Advertisement

ಭಾರತ ಸಂವಿಧಾನ ವಿಶ್ವದಲ್ಲಿಯೇ ಶ್ರೇಷ್ಠ: ನ್ಯಾ|ಭೂಸಗೋಳ

01:27 PM Nov 27, 2018 | |

ಸಿಂಧನೂರು: ಸಂವಿಧಾನದಲ್ಲಿ ನಾಗರಿಕರಿಗಾಗಿ ಮೂಲಭೂತ ಹಕ್ಕುಗಳನ್ನು ನೀಡಲಾಗಿದೆ. ಭಾರತದ ಸಂವಿಧಾನ ವಿಶ್ವದಲ್ಲೇ ಶ್ರೇಷ್ಠವಾಗಿದೆ ಎಂದು ಅಪರ ಸಿವಿಲ್‌ ನ್ಯಾಯಾಧೀಶರಾದ ಮಹಾಂತೇಶ ಜಿ. ಭೂಸಗೋಳ ಹೇಳಿದರು ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ನ್ಯಾಯವಾದಿಗಳ ಸಂಘ ಹಾಗೂ ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರ ವಸತಿ ನಿಲಯದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಇತಿಹಾಸದಲ್ಲಿ ಇಂದು ಮಹತ್ವದ ದಿನವಾಗಿದೆ.

Advertisement

ಸಂವಿಧಾನ ಕರಡು ಸಮಿತಿ ಅಧ್ಯಕ್ಷರಾಗಿ ಎಲ್ಲರಿಗೂ ಒಪ್ಪುವಂತ ಸಂವಿಧಾನ ರಚಿಸಿದ ಡಾ| ಬಿ.ಆರ್‌.ಅಂಬೇಡ್ಕರ್‌ ಅವರನ್ನು ಸ್ಮರಿಸುವ ದಿನವಾಗಿದೆ ಎಂದರು.
 
ಭಾರತ ಸಂವಿಧಾನ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಎಂಬ ಮೂರು ಅಂಗಗಳನ್ನು ಹೊಂದಿದೆ. 1930ರಲ್ಲಿ ಇಂಡಿಯನ್‌ ಕಾಂಗ್ರೆಸ್‌ ಭಾರತಕ್ಕೆ ಸ್ವಾತಂತ್ರ್ಯಾವನ್ನು ಘೋಷಣೆ ಮಾಡಲಾಯಿತು. ಅದರ ಸವಿನೆನಪಿಗಾಗಿ ಸಂವಿಧಾನವನ್ನು ಜಾರಿಗೆ ತರಲಾಯಿತು. ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದ್ದು, ಕಾಯ್ದೆ 32 ನ್ನು ಸಂವಿಧಾನದ ಹೃದಯವೆಂದು ಕರೆಯಲಾಗುತ್ತದೆ. ಪ್ರತಿಯೊಬ್ಬರು ಸಂವಿಧಾನವನ್ನು ಗೌರವಿಸುವುದರ ಜೊತೆಗೆ ಕಾನೂನುಗಳನ್ನು ತಿಳಿದುಕೊಂಡು ಜೀವನ
ನಡೆಸಬೇಕು ಎಂದರು. 

ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಜೆ. ರಾಯಪ್ಪ ವಕೀಲ ಮಾತನಾಡಿ, ಹಲವಾರು, ಭಾಷೆ, ಜಾತಿ, ಸಂಸ್ಕೃತಿ ಜನಾಂಗವಿರುವ ದೇಶ ಭಾರತ. ಎಲ್ಲರಿಗೂ ಒಪ್ಪುವಂತ ಸಂವಿಧಾನವನ್ನು ಡಾ| ಬಿ.ಆರ್‌.ಅಂಬೇಡ್ಕರ್‌ ರಚಿಸಿದ್ದಾರೆ. ವಿದ್ಯಾರ್ಥಿಗಳು ಕಾನೂನುಗಳ ಬಗ್ಗೆ ಅಧ್ಯಯನ ಮಾಡಿ ಅದರಡಿ ಜೀವನ ಸಾಗಿಸಿದರೆ ಯಾವುದೇ ಕಷ್ಟಗಳಿಲ್ಲದೆ ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು. ತಾಲೂಕು ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ವಿರುಪಣ್ಣ ನಾಯಕ ದುಮತಿ, ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ ತಾಲೂಕು ಪ್ರಭಾರಿ ಅಧಿಕಾರಿ ಮಹಾಲಿಂಗಪ್ಪ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಜಯಮ್ಮ, ಪತ್ರಕರ್ತರಾದ ಚಿದಾನಂದ ದೊರೆ, ಗೌಡಪ್ಪಗೌಡ ಗುರಡ್ಡಿ ಇದ್ದರು. ಸಂವಿಧಾನ ಕುರಿತು ನ್ಯಾಯವಾದಿ ಭೀಮಶಪ್ಪ ಉಪನ್ಯಾಸ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next