಂದ್ರ ಆರೋಗ್ಯ ಸಚಿವಾಲಯವು ದೇಶದಲ್ಲಿ 14,83,156 ಕೋವಿಡ್ 19 ಪ್ರಕರಣಗಳು ದಾಖಲಾಗಿವೆ ಮತ್ತು 33,425 ಸೋಂಕಿತರು ಸಾವಿಗೀಡಾಗಿದ್ದಾರೆ ಎಂದು ಮಾಹಿತಿ ನೀಡಿತ್ತು. ಮತ್ತು ದೇಶದಲ್ಲಿ ಒಟ್ಟು 9,52,743 ಸೋಂಕಿತರು ಗುಣಮುಖರಾಗಿದ್ದಾರೆ ಎಂದೂ ಈ ವರದಿಯಲ್ಲಿ ಸಚಿವಾಲಯವು ಮಾಹಿತಿ ನೀಡಿತ್ತು.

ದೇಶದಲ್ಲಿ ಕೋವಿಡ್ 19 ಸೋಂಕಿನಿಂದ ಹೆಚ್ಚು ಬಾಧಿತವಾಗಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರವೇ ಮೊದಲ ಸ್ಥಾನದಲ್ಲಿದೆ. ಇಲ್ಲಿ 3,83,723 ಸೋಂಕು ಪ್ರಕರಣಗಳು ದಾಖಲಾಗಿವೆ. ಬಳಿಕದ ಸ್ಥಾನದಲ್ಲಿ ತಮಿಳುನಾಡು ರಾಜ್ಯವಿದೆ. ಇಲ್ಲಿ 2.2 ಲಕ್ಷ ಕೋವಿಡ್ 19 ಸೋಂಕಿತರಿದ್ದಾರೆ.

Advertisement

ಆ ಬಳಿಕದ ಸ್ಥಾನದಲ್ಲಿ 1 ಲಕ್ಷ ಪ್ರಕರಣಗಳೊಂದಿಗೆ ಆಂಧ್ರಪ್ರದೇಶ, ದೆಹಲಿ ಮತ್ತು ಕರ್ನಾಟಕ ರಾಜ್ಯಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next